ಇಬ್ಬರು ವ್ಯಕ್ತಿಗಳ ಜೊತೆ ನಗ್ನವಾಗಿದ್ದ ಅಪ್ರಾಪ್ತ ಸಹೋದರಿಯರ ಹಾರೆಯಲ್ಲಿ ಹತ್ಯೆಗೈದ ಅಕ್ಕ!

By Chethan Kumar  |  First Published Oct 10, 2023, 6:27 PM IST

ಒಬ್ಬಳಿಗೆ 7 ವರ್ಷ ಮತ್ತೊಬ್ಬಳಿಗೆ 4 ವರ್ಷ. ಇಬ್ಬರು ಪೋಷಕರಿಲ್ಲದಿರುವಾಗ ಪ್ರತ್ಯೇಕ ಕೋಣೆಯಲ್ಲಿ ನಗ್ನವಾಗಿ ಬಾಯ್‌ಫ್ರೆಂಡ್ ಜೊತೆಗಿರುವುದನ್ನು ನೋಡಿ 20 ವರ್ಷದ ಅಕ್ಕ, ಕೈಗ ಸಿಕ್ಕ ಹಾರೆಯಲ್ಲಿ ಇಬ್ಬರ ಸಹೋದರಿಯರನ್ನು ಹತ್ಯೆಗೈದ ಭೀಕರ ಘಟನೆ ನಡೆದಿದೆ.


ಎಟವಾ(ಅ.10) ಇಬ್ಬರು ಅಪ್ರಾಪ್ತರು. ಒಬ್ಬಲಿಗೆ 7 ವರ್ಷ, ಮತ್ತೊಬ್ಬಳಿಗೆ 4 ವರ್ಷ. ಪೋಷಕರು ಮನೆಯಲ್ಲಿ ಇಲ್ಲದಿರುವಾಗ ಇಬ್ಬರು ಅಪ್ರಾಪ್ತರ ಪ್ರತ್ಯೇಕ ಕೋಣೆಯಲ್ಲಿ ನಗ್ನವಾಗಿ ಇಬ್ಬರು ವ್ಯಕ್ತಿಗಳ ಜೊತೆ ಲೈಂಗಿಕತೆಯಲ್ಲಿ ತೊಡಗಿದ್ದಾರೆ. ಈ ದೃಶ್ಯ ನೋಡಿ ಕೆರಳಿದ 20 ವರ್ಷದ ಅಕ್ಕ ಅಂಜಲಿ, ಕೈಗೆ ಸಿಕ್ಕ ಹಾರೆಯಲ್ಲಿ ಇಬ್ಬರು ಸಹೋದರಿಯರನ್ನು ಹತ್ಯೆ ಮಾಡಿದ್ದಾಳೆ. ಈ ಭೀಕರ ಘಟನೆ ಉತ್ತರ ಪ್ರದೇಶ ಎಟವಾ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಅಂಜಲಿಯನ್ನು ಪೊಲೀಸರು ಬಂಧಿಸಿದ್ದಾರೆ.

7 ವರ್ಷದ ಸುರ್ಬಿ ಹಾಗೂ 4 ವರ್ಷದ ರೋಶನಿಯನ್ನು ಅದೇ ಪ್ರದೇಶದ ಇಬ್ಬರು ವ್ಯಕ್ತಿಗಳು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.  ಪೋಷಕರು ಕೂಲಿ ಕೆಲಸ ಮಾಡಿ ಮಕ್ಕಳನ್ನು ಪೋಷಿಸುತ್ತಿದ್ದಾರೆ. ಮೂವರು ಮಕ್ಕಳ ಪೈಕಿ ಹಿರಿಯ ಮಗಳು ಅಂಜಲಿಗೆ 20 ವರ್ಷ. ಈಕೆ ಕೂಡ ಪೋಷಕರ ಜೊತೆ ಕೂಲಿ ಕೆಲಸಕ್ಕೆ ತೆರಳಿ ಕುಟುಂಬಕ್ಕೆ ನೆರವಾಗುತ್ತಿದ್ದಳು.

Tap to resize

Latest Videos

ಲೈಂಗಿಕ ಕಿರುಕುಳ ವಿರೋಧಿಸಿದ 7 ವರ್ಷದ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಪಾಪಿ ಸಂಬಂಧಿಕ

ಇಂದು(ಅ.10) ಬೇರೆಡೆ ಕೆಲಸಕ್ಕೆ ತೆರಳಿದ್ದ ಅಂಜಲಿ ಮಧ್ಯಾಹ್ನದ ವೇಳೆ ಮನೆಗೆ ಮರಳಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಇಬ್ಬರು ಅಪ್ರಾಪ್ತ ಸಹೋದರಿಯರು ನಗ್ನವಾಗಿ ಇಬ್ಬರು ವ್ಯಕ್ತಿಗಳ ಜೊತೆ ಲೈಂಗಿಕತೆಯಲ್ಲಿರುವುದು ಪತ್ತೆಯಾಗಿದೆ. ಅಂಜಲಿ ಕಿರುಚಾಟಕ್ಕೆ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಆದರೆ ನಗ್ನವಾಗಿದ್ದ ಇಬ್ಬರು ಸಹೋದರಿಯರನ್ನು ಪಕ್ಕದಲ್ಲೇ ಇದ್ದ ಹಾರೆಯಲ್ಲಿ ಅಂಜಲಿ ಹತ್ಯೆ ಮಾಡಿದ್ದಾಳೆ.

ಒಂದೊಂದೆ ಏಟಿಗೆ ಇಬ್ಬರು ಅಪ್ರಾಪ್ತ ಮಕ್ಕಳ ಪ್ರಾಣ ಪಕ್ಷಿ ಹಾರಿಹೋಗಿದೆ. ಬಳಿಕ ಕೋಣೆಯಲ್ಲಿ ಚೆಲ್ಲಿದ್ದ ರಕ್ತವನ್ನು ಶುಚಿಗೊಳಿಸಿದ್ದಾಳೆ. ಈ ಕುರಿತು ಮಾಹಿತಿ ಪಡೆದು ಪೊಲೀಸರು ಮನೆಯಲ್ಲಿದ್ದ ಅಂಜಲಿಯನ್ನು ಬಂಧಿಸಿದ್ದಾರೆ. ಇದೇ ವೇಳೆ ಕೋಣೆಯೊಳಗಿದ್ದ ಇಬ್ಬರು ಸಹೋದರಿಯರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆ ವೇಳೆ ಹತ್ಯೆಯನ್ನು ಒಪ್ಪಿಕೊಂಡಿರುವ ಅಂಜಲಿ, ತನ್ನ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಸಿಟ್ಟಿನಲ್ಲಿ ಹೊಡೆದು ಸಾಯಿಸಿದ್ದೇನೆ ಎಂದಿದ್ದಾಳೆ. ಇದೇ ವೇಳೆ ತನ್ನ ಏನೂ ಅರಿಯದ ನನ್ನ ಅಪ್ರಾಪ್ತ ಸಹೋದರಿಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾಳೆ.

ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ 96 ಸಾವಿರ ರೂ ವಂಚಿಸಿದ ದುಷ್ಕರ್ಮಿಗಳು!

click me!