ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಭೀಕರ ಹತ್ಯೆ, ಪಾರ್ಟ್ನರ್-ಮಗ ಇಬ್ಬರನ್ನೂ ಕೊಂದ ಮಹಿಳೆ!
ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಹತ್ಯೆ, ಹಲ್ಲೆ ಘಟನೆಗಳು ಹೆಚ್ಟಾಗುತ್ತಿದೆ. ಶ್ರದ್ಧಾ ವಾಕರ್ ಹತ್ಯೆ ಬಳಿಕ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಆದರೆ ಪ್ರತಿ ಬಾರಿ ಲೀವ್ ಇನ್ ಪಾರ್ಟ್ನರ್ ಗೆಳತಿ ಹತ್ಯೆಯಾಗುತ್ತಿದ್ದರೆ, ಇಲ್ಲಿ ಮಹಿಳೆ ರೌದ್ರವತಾರ ತಾಳಿ ಲೀವ್ ಇನ್ ಪಾರ್ಟ್ನರ್ ಗೆಳೆಯ ಹಾಗೂ ಮಗನನ್ನೇ ಹತ್ಯೆ ಮಾಡಲಾಗಿದೆ.
ದೆಹಲಿ(ಅ.04) ದೆಹಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಲೀವ್ ಇನ್ ರಿಲೀಶನ್‌ಶಿಪ್‌ನಲ್ಲಿ ಶ್ರದ್ಧಾ ತನ್ನ ಗೆಳೆಯನಿಂದಲೇ ಹತ್ಯೆಯಾಗಿದ್ದಳು. ಶ್ರದ್ಧಾ ದೇಹವನ್ನು 36ಕ್ಕೂ ಹೆಚ್ಚು ಪೀಸ್ ಮಾಡಿದ್ದ ಗೆಳೆಯ ಅಫ್ತಾಬ್ ಬಳಿಕ ಒಂದೊಂದೆ ಪೀಸ್ ಕಾಡಿನಲ್ಲಿ ಬೀಸಾಡಿದ್ದ. ಈ ಘಟನೆ ಬಳಿಕ ಇದೇ ರೀತಿಯ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಇದೀಗ ಮತ್ತೆ ದೆಹಲಿಯಲ್ಲಿ ಲೀವ್ ಇನ್ ರಿಲೇಶನ್‌ಶಿಪ್ ಹತ್ಯೆ ನಡೆದಿದೆ. ಈ ಬಾರಿ ಮಹಿಳೆ ರೌದ್ರವತಾರ ತಾಳಿದ್ದಾಳೆ. ಪೂಜಾ ಕುಮಾರಿಗೆ ಲೀವ್ ಇನ್ ಪಾರ್ಟ್ನರ್ ಜಿತೇಂದ್ರ ಹಾಗೂ ಆತನ 11 ವರ್ಷದ ಮಗನೂ ಅಡ್ಡಿಯಾಗಿದ್ದ. ಹೀಗಾಗಿ ಇಬ್ಬರನ್ನು ಹತ್ಯೆಗೈದು ಮೃತದೇಹವನ್ನು ಬೆಡ್‌ಬಾಕ್ಸ್‌ನೊಳಗಿಟ್ಟು ಪರಾರಿಯಾದ ಮಹಿಳೆಯನ್ನು ಬಂಧಿಸಲಾಗಿದೆ.
ರನ್‌ಹೋಲಾದ ಪೂಜಾ ಕುಮಾರಿ ಕಳೆದ ಹಲವು ವರ್ಷಗಳಿಂದ ಜೀತೇಂದ್ರ ಅನ್ನೋ ವ್ಯಕ್ತಿ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾಳೆ. ಇವರ ಲೀವ್ ಇನ್ ರಿಲೇಶನ್‌ಶಿಪ್‌ಗೆ 11 ವರ್ಷದ ಮಗನೂ ಇದ್ದಾನೆ. ಆದರೆ ಜೀತೇಂದ್ರ ತನ್ನ ಮೊದಲ ಪತ್ನಿಗೆ ವಿಚ್ಚೇದನ ನೀಡಿದೇ ಪೂಜಾ ಕುಮಾರಿ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ. ಇದು ಪೂಜಾ ಕುಮಾರಿ ಹಾಗೂ ಜಿತೇಂದ್ರ ನಡುವೆ ವಿವಾದಕ್ಕೆ ಕಾರಣವಾಗಿದೆ.ಇದರ ನಡುವೆ ಜೀತೇಂದ್ರ ತನ್ನ ಮೊದಲ ಹೆಂಡತಿ ಬಳಿ ತೆರಳುತ್ತಿರುವ ವಿಚಾರವೂ ಪೂಜಾ ಕುಮಾರಿಗೆ ಗೊತ್ತಾಗಿದೆ. ಹೀಗಾಗಿ ರಂಪಾಟವೇ ನಡೆದು ಹೋಗಿದೆ.
ಲವ್ ಜಿಹಾದ್: ಮದ್ವೆಯಾಗಿದ್ರೂ ಹಿಂದೂ ಹುಡುಗಿ ಜತೆ ಲವ್ ನಾಟಕವಾಡ್ದ ಶಕೀಬ್; ಆತ್ಮಹತ್ಯೆ ಮಾಡ್ಕೊಂಡ ಪಿಂಕಿ ಗುಪ್ತಾ
ಮಗನ ಕಾರಣದಿಂದ ಜೀತೇಂದ್ರ ಮೊದಲ ಹೆಂಡತಿ ಬಳಿ ಹೋಗುತ್ತಿದ್ದ. ಜೀತೇಂದ್ರ ಹಾಗೂ ಆತನ ಮಗ ಇಬ್ಬರೂ ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದ ಪೂಜಾ ಕುಮಾರಿ ಇಬ್ಬರನ್ನು ಹತ್ಯೆ ಮಾಡಿದ್ದಾಳೆ. ಲೀವ್ ಇನ್ ಪಾರ್ಟ್ನರ್ ಹಾಗೂ ಮಗ ಇಬ್ಬರು ಮಲಗಿದ್ದಾಗ, ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನು ಬೆಡ್ ಕೆಳಗಿರುವ ಬಾಕ್ಸ್‌ನಲ್ಲಿಟ್ಟು ಪರಾರಿಯಾಗಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು 300ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಒಂದೊಂದು ಎಳೆಯನ್ನು ಹಿಡಿದು ತನಿಖೆ ನಡೆಸಿದ್ದಾರೆ. ಬಳಿಕ ಪೂಜಾ ಕುಮಾರಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.