ಕೋಲಾರ ಸಂಸದರು, ಪೊಲೀಸರಿಂದ ಕಿರುಕುಳ: ಅಂಬೇಡ್ಕರ್‌ ಸಂಘಟನೆಯ ಸಂದೇಶ್ ಆತ್ಮಹತ್ಯೆಗೆ ಯತ್ನ

By Sathish Kumar KH  |  First Published Mar 7, 2023, 11:06 AM IST

ರಾಜ್ಯದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೋಲಾರದ ಸಂಸದರು ಹಾಗೂ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಾ.ಬಿ.ಆರ್. ಅಂಬೇಡ್ಕರ್‌ ಸೇವಾ ಸಮಿತಿ ರಾಜ್ಯಾಧ್ಯಕ್ಷ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.


ಕೋಲಾರ (ಮಾ.07): ರಾಜ್ಯದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೋಲಾರದ ಸಂಸದರು ಹಾಗೂ ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಾ.ಬಿ.ಆರ್. ಅಂಬೇಡ್ಕರ್‌ ಸೇವಾ ಸಮಿತಿ ರಾಜ್ಯಾಧ್ಯಕ್ಷ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಹೌದು, ಕೋಲಾರದ ಅಂಬೇಡ್ಕರ್‌ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಸಾಮಾನ್ಯವಾಗಿ ಸಂಘಟನೆಗಳನ್ನು ಕಟ್ಟಿಕೊಂಡು ಅವರು ಗುಂಪಾಗಿ ಬಂದು ನಮಗೆ ಕಿರುಕುಳ ನೀಡುತ್ತಾರೆ ಎಂಬ ಹಲವು ಆರೋಪಗಳನ್ನು ನಾವು ಕೇಳಿದ್ದೆವೆ ಮತ್ತು ಕೆಲವು ಘಟನೆಗಳನ್ನು ಕಣ್ಣಾರೆ ಕಂಡಿದ್ದೇವೆ. ಆದರೆ, ಕೋಲಾರದಲ್ಲೊಬ್ಬ ಯುವಕ ಸಂಘಟನೆ ಮಾಡಿಕೊಂಡು ವಿವಿಧ ಕಾರ್ಯಗಳಲ್ಲಿ ಸಕ್ರೊಯವಾಗಿ ಪಾಲ್ಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಆತನಿಗೆ ಕೆಲವು ಗಣ್ಯ ವ್ಯಕ್ತಿಗಳು ಹಾಗೂ ಪೊಲೀಸರು ನೀಡುತ್ತಿರುವ ಕಿರುಕುಳ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

Tap to resize

Latest Videos

ಬೆಂಗಳೂರು - ಮೈಸೂರು ದಶಪಥ ಕ್ರೆಡಿಟ್‌ ವಾರ್‌: ಜೆಡಿಎಸ್‌ ಆಯ್ತು, ಈಗ ಕಾಂಗ್ರೆಸ್‌ ಸರದಿ!

ಕಿಡ್ನಾಪ್‌ ಪ್ರಕರಣದಲ್ಲಿ ಜೈಲು ಪಾಲು: ಅಂಬೇಡ್ಕರ್‌ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಸಂದೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಯುವಕ ಆಗಿದ್ದಾನೆ. ಇತ್ತೀಚೆಗೆ ಕಿಡ್ನಾಪ್ ಪ್ರಕರಣವೊಂದರಲ್ಲಿ ಈ ಯುವಕ ಜೈಲು ಸೇರಿದ್ದನು. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನವೇ ಡೆತ್ ನೋಟ್ ಬರೆದಿಟ್ಟು ವಿಷವನ್ನು ಸೇವಿಸಿದ್ದಾರೆ. ಕೂಡಲೇ ಸ್ಥಳೀಯರು ಆತನನ್ನು ಗಮನಿಸಿ ತೀವ್ರ ಅಸ್ವಸ್ಥನಾಗಿದ್ದನ್ನು ಕಂಡು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈಗ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾನೆ ಎಂದು ತಿಳಿದುಬಂದಿದೆ. 

ಸಂಸದರಿಂದ ಭಾರೀ ಷಡ್ಯಂತ್ರ ಆರೋಪ:  ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತ್‌ನೋಟ್‌ನಲ್ಲಿ ಜಿಲ್ಲೆಯ ಸಂಸದರು ಹಾಗೂ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಯತ್ನ ಮಾಡಿದ್ದಾನೆ. ಕೋಲಾರ ಲೋಕಸಭಾ ಕ್ಷೇತ್ರದ ಸಂಸದರು ನನ್ನ ವಿರುದ್ಧ ಶಡ್ಯಂತ್ರ ನಡೆಸಿ, ಸುಳ್ಳು ಆರೋಪವನ್ನು ಹೊರಿಸಿ ಮರ್ಯಾದೆ ತೆಗೆದಿದ್ದಾರೆ. ದಲಿತಪರ ಹೋರಾಟದ ನಿಟ್ಟಿನಲ್ಲಿ ನಾನು ಮನೆ ಮನೆಗೆ ಹೋಗಿ ಕರಪತ್ರವನ್ನು ಹಂಚಿಕೊಂಡು ಹೋರಾಟ ಮಾಡುತ್ತಾ ಗೌರವವನ್ನು ಸಂಪಾದಿಸಿದ್ದೆನು. ಆದರೆ, ಷಡ್ಯಂತ್ರದಿಂದ ಎಲ್ಲ ಗೌರವ ಹಾಳು ಮಾಡಿದ್ದಾರೆ. ಈಗಾಗಲೇ ನಾನು ಹೇಳಿದಂತೆ ಮರ್ಯಾದೆ ಯಾವಾಗ ಹೋಗುತ್ತದೆಯೋ ಆಗ ಜೀವಂತವಾಗಿ ಇರುವುದಿಲ್ಲ ಎಂಬ ಮಾತಿಗೆ ಬದ್ಧವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾನೆ.

ಸಿದ್ದರಾಮಯ್ಯ ಪರ ಹೇಳಿಕೆ ಕೊಟ್ಟಿದ್ದರಿಂದ ಕಿರುಕುಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ವಿರೋಧಿ ಅಲ್ಲ ಎಂದು ನಾನು ಹೇಳಿಕೆ ಕೊಟ್ಟಿದ್ದರಿಂದಲೇ ನನಗೆ ಈ ಪರಿಸ್ಥಿತಿ ಬಂದಿದೆ. ನಾನು ಕಷ್ಟದಲ್ಲಿದ್ದ ವೇಳೆ ನನಗೆ ಯಾರೋಬ್ಬರೂ ಸಹಾಯ ಮಾಡಿಲ್ಲ. ಈ ಸಮಾಜದಲ್ಲಿ ನಾನು ಯಾವತ್ತೂ ತಲೆ ಬಾಗಿಲ್ಲ. ಆದರೆ, ಈಗ ನಾನು ಮಾಡದ ತಪ್ಪಿಗೆ ಮರ್ಯಾದೆ ತೆಗೆದಿದ್ದಾರೆ. ಎಂತಹ ಕಷ್ಟವಿದ್ದರೂ ನಾನು ಹೋರಾಟ ಮಾಡಿ ಗೆಲ್ಲುತ್ತೇನೆ. ಆದರೆ, ಇರುವ ಮರ್ಯಾದೆಯನ್ನೇ ಕಳೆದುಕೊಂಡ ನಂತರ ಮುಖ ತೋರಿಸಲಾಗದೇ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾನೆ. ಈ ಘಟನೆ ಕುರಿತು ಕೋಲಾರ ನಗರ ಪೊಲೀಸ್‌ ಠಾಣಾ‌ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Assembly Election: ನಾನು ಸಾಯುವವರೆಗೂ ಆರ್‌ಎಸ್‌ಎಸ್‌ ವಿರೋಧಿಸುತ್ತೇನೆ: ಸಿದ್ದರಾಮಯ್ಯ

ದುರ್ಘಟನೆಗೆ ಸ್ಪಂದಿಸಿದ ಸಿದ್ದರಾಮಯ್ಯ: "ಕೋಲಾರದ ದಲಿತ ಮುಖಂಡ ಸಂದೇಶ್ ಅವರ ಮೇಲೆ ದುರುದ್ದೇಶಪೂರಿತವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಮಾನಸಿಕ ಹಿಂಸೆ ನೀಡಿ ಆತನನ್ನು ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಮಾಡಿರುವವರು ಯಾರೇ ಆಗಲಿ ಅಂಥವರನ್ನು ತಕ್ಷಣ ಬಂಧಿಸಿ, ಪ್ರಕರಣದ ಸೂಕ್ತ ತನಿಖೆ ನಡೆಸಿ ಸಂತ್ರಸ್ತನಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು" ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಸಂತ್ರಸ್ತನಿಗೆ ನ್ಯಾಯ ಒದಗಿಸಬೇಕು. ಸಂದೇಶ್ ಜೊತೆ ನಾನಿದ್ದೇನೆ. ಜೊತೆಗೆ ಕೋಲಾರ ಕ್ಷೇತ್ರದಲ್ಲಿ ದಲಿತ ವಿರೋಧಿ ಸಿದ್ದರಾಮಯ್ಯ ಎಂದು ಪ್ರಚಾರ ಮಾಡುತ್ತಿರುವುದರಿಂದ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಪರವಾಗಿ ನಿಂತಿದ್ದಾರೆ.

ಕೋಲಾರದ ದಲಿತ ಮುಖಂಡ ಸಂದೇಶ್ ಅವರ ಮೇಲೆ ದುರುದ್ದೇಶಪೂರಿತವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಮಾನಸಿಕ ಹಿಂಸೆ ನೀಡಿ ಆತನನ್ನು ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಮಾಡಿರುವವರು ಯಾರೇ ಆಗಲಿ ಅಂಥವರನ್ನು ತಕ್ಷಣ ಬಂಧಿಸಿ, ಪ್ರಕರಣದ ಸೂಕ್ತ ತನಿಖೆ ನಡೆಸಿ ಸಂತ್ರಸ್ತನಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು.

— Siddaramaiah (@siddaramaiah)
click me!