ಹಸುವಿನ ಪೋಸ್ಟ್‌ ಮಾರ್ಟಂಗೆ ಲಂಚ ಕೇಳಿ ಲೋಕಾಯುಕ್ತ ಬಲೆಗೆ ಬಿದ್ದ ಪಶುವೈದ್ಯ

By Sathish Kumar KHFirst Published May 23, 2023, 3:32 PM IST
Highlights

ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹದ್ದೇ ಘಟನೆಯಲ್ಲಿ ಅಂದರೆ ಸಾವನ್ನಪ್ಪಿದ ಹಸಿವಿನ ಮರಣೋತ್ತರ ಪರೀಕ್ಷೆಗೆ (Post mortem) ಲಂಚವನ್ನು ಕೇಳಿದ ಪಶು ವೈದ್ಯಾಧಿಕಾರಿ ಈಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಚಿತ್ರದುರ್ಗ (ಮೇ 23): ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮಾನವೀಯತೆ ಮರೆದು ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹದ್ದೇ ಘಟನೆಯಲ್ಲಿ ಅಂದರೆ ಸಾವನ್ನಪ್ಪಿದ ಹಸಿವಿನ ಮರಣೋತ್ತರ ಪರೀಕ್ಷೆಗೆ (Post mortem) ಲಂಚವನ್ನು ಕೇಳಿದ ಪಶು ವೈದ್ಯಾಧಿಕಾರಿ ಈಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಕಳೆದ ಐದಾರು ವರ್ಷಗಳಿಂದ ನಿಶ್ವಚಲವಾಗಿದ್ದ ಲೋಕಾಯುಕ್ತ ಇಲಾಖೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರ್ವಜನಿಕರಿಂದ ಸುಲಿಗೆ ಮಾಡುವ ಅಧಿಕಾರಿಗಳ ಮೇಲೆ ದಾಳಿ ಮಾಡಿ ತಕ್ಕ ಶಿಕ್ಷೆಯನ್ನು ನೀಡುವಲ್ಲಿ ಲೋಕಾಯುಕ್ತ ಇಲಾಖೆ (Lokayukta Department) ಕಾರ್ಯಪ್ರವೃತ್ತವಾಗಿದೆ. ಇನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಮೃತ‌ ಹಸುವಿನ ಪೋಸ್ಟ್ ಮಾರ್ಟ್ಂ ರಿಪೋರ್ಟ್ (Cattle post mortem Report) ನೀಡಲು ಪಶು ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ರೈತರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚವನ್ನು ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಲಗಿದ್ದಾಗ ಹಾವು ಕಚ್ಚಿದೆ ಅಂದ್ರೂ ಆಸ್ಪತ್ರೆಗೆ ಸೇರಿಸಲಿಲ್ಲ: ಎದ್ದೇಳುವಷ್ಟರಲ್ಲಿ ಹೆಣವಾಗಿದ್ದ ಮಗಳು

ರೈತರಿಂದ 7 ಸಾವಿರ ರೂ. ಕೇಳಿದ ವೈದ್ಯ: ಚಿಕ್ಕಜಾಜೂರು ಪಶು ಆಸ್ಪತ್ರೆಯ (veterinary hospital doctor) ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಈಗ ಕಂಬಿ ಹಿಂದಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು (Chitradurga district Chikkajajuru)  ಗ್ರಾಮದಲ್ಲಿ ಲೋಕಾಯುಕ್ತ ದಾಳಿ (Lokayukta Raid) ನಡೆಸಲಾಗಿದೆ. ಕಾಗಳಗೆರೆ ಗ್ರಾಮದ ರೈತರಾದ ಎಸ್.ಸ್ವಾಮಿ ಎಂಬುವರ ಬಳಿ ಹಸುವಿನ ಮರಣೋತ್ತರ ಪರೀಕ್ಷೆಗೆ ಲಂಚ ಸ್ವೀಕಾರ ಮಾಡಿದ್ದಾರೆ. ಒಟ್ಟು 7 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಶು ವೈದ್ಯಾಧಿಕಾರಿ, ಲಂಚ ಸ್ವೀಕಾರ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.

ದಂಧೆ ಮಾಡಿಕೊಂಡ ವೈದ್ಯರು: ರಾಜ್ಯದಲ್ಲಿ ಪಶುಗಳಿಗೆ (ದನ- ಕರುಗಳಿಗೆ) ಇತ್ತೀಚೆಗೆ ಕಾಣಿಸಿಕೊಂಡ ಚರ್ಮಗಂಟು (lumpy skin disease) ರೋಗದಿಂದ ಹಸುಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ಹಸುಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ  ನೀಡುವುದಾಗಿ ಘೋಷಣೆ ಮಾಡಲಾಗಿದೆ. ಆದ್ದರಿಂದ ಗ್ರಾಮೀಣ ಭಾಗಗಳಲ್ಲಿ ರೈತರ ಹಸುಗಳು ಚರ್ಮಗಂಟು ರೋಗ ಹಾಗೂ ಇನ್ನಿತರೆ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದರೆ ಹಸುಗಳ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕು. ಆದರೆ, ಹೀಗೆ ಪೋಸ್ಟ್‌ ಮಾರ್ಟಂ ಮಾಡಿ ವರದಿ ಕೊಡುವಂತೆ ಕೇಳುವ ರೈತರಿಂದ ವೈದ್ಯರು ಭಾರಿ ಪ್ರಮಾಣದ ಲಂಚವನ್ನು ಕೇಳುತ್ತಿದ್ದಾರೆ. 

Belagavi: ಮನೆ ಮುಂದಿನ ಹೈಟೆನ್ಷನ್‌ ವೈರ್‌ ತಾಗಿ 13 ವರ್ಷದ ಬಾಲಕಿ ದುರಂತ ಸಾವು!

ಮೃತ ಹಸುಗೆ 20 ಸಾವಿರ ರೂ. ನೆರವು: ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಮ ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಉಳುಮೆ ಮಾಡುವ ಎತ್ತು 30 ಸಾವಿರ, ಆಕಳು 20 ಸಾವಿರ ಮತ್ತು ಕರು ಸತ್ತರೆ  5 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಜಾನುವಾರುಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರವನ್ನು ನೇರವಾಗಿ (ನೇರ ನಗದು ವರ್ಗಾವಣೆ) ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಪಶು ವೈದ್ಯಕೀಯ ಇಲಾಖೆಯಿಂದ ತುರ್ತಾಗಿ ಪರಿಹಾರ ನೀಡುವ ಕಾರ್ಯ ನಡೆದಿದೆ.

click me!