ಬೆಂಗಳೂರಿನಲ್ಲಿ ಲೀವ್ ಇನ್ ಪಾರ್ಟ್ನರ್ ಕ್ರೈಂ, ಗೆಳತಿ ಮಾರ್ಫ್ ಫೋಟೋ ಹರಿಬಿಟ್ಟ ಬಾಯ್‌ಫ್ರೆಂಡ್!

By Suvarna News  |  First Published Oct 11, 2023, 3:38 PM IST

ಲೀವ್ ಇನ್ ರಿಲೇಶನ್‌ಶಿಪ್ ಕ್ರೈಂ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಕೆಲಕಾಲದಿಂದ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿರುವ ಗೆಳತಿಯ ಫೋಟೋಗಳನ್ನೇ ಮಾರ್ಫ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಗೆಳತಿಯ ಅಶ್ಲೀಲ ಫೋಟೋದಿಂದ ಊರಿಗೆ ಮರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
 


ಬೆಂಗಳೂರು(ಅ.11) ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಸಂಬಂಧಗಳು ಗಟ್ಟಿಯಾಗುವುದಕ್ಕಿಂತ ಹೆಚ್ಚಾಗಿ ಸಮಸ್ಯೆಗಳೇ ಹೆಚ್ಚಾಗುತ್ತಿದೆ. ಪ್ರತಿ ದಿನ ಹಲವು ಪ್ರಕರಣಗಳು ದಾಖಲಾಗುತ್ತಿದೆ. ಇನ್ನು ಹಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಮುನ್ನವೇ ಮತ್ತೊಂದು ತಿರುವು ಪಡೆದಿರುತ್ತದೆ. ಇದೀಗ ಬೆಂಗಳೂರಿನಲ್ಲಿ ಲೀವ್ ಪಾರ್ಟ್ನರ್ ನಡೆಸಿದ ಕ್ರೈಂ ಬೆಳಕಿಗೆ ಬಂದಿದೆ. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಜೊತೆಯಾಗಿರುವ ಗೆಳತಿ ಫೋಟೋವನ್ನೇ ಎಡಿಟ್ ಮಾಡಿ ಅಶ್ಲೀಲ ಚಿತ್ರಗಳಾಗಿ ಮಾಡಿದ್ದಾನೆ. ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಘಟನೆ ನಡೆದಿದೆ. ಈ ಕುರಿತು ಯುವತಿ ನೀಡಿದ ದೂರಿನ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಲೀವ್ ಪಾರ್ಟ್ನರ್‌ನನ್ನು ಬಂಧಿಸಿದ್ದಾರೆ. 

ತಮಿಳುನಾಡಿನ ವೆಲ್ಲೂರಿನ ಸಂಜಯ್ ಕುಮಾರ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಊರಿನ 24 ವರ್ಷದ ಗೆಳತಿ ಜೊತೆ ಒಂದೇ ಮನೆಯಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ. ಶಾಲಾ ದಿನಗಳಿಂದಲೂ ಪರಿಚಯಸ್ಥರಾಗಿದ್ದ ಕಾರಣ ಇವರಿಬ್ಬರು ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ ಸಂಜಯ್ ಕುಮಾರ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ, ವಿಡಿಯೋಗಳಿಗೆ ಚಿತ್ರ ವಿಚಿತ್ರ ಕಮೆಂಟ್ ಓದಿ ಖುಷಿ ಪಡುವ ಕೆಟ್ಟ ಅಭ್ಯಾಸ ಹತ್ತಿಕೊಂಡಿತ್ತು.

Tap to resize

Latest Videos

ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಭೀಕರ ಹತ್ಯೆ, ಪಾರ್ಟ್ನರ್-ಮಗ ಇಬ್ಬರನ್ನೂ ಕೊಂದ ಮಹಿಳೆ!

ತನ್ನ ಅಭ್ಯಾಸ ವಿಪರೀತವಾಗುತ್ತಿದ್ದಂತೆ ಸಂಜಯ್ ಕುಮಾರ್, ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿ ಫೋಟೋವನ್ನು ಮಾರ್ಫ್ ಮಾಡಿದ್ದಾರೆ. ಇತರ ಅಶ್ಲೀಲ ಚಿತ್ರಗಳಿಗೆ ಈಕೆ ಫೋಟೋ ಎಡಿಟ್ ಮಾಡಿ ಇನ್‌ಸ್ಟಾಗ್ರಾಂ, ಲಿಂಕ್ಡ್‌ಇನ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾನೆ. ಈ ಫೋಟೋಗಳಿಗೆ ಬರುವ ಕಮೆಂಟ್ ಓದಿ ಸಂಜಯ್ ಕುಮಾರ್ ತುಂಬಾ ಖುಷಿಯಾಗಿದ್ದ.

ಗೆಳತಿಗೆ ಗೊತ್ತಿಲ್ಲದಂತೆ ಈ ಕೃತ್ಯ ಮಾಡಿದ್ದಾನೆ. ಇತ್ತ ಫೋಟೋಗಳು ವೈರಲ್ ಆಗುತ್ತಿದ್ದಂತೆ ಗೆಳೆಯರು, ಆಪ್ತರು, ಕುಟುಂಬಸ್ಥರು ಕರೆ ಮಾಡಿ ವಿಚಾರಿಸಿದ್ದಾರೆ. ಈ ಪ್ರಕರಣ ಕುರಿತು ಕೇಳಿದ್ದಾರೆ. ಆತಂಕಗೊಂಡ ಈಕೆ, ತಕ್ಷಣವೇ ಸಂಜಯ್ ಕುಮಾರ್‌ಗೆ ಮಾಹಿತಿ ನೀಡಿದ್ದಾಳೆ. ಆದರೆ ತಾನೇ ಈ ಕೆಲಸ ಮಾಡಿದ್ದರೂ ಕೆಲ ಸಬೂಬು ಹೇಳಿ ಸುಮ್ಮನಾಗಿದ್ದ. ಪೊಲೀಸ್ ಠಾಣೆಗೆ ತೆರಳಿದ ಗೆಳತಿ ದೂರು ನೀಡಿದ್ದಾಳೆ.

ಪೊಲೀಸರು ತನಿಖೆ ನಡೆಸಿದಾಗ ಅಚ್ಚರಿ ಮಾಹಿತಿ ಬಹಿರಂಗವಾಗಿದೆ. ಲೀವ್ ಇನ್ ಪಾರ್ಟ್ನರ್ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ. ಇತ್ತ ಪೊಲೀಸರು ಆರೋಪಿ ಸಂಜಯ್ ಕುಮಾರ್ ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಸಂಜಯ್ ಕುಮಾರ್ ಜೊತೆ ಮದುವೆಯಾಗಲು ಮಾತುಕತೆ ನಡೆಸಿದ್ದ ಗೆಳತಿ, ಮನೆಯವರಿಗೂ ಹೇಳಿದ್ದಳು. ಆದರೆ ಸಂಜಯ್ ಕುಮಾರ್‌ಗೆ ಬೇರೆ ಗೆಳತಿ ಜೊತೆ ರಿಲೇಶನ್‌ಶಿಪ್ ಕಾರಣ ಈ ರೀತಿ ಮಾಡಿರುವ ಸಾಧ್ಯತೆ ಇದೆ. ಇದೇ ಕಾರಣ ಮುಂದಿಟ್ಟು ಲೀವ್ ಇನ್ ಪಾರ್ಟ್ನರ್‌ನಿಂದ ದೂರ ಸರಿಯಲು ಪ್ಲಾನ್ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರ ಅನುಮಾನ ವ್ಯಕ್ತಪಡಿಸಿದ್ದಾರೆ.

ಬಾಸ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್, ದುಡ್ಡಿಗಾಗಿಯೇ ಬದುಕಾ? ಇದೆಂಥಾ ನರಕಯಾತನೆ!

click me!