ಶಾಸಕ ಮಾಡಾಳು ವಿರುಪಾಕ್ಷಪ್ಪಗೆ ಬಿಗ್‌ ರಿಲೀಫ್‌: ಜಾಮೀನು ಮಂಜೂರು ಮಾಡಿದ ಕೋರ್ಟ್

By Sathish Kumar KH  |  First Published Mar 7, 2023, 12:40 PM IST

ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಕೆಎಸ್‌ಡಿಎಲ್‌ ಅಧ್ಯಕ್ಷ ಮಾಡಾಳು ವಿರುಪಾಕ್ಷಪ್ಪ ಮೂರ್ನಾಲ್ಕು ದಿನದಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದರು. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ಮಂಜೂರು ಮಾಡಿದೆ.


ಬೆಂಗಳೂರು (ಮಾ.07): ಲೋಕಾಯುಕ್ತ ದಾಳಿಯ ವೇಳೆ ಕೆಎಸ್‌ಡಿಎಲ್‌ ಅಧ್ಯಕ್ಷ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಪುತ್ರ ಮಾಡಾಳು ಪ್ರಶಾಂತ್‌ ಅವರು ಲಂಚದ ಹಣ ಸ್ವೀಕರಿಸುವ ವೇಲೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್‌ ಜಾರಿಗೊಳಿಸಲಾಗಿತ್ತು. ಆದರೆ, ಮೂರ್ನಾಲ್ಕು ದಿನದಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿರುವ ಮಾಡಾಳು ವಿರುಪಾಕ್ಷಪ್ಪ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಈಗ ಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ.

ಲೋಕಾಯುಕ್ತ ದಾಳಿಯ ವೇಳೆ ಕೋಟ್ಯಂತರ ರೂ, ಹಣದ ಸಮೃತವಾಗಿ ಸಿಕ್ಕಿಬಿದ್ದ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಪುತ್ರ ಮಾಡಾಳು ಪ್ರಶಾಂತ್‌ ಅವರನ್ನು ವಿಚಾರಣೆ ಮಾಡಲಾಗಿದೆ. ಈ ವೇಳೆ ಕೆಎಸ್‌ಡಿಎಲ್‌ ಅಧ್ಯಕ್ಷರಾದ ಮಾಡಾಳು ವಿರುಪಾಕ್ಷಪ್ಪ ಅವರು ಟೆಂಡರ್‌ ವಿಚಾರವಾಗಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಪ್ರಾಥಮಿಕ ಮಾಹಿತಿ ಇತ್ತು. ಆದರೆ, ಈ ಬಗ್ಗೆ ಲೋಕಾಯುಕ್ತ ಪೊಲೀಸರು ಹಣ ಕೊಡಲು ಬಂದ ಕಂಪನಿಯ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಂಪನಿಯ ಮೇಲಿದ್ದ ಕೇಸ್‌ ಒಂದನ್ನು ಖುಲಾಸೆಗೊಳಿಸಲು ಹಣ ನೀಡಲಾಗುತ್ತಿದೆ ಎಂದು ಬಾಯಿ ಬಿಟ್ಟಿದ್ದರು. 

Tap to resize

Latest Videos

ಪುತ್ರನ ಲಂಚಾವತಾರ: ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

ಈ ಹಿನ್ನೆಲೆಯಲ್ಲಿ ಕೆಎಸ್‌ಡಿಎಲ್‌ ಅಧ್ಯಕ್ಷ ಮಾಡಾಳು ವಿರುಪಾಕ್ಷಪ್ಪ ಅವರನ್ನು ಬಂಧಿಸಲು ಕೋರ್ಟ್‌ ಸೂಚನೆ ನೀಡತ್ತು. ಆದರೆ, ಪೊಲೀಸರ ಕೈಗೆ ಸಿಗದೇ ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡು ವಿರುಪಾಕ್ಷಪ್ಪ ಮಧ್ಯಂತರ ಜಾಮೀನು ನೀಡುವಂತೆ ಕೋರಿ ನ್ಯಾಆಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈಗ ಈ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್‌ ಎರಡು ದಿನದೊಳಗೆ ಹಾಜರಾಗುವಂತೆ ಸೂಚನೆ ನೀಡಿದೆ. ಮೂರ್ನಾಲ್ಕು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವಕೀಲರ ಮೂಲಕ ನ್ಯಾಯಾಲಯ ಪ್ರಕರಣ ಎದುರಿಸುತ್ತಿದ್ದ ಶಾಸಕ ವಿರುಪಾಕ್ಷಪ್ಪ ಇನ್ನುಮುಂದಾದರೂ ಕೋರ್ಟ್‌ಗೆ ಹಾಜರಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.

ಯಾವುದೇ ಹಣ ಪಡೆದಿಲ್ಲವೆಂದು ವಕೀಲರ ವಾದ: ಇಂದು ನ್ಯಾಯಾಲಯದಲ್ಲಿ ಲೋಕಾಯುಕ್ತ ದಾಳಿಯ ವೇಳೆ ಸಿಕ್ಕ ಹಣದ ಕುರಿತು ವಾದ ಮಾಡಿದ ವಿರುಪಾಕ್ಷಪ್ಪ ಪರ ವಕೀಲರು, ಕೆಎಸ್‌ಡಿಎಲ್‌ ಖರೀದಿ ಆದೇಶ ಈಗಾಗಲೇ ಹೊರಡಿಸಲಾಗಿದ್ದು ಯಾವುದೇ ಹಣ ಪಡೆದಿಲ್ಲ. BWSSB ಅಧಿಕಾರಿ ಕೆಎಸ್ಡಿಎಲ್ ಪರವಾಗಿ ಹಣ ಪಡೆದಿದ್ದಾರೇಯೇ.? BWSSB ಹಾಗೂ ಕೆಎಸ್ಡಿಎಲ್ ಗೂ ಏನ್ ಸಂಬಂಧ.? ವಿರೂಪಾಕ್ಷಪ್ಪಗೆ ಹಣ ಕೇಳಿದ ಸಾಕ್ಷ್ಯಗಳು ಇವೆಯೇ..? ಎಂದು ನ್ಯಾಯಾಧೀಶರು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲರು, ವಿರೂಪಾಕ್ಷಪ್ಪ ವಿರುದ್ದ ಯಾವುದೇ ಸಾಕ್ಷ್ಯಗಳು ಇಲ್ಲ. ಟೆಂಡರ್ ನೀಡುವ ವಿಚಾರದಲ್ಲಿ ಯಾವುದೇ ಪಾತ್ರ ಇಲ್ಲ. ಲಂಚಕ್ಕೆ ಬೇಡಿಕೆ‌ ಇಟ್ಟಿರುವುದು ವಿರೂಪಾಕ್ಷಪ್ಪ ಅಲ್ಲ.. ಅವರ ಮಗ ಅಂತನೇ ಕೇಸ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ.

ಆಪರೇಷನ್ ಮಾಡಾಳ್‌: ಸಹಾಯ ಮಾಡಿ, ತಿಮಿಂಗಲಗಳನ್ನ ಹಿಡಿದು ಹಾಕ್ತೇವೆ!

48 ಗಂಟೆಗೆ ಒಳಗೆ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ: ಮಾಡಾಳು ವಿರುಪಾಕ್ಷಪ್ಪ ಅವರಿಗೆ ಅನಾರೋಗ್ಯ ಇದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. 74 ವರ್ಷದ ವ್ಯಕ್ತಿ ಆಗಿರುವುದರಿಂದ ಜಾಮೀನು ನೀಡಿ. ನಾಳೆ ಹೈಕೋರ್ಟ್‌ಗೆ ರಜೆ ಇದೆ. ಇಂದೇ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇನ್ನು 48 ಗಂಟೆಗೆ ಒಳಗೆ ತನಿಖಾಧಿಕಾರಿ ಮುಂದೆ ವಿರುಪಾಕ್ಷಪ್ಪ ಅವರು ಹಾಜರಾಗಲು ಹೈಕೋರ್ಟ್ ಸೂಚನೆ ನೀಡಿದೆ. ಅರ್ಜಿಯ ಅಂತಿಮ ಆದೇಶ ಬರುವವರೆಗೂ ಜಾಮೀನು ಇರುತ್ತದೆ. ಇನ್ನು ಹೈಕೋರ್ಟ್‌ನಿಂದ ಲೋಕಾಯುಕ್ತಕ್ಕೆ‌ ನೋಟಿಸ್ ನೀಡಲಾಗಿದ್ದು, ವಿವರವಾದ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ. ವಿರೂಪಾಕ್ಷಪ್ಪ ಅವರ ವಿರುದ್ಧದ ಸಾಕ್ಷಿಗಳನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿ ಎಂದು ಸೂಚಿಸಿದೆ.

click me!