ಬೆಂಗಳೂರಿನ ಖಾಸಗಿ ಟ್ರಸ್ಟ್‌ಗಳಿಗೆ ಹಂಚಲು ತೋರಿಸುತ್ತಿದ್ದ 30 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ

Published : Apr 08, 2024, 04:02 PM IST
ಬೆಂಗಳೂರಿನ ಖಾಸಗಿ ಟ್ರಸ್ಟ್‌ಗಳಿಗೆ ಹಂಚಲು ತೋರಿಸುತ್ತಿದ್ದ 30 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ

ಸಾರಾಂಶ

ಖಾಸಗಿ ಕಂಪನಿಗಳಿಂದ ನೀಡಬೇಕಾದ ಸಿಎಸ್‌ಆರ್‌ ಫಂಡ್ ಬ್ಲಾಕ್‌ ಮನಿಯನ್ನು ಖಾಸಗಿ ಟ್ರಸ್ಟ್‌ಗಳಿಗೆ ನೀಡುವುದಾಗಿ ವಂಚನೆ ಮಾಡುತ್ತಿದ್ದ 5 ಜನರ ಗ್ಯಾಂಗ್‌ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 30 ಕೋಟಿ ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. 

ಬೆಂಗಳೂರು (ಏ.08): ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಿಂದ ನೀಡಬೇಕಾದ ಸಿಎಸ್‌ಆರ್‌ ಫಂಡ್ ಬ್ಲಾಕ್‌ ಮನಿಯನ್ನು ಖಾಸಗಿ ಟ್ರಸ್ಟ್‌ಗಳಿಗೆ ನೀಡುವುದಾಗಿ ವಂಚನೆ ಮಾಡುತ್ತಿದ್ದ 5 ಜನರ ಗ್ಯಾಂಗ್‌ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 30 ಕೋಟಿ ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಕ್ಷಾಂತರ ಖಾಸಗಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ, ಸಾವಿರಾರು ಖಾಸಗಿ ಟ್ರಸ್ಟ್‌ಗಳು ಕೂಡ ಸೇವೆ ಸಲ್ಲಿಸುತ್ತಿವೆ. ಆದರೆ, ಇಲ್ಲೊಂದು ಗ್ಯಾಂಗ್‌ ಖಾಸಗಿ ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್‌ ಫಂಡ್) ಅನ್ನು ಸಂಕಷ್ಟದಲ್ಲಿರುವ ಟ್ರಸ್ಟ್‌ಗಳಿಗೆ ನೀಡುವುದಾಗಿ ಕೋಟಿ ಕೋಟಿ ರೂ. ವಂಚನೆ ಮಾಡುತ್ತಿದ್ದು, ಈಗ ಮಾಲ್ ಸಮೇತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. 

ಬಳ್ಳಾರಿ ಮನೆಯಲ್ಲಿ 5 ಕೋಟಿ ರೂ. ಕ್ಯಾಷ್, 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿ ಪತ್ತೆ: ಯಾವುದಕ್ಕೂ ದಾಖಲೆಗಳಿಲ್ಲ!

ಖಾಸಗಿ ಟ್ರಸ್ಟ್ ಗಳಿಗೆ CSR ಫಂಡ್ ನೀಡೋ ಹೆಸರಲ್ಲಿ ವಂಚಿಸ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ 30 ಕೋಟಿ 91 ಲಕ್ಷ 61 ಸಾವಿರಕ್ಕೂ (31,91,61,000 ರೂ.) ಅಧಿಕ ಮೌಲ್ಯದ ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ. ಇನ್ನು ಐವರು ಬಂಧಿತರು ಈ ಹಿಂದೆಯೂ ಇಂತಹದೇ ಸಾಮಾಜ ಬಾಹಿರ ಕುಕೃತ್ಯಗಳಾದ  ಗ್ಯಾಂಬ್ಲಿಂಗ್, ಹವಾಲಾ, ರೈಸ್ ಪುಲ್ಲಿಂಗ್ ಪ್ರಕರಣಗಳಲ್ಲಿ ಪಾಲ್ಗೊಂಡು ಜೈಲು ಪಾಲಾಗಿದ್ದರು. ಇನ್ನು ಜೈಲಿನಿಂದ ಹೊರಬಂದ ಗ್ಯಾಂಗ ಪುನಃ ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳಿಗೆ ವಂಚಿಸಲು ಗ್ಯಾಂಗ್ ಕಟ್ಟಿಕೊಂಡಿದ್ದರು.

ಸಾರ್ವಜನಿಕರಿಗೆ ಹಾಗೂ ಟ್ರಸ್ಟ್ ಗಳಿಗೆ ನಮ್ಮ ಬಳಿ ನೂರಾರು ಕೋರಿ ರೂಪಾಯಿ ಬ್ಲಾಕ್ ಮನಿ ಇದೆ ಎನ್ನುತ್ತಿದ್ದ ಗ್ಯಾಂಗ್, ನೀವು ಟ್ರಸ್ಟ್‌ಗಳನ್ನು ಮಾಡಿದ್ದರೆ ನಿಮ್ಮ ಟ್ರಸ್ಟ್‌ಗಳಿಗೆ ಲಾಭಾಂಶವಿಲ್ಲದೇ ಹಣ ವರ್ಗಾಯಿಸೋದಾಗಿ ನಂಬಿಸುತ್ತಿದ್ದರು. ಆದರೆ, ನೀವು ಟ್ರಸ್ಟ್‌ಗಳಿಗೆ ಬರುವ ಹಣದಲ್ಲಿ ಶೇ.40 ಪರ್ಸೆಂಟ್ ಹಣವನ್ನು ಕೊಡಬೇಕು ಎಂದು ಹೇಳುತ್ತಿದ್ದರು. ಆದರೆ, ಶೇ.40 ಪರ್ಸೆಂಟ್ ಹಣವನ್ನು ನಗದು ರೂಪದಲ್ಲಿ ಮುಂಗಡವಾಗಿ ನೀಡಿದಲ್ಲಿ ನಿಮಗೆ ಕಂಪನಿಗಳಿಂದ ಶೇ.100 ಹಣ ನೀಡುವುದಾಗಿ ಹೇಳಿ ವಂಚನೆ ಮಾಡುತ್ತಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಿನ ಡೋರ್‌ಗೆ ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತ ಸಾವು!

ಇನ್ನು ಎಲ್ಲ ಟ್ರಸ್ಟ್‌ಗಳಿಗೂ ವಿಡಿಯೋ ಕಾಲ್ ಮಾಡುವ ಮೂಲಕ ತಮ್ಮ ಬಳಿಯಿರುವ ಖೋಟಾನೋಟಿನ ಕಂತೆ, ಕಂತೆ ಹಣವನ್ನ ತೋರಿಸಿ ನಂಬಿಸುತ್ತಿದ್ದರು. ವಂಚಕರ ಗ್ಯಾಂಗ್‌ನಲ್ಲಿ ಸುಧೀರ್, ವಿನಯ್, ಚಂದ್ರಶೇಖರ್, ಕಿಶೋರ್, ತೀರ್ಥ ರಿಷಿ ಸೇರಿ ಐವರನ್ನು ಸಿಸಿಬಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಎಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿ ತಮ್ಮ ಇನ್ನಷ್ಟು ಕುಕೃತ್ಯಗಳ ಬಗ್ಗೆ ಬಾಯಿ ಬಿಡಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!