Bengaluru Crime: ಸೋದರ ಮಾವನಿಂದಲೇ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆ

By Sathish Kumar KH  |  First Published Jan 2, 2023, 7:28 PM IST

ಬೆಂಗಳೂರನ್ನು ಬೆಚ್ಚಿ ಬೀಳಿಸಿದ ವಿದ್ಯಾರ್ಥಿನಿ ಕೊಲೆ ಪ್ರಕರಣ
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತರಗತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಹೊರ ಕರೆದು ಚಾಕು ಚುಚ್ಚಿದ
ವರಸೆಯಲ್ಲಿ ಸೋದರತ್ತ ಮಗ ಆಗಿದ್ದು, ಲಯಸ್ಮಿತಾಳ ಹಿಂದೆ ಬಿದ್ದಿದ್ದ


ಬೆಂಗಳೂರು (ಜ.02): ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಗೆ ಕರೆಸಿಕೊಂಡು ಬರೋಬ್ಬರಿ 10 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಪಾತಕಿ ಆಕೆಯ ಸ್ವಂತ ಸೋದರತ್ತೆಯ ಮಗನೇ ಆಗಿದ್ದಾನೆ. ವರಸೆಯಲ್ಲಿ ಮಾವ ಆಗಬೇಕಿದ್ದು, ವಿದ್ಯಾರ್ಥಿನಿಯ ಜೀವವನ್ನೇ ಮುಗಿಸಿಬಿಟ್ಟಿದ್ದಾನೆ. 

ಇನ್ನು ಸಾವನ್ನಪ್ಪಿದ ವಿದ್ಯಾರ್ಥಿನಿ ಲಯಸ್ಮಿತಾ (19) ಮುಳಬಾಗಿಲು ಗುಟ್ಟಹಳ್ಳಿ ನಿವಾಸಿ ಆಗಿದ್ದಳು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ್ದ ಈಕೆ ಓದಿನಲ್ಲಿ ಬಹಳ ಚುರುಕಾಗಿದ್ದಳು. ನಂತರ ಹೆಚ್ಚಿನ ವ್ಯಾಸಂಗಕ್ಕೆಂದು ಸಾಲ-ಸೋಲ ಮಾಡಿಕೊಂಡು ಬಂದು ಬೆಂಗಳೂರಿನ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಟೆಕ್‌ ತತಗರಿಗೆ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿದ್ದಳು. ಆದರೆ, ಜವರಾಯನಂತೆ ಬಂದ ಸೋದರತ್ತೆಯ ಮಗ ಹಾಗೂ ಮಾವ ಪವನ್‌ ಕಲ್ಯಾಣ್‌ ಕಾಲೇಜಿನ ತರಗತಿಯಲ್ಲಿ ಕುಳಿತಿದ್ದ ಲಯಸ್ಮಿತಾಳನ್ನು ಕರೆದು ಚಾಕುವನ್ನು ಚುಚ್ಚಿ ಕೊಲೆಗೈದಿದ್ದಾನೆ. ಹಾಡ ಹಗಲೇ ಕಾಲೇಜಿನಲ್ಲಿ ದುರ್ಘಟನೆ ನಡೆದಿದ್ದು, ಇಡೀ ಕಾಲೇಜಿನ ವಿದ್ಯಾರ್ಥಿಗಳು ಘಟನೆ ನೋಡಿ ಬೆಚ್ಚಿ ಬಿದ್ದಿದ್ದಾರೆ.

Tap to resize

Latest Videos

Bengaluru Crime: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರೀತಿ ವಿಚಾರಕ್ಕೆ ಎಲ್ಲರೆದುರೇ ವಿದ್ಯಾರ್ಥಿನಿ ಮರ್ಡರ್‌

ಮಾವ ಪವನ್‌ ನಂಬರ್‌ ಬ್ಲಾಕ್‌ ಮಾಡಿದ್ದಳು: ಲಯಸ್ಮಿತಾ ತಾಯಿ ರಾಜೇಶ್ವರಿ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಮಗಳನ್ನು ಕೊಲ್ಲಲಾಗಿದೆ. ಕಾಲೇಜಿಗೆ ಇತ್ತೀಚೆಗೆ ಸೇರಿಸಲಾಗಿತ್ತು. ಪವನ್ ಕಲ್ಯಾಣ್ ನಮ್ಮ ದೂರದ ಸಂಬಂಧಿ ಆಗಿದ್ದಾನೆ.  ಅವನ ಮೊಬೈಲ್ ನಲ್ಲಿ ನನ್ನ ಮಗಳ ಡಿಪಿ ಫೋಟೋ ಹಾಕಲಾಗಿತ್ತು. ಅವನ ನಂಬರ್ ಮಗಳು ಬ್ಲಾಕ್ ಮಾಡಿದ್ದಳು. ವರಸೆಯಲ್ಲಿ ಅವನು ಸೋದರತ್ತೆ ಮಗ ಆಗ ಬೇಕು. ಇವತ್ತು ಬೆಳಿಗ್ಗೆ 8 ಗಂಟೆ ನನ್ನ ಜೊತೆ ಮಾತನಾಡಿದ್ದಳು. ದಿನಕ್ಕೆ ನಾಲ್ಕು ಸರಿ ಮಾತನಾಡುತ್ತಿದ್ದಳು ನನ್ನ ಜೊತೆ. ನಿನ್ನೆ ನನ್ನ ಮಗನ ಮನೆಕೆ ಆರ್ ಪುರಂಗೆ ಬಂದಿದ್ದಾಳೆ. ಪ್ರೆಸಿಡೆನ್ಸಿ ಕಾಲೇಜಿನ ಪ್ರಿನ್ಸಿಪಾಲ್ ನಮಗೆ ಒಂದು ಮಾತು ಹೇಳಿಲ್ಲ. ಕಾಲೇಜಿ ಎರಡು ಕಿಲೋ ದೂರದಲ್ಲೆ ಪಿಜಿ ಮಾಡಿದ್ದೆ ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳ ಹಿಂದೆ ತಂದೆ ಸಾವು: ತಂದೆ ನಾಗರಾಜ್‌ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಕಳೆದ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಇನ್ನು ಲಯಸ್ಮಿತಾ ಸೇರಿ ಒಟ್ಟು ಮೂರು ಹೆಣ್ಣು ಮಕ್ಕಳಿದ್ದು, ಅವರ ತಾಯಿ ರಾಜೇಶ್ವರಿ ಜೊತೆ ವಾಸವಿದ್ದರು. ಒಂದು ತಿಂಗಳ ಹಿಂದೆ ಕಾಲೇಜಿಗೆ ಸೇರಿದ್ದು, ಹಾಸ್ಟೆಲ್ ನಲ್ಲಿ ವಾಸವಿದ್ದಳು. ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿರುವ ಕುಟುಂಬ ತಂದೆ ಸಾವಿನ ಬಳಿಕ ಚಿಕ್ಕಪ್ಪ ದೊಡ್ಡಪ್ಪ ಅವರ ನೆರವಿನಿಂದ ಮನೆ ಸಂಸಾರ ನಡೆಯುತ್ತಿತ್ತು. 

ಅರಳುವ ಮುನ್ನವೇ ಜೀವನ ಅಂತ್ಯ: ಲಯಸ್ಮಿತಾಳನ್ನು ಅವಳ ಮಾವ ಪವನ್‌ ಕಲ್ಯಾಣ್‌ ಪ್ರೀತಿ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಆದರೆ, ಓದಿನಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಆಗಿಂದಾಗ್ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಮಾವನ ಫೋನ್‌ ನಂಬರ್‌ ಅನ್ನು ಬ್ಲಾಕ್‌ ಮಾಡಿದ್ದಳು. ಇನ್ನು ಕಾಲೇಜಿಗೆ ಬಂದು ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ ಮಾವ ಪವನ್‌ ಕಲ್ಯಾಣ್‌ (23) ಕೂಡ ವಿದ್ಯಾರ್ಥಿಯಾಗಿದ್ದು, ಬೇರೊಂದು ವಿಶ್ವವಿದ್ಯಾಲಯದಲ್ಲಿ ಬಿಸಿಎ ಅಭ್ಯಾಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಲಯಸ್ಮಿತಾಳನ್ನು ಕೊಲೆ ಮಾಡಿದ ನಂತರ ತಾನೂ ಮೂರ್ನಾಲ್ಕು ಬಾರಿ ಚಾಕು ಚುಚ್ಚಿಕೊಂಡಿದ್ದಾನೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆಯಿಂದ ಇಬ್ಬರ ಜೀವನ ಅರಳುವ ಮುನ್ನವೇ ಕಮರಿ ಹೋದಂತಾಗಿದೆ. 

click me!