ಬೆಳಗಾವಿ: ಪುಷ್ಪಾ ಚಿತ್ರದ ಮಾದರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್, ಖದೀಮರ ಐಡಿಯಾಗೆ ದಂಗಾದ ಅಧಿಕಾರಿಗಳು..!

By Girish GoudarFirst Published Oct 1, 2024, 1:30 PM IST
Highlights

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್‌ಫೋಸ್ಟ್ ಬಳಿ ದಾಳಿ ಮಾಡಲಾಗಿದ್ದು 49 ಲಕ್ಷ ಮೌಲ್ಯದ 3060 ಬಾಟಲ್ ಮದ್ಯ, 35 ಲಕ್ಷ ಮೌಲ್ಯದ ಕಂಟೇನರ್ ಜಪ್ತಿ ಮಾಡಿಕೊಳ್ಳಲಾಗಿದೆ. ಕಂಟೇನರ್ ಒಳಗೆ ಕಂಪಾರ್ಟ‌ಮೆಂಟ್ ಮಾಡಿ ಅಕ್ರಮವಾಗಿ ಲಿಕ್ಕರ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು.

ಬೆಳಗಾವಿ(ಅ.01): ಪುಷ್ಪಾ ಚಿತ್ರದ ಮಾದರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್ ಮಾಡ್ತಿದ್ದ ವಾಹನವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್‌ಫೋಸ್ಟ್ ಬಳಿ ಇಂದು(ಮಂಗಳವಾರ) ನಡೆದಿದೆ. ಖದೀಮರ ಹೈಟೆಕ್ ‌ಮದ್ಯ ಸಾಗಾಣಿಕೆ ಐಡಿಯಾಗೆ ಬೆಳಗಾವಿಯ ಅಬಕಾರಿ ಇಲಾಖೆ ಅಧುಕಾರಿಗಳೇ ದಂಗಾಗಿದ್ದಾರೆ.  

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್‌ಫೋಸ್ಟ್ ಬಳಿ ದಾಳಿ ಮಾಡಲಾಗಿದ್ದು 49 ಲಕ್ಷ ಮೌಲ್ಯದ 3060 ಬಾಟಲ್ ಮದ್ಯ, 35 ಲಕ್ಷ ಮೌಲ್ಯದ ಕಂಟೇನರ್ ಜಪ್ತಿ ಮಾಡಿಕೊಳ್ಳಲಾಗಿದೆ. ಕಂಟೇನರ್ ಒಳಗೆ ಕಂಪಾರ್ಟ‌ಮೆಂಟ್ ಮಾಡಿ ಅಕ್ರಮವಾಗಿ ಲಿಕ್ಕರ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. 

Latest Videos

ಬೆಂಗ್ಳೂರಲ್ಲಿ ರ‍್ಯಾಂಬೋ ಸಿನಿಮಾ ಶೈಲಿಯಲ್ಲಿ ಕಳ್ಳತನ: ಕಸ್ಟಮರ್‌ಗೆ ಬೇಕಾದ ಬೈಕನ್ನೇ ಕದೀತಿದ್ದ ಖದೀಮರು!

ಕಂಪಾರ್ಟಮೆಂಟ್ ಹೊರಗೆ ಡಸ್ಟ್‌ಬಿನ್ ಡಬ್ಬಾ ಇಟ್ಟು ಅಧಿಕಾರಿಗಳಿಗೆ ಕಣ್ಣಿಗೆ ಮಣ್ಣೆರೆಚುವ ತಂತ್ರವನ್ನ ಹೆಣೆದಿದ್ದರು. ಗೋವಾದಿಂದ ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. 
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮದ್ಯ ಸಂಗ್ರಹಕ್ಕೆ ಮುಂದಾಗ್ತಿವೆಯೇ ರಾಜಕೀಯ ಪಕ್ಷಗಳು? ಎಂಬ ಅನುಮಾನ ಮೂಡಿದೆ. ಗೋವಾದಲ್ಲಿ ಲಿಕ್ಕರ್ ತಯಾರಿಸಿ ಮಹಾರಾಷ್ಟ್ರದಲ್ಲಿ ಮಾತ್ರ ಮಾರಾಟಕ್ಕೆ ಎಂದು ಬಾಟಲ್ ಮೇಲೆ ಬರಹ ಬರೆದಿದೆ. ಅಧಿಕಾರಿಗಳ ಕಾರ್ಯಾಚರಣೆಗೆ ಅಬಕಾರಿ ಇಲಾಖೆ ಅಪರ ಆಯುಕ್ತ ಡಾ. ಮಂಜುನಾಥ ‌ಶ್ಲಾಘಿಸಿದ್ದಾರೆ. 

click me!