ವೇತನ ವಿಳಂಬ ಹಿನ್ನೆಲೆ ಪೌರಕಾರ್ಮಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರಮ್ಮ ಬಡಾವಣೆಯ ಶಿವಕುಮಾರ(45) ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ
ಕೋಲಾರ (ಅ.10): ವೇತನ ವಿಳಂಬ ಹಿನ್ನೆಲೆ ಪೌರಕಾರ್ಮಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರಮ್ಮ ಬಡಾವಣೆಯ ಶಿವಕುಮಾರ(45) ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ. ಕೋಲಾರ ನಗರಸಭೆಯಲ್ಲಿ ದಿನಗೂಲಿ ನೌಕರನಾಗಿರುವ ಶಿವಕುಮಾರ ಕಳೆದ ಎರಡು ತಿಂಗಳಿಂದ ವೇತನ ನೀಡಿಲ್ಲ. ಹೀಗಾಗಿ ಜೀವನ ನಡೆಸುವುದು ದುಸ್ತರವಾಗಿದೆ ಮನನೊಂದು ಸಂಜೆ ನಗರಸಭೆ ಕಚೇರಿ ಬಳಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಉಳಿದ ಪೌರಕಾರ್ಮಿಕರಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಳ್ಳಾರಿ: ಪೊಲೀಸ್ ಕ್ವಾಟ್ರಸ್‌ಲ್ಲಿ ಪೇದೆ ಆತ್ಮಹತ್ಯೆ, ಸಾವಿಗೆ ಕಾರಣವಾಯ್ತೇ ಹಿರಿಯ ಅಧಿಕಾರಿಗಳ ಕಿರುಕುಳ?
ಎರಡು ತಿಂಗಳಿಂದ ವೇತನ ಸಿಕ್ಕಿಲ್ಲ, ಕೆಲಸಕ್ಕೆ ಹೋಗಿದ್ದರೂ ಗೈರು ಹಾಜರಿ ಹಾಕಿರುವ ಆರೋಪ. ಆರೋಗ್ಯ ನಿರೀಕ್ಷಕ ಹಾಗೂ ಆಯುಕ್ತರು ಪತಿಗೆ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ರುಕ್ಮಿಣಿ ಆರೋಪ ಮಾಡಿದ್ದಾರೆ.
ಸದ್ಯ ಕೋಲಾರ ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಶಿವಕುಮಾರ್ ಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಪೌರಕಾರ್ಮಿಕನ ಆರೋಗ್ಯ ವಿಚಾರಿಸಲು ಬಂದ ಪೌರಯುಕ್ತರಿಗೆ ಕುಟುಂಬಸ್ಥರಿಂದ ತರಾಟೆ. ಈ ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಲೈಂಗಿಕ ಕಿರುಕುಳ ವಿರೋಧಿಸಿದ 7 ವರ್ಷದ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಪಾಪಿ ಸಂಬಂಧಿಕ
ಬಸ್ಸು ಹತ್ತುವ ವೇಳೆ ಶಿಕ್ಷಕಿಯ ಮಾಂಗಲ್ಯ ಕಳುವು:
ಕೋಲಾರ: ನಗರದಿಂದ ಕೆಜಿಎಫ್‌ಗೆ ವಾಪಸ್ಸಾಗುತ್ತಿದ್ದ ಶಿಕ್ಷಕಿಯೊಬ್ಬರು ಬಸ್ಸು ಹತ್ತುವಾಗ ಚೋರರು ಸುಮಾರು ೪ ಲಕ್ಷ ಮೌಲ್ಯದ ೯೪ ಗ್ರಾಂ ತೂಕದ ಚಿನ್ನದ ಸರ ದೋಚಿರುವ ಘಟನೆ ನಗರದ ಸಾರಿಗೆ ಸಂಸ್ಥೆ ಬಸ್‌ನಿಲ್ದಾಣದಲ್ಲಿ ನಡೆದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೆಜಿಎಫ್ ಅಂಬೇಡ್ಕರ್ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ತಿರುಮರೈಸೆಲ್ವಿ ಅ.7 ರಂದು ಜಿಲ್ಲಾಧಿಕಾರಿ ಕಚೇರಿ ಆಡಿಟೋರಿಯಂನಲ್ಲಿ ಇದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದಾಗ ಕೋಲಾರ ಬಸ್ ನಿಲ್ದಾಣದಲ್ಲಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ನಗರಠಾಣೆಯಲ್ಲಿ ದೂರು ದಾಖಲಾಗಿದೆ.