Lift Accident: ಲಿಫ್ಟ್ ದುರ್ಘಟನೆಗೆ ಯಾರು ಹೊಣೆ ? ಮೂವರ ಹೆಸರು ಸೂಚಿಸಿದ ಸುಪ್ರೀಂ ಕೋರ್ಟ್

Published : Jul 30, 2026, 01:47 PM IST
Lift accident

ಸಾರಾಂಶ

Supreme Court verdict : ಲಿಫ್ಟ್‌ ಅಪಘಾತವಾದ್ರೆ ಯಾರು ಹೊಣೆ? ಯಾರು ಪರಿಹಾರ ನೀಡ್ಬೇಕು?  ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮೂವರ ಹೆಸರನ್ನು ಸೂಚಿಸಿದೆ.

ಲಿಫ್ಟ್‌ನಲ್ಲಿ ಅಪಘಾತ ಸಂಭವಿಸಿದರೆ ಅದರ ಹೊಣೆ ಯಾರು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಇನ್ನು ಮುಂದೆ ಲಿಫ್ಟ್ನಲ್ಲಿ ಸಂಭವಿಸುವ ಯಾವುದೇ ಅಪಘಾತಕ್ಕೆ ಲಿಫ್ಟ್ ತಯಾರಿಸಿದ ಕಂಪನಿ, ಅದರ ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಹಾಗೂ ಕಟ್ಟಡದ ಮಾಲೀಕರು ಅಥವಾ ಆಡಳಿತ ಮಂಡಳಿ ಈ ಮೂವರೂ ಜಂಟಿಯಾಗಿ ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಏನಿದು ಪ್ರಕರಣ? 

ಈ ಪ್ರಕರಣ 2003ರಲ್ಲಿ ನವದೆಹಲಿಯಲ್ಲಿರುವ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಪ್ರಧಾನ ಕಚೇರಿಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದೆ. ಕಟ್ಟಡದ ಲಿಫ್ಟ್ನಲ್ಲಿ 13 ಅಧಿಕಾರಿಗಳು ಪ್ರಯಾಣಿಸುತ್ತಿದ್ದಾಗ, ಲಿಫ್ಟ್ ಆರನೇ ಮತ್ತು ಏಳನೇ ಮಹಡಿಯ ಮಧ್ಯೆ ಏಕಾಏಕಿ ನಿಂತಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಅಧಿಕಾರಿ ವಿಪಿನ್ ಹಂಡಾ ಅವರು ಲಿಫ್ಟ್ನಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ಲಿಫ್ಟ್ ಹಠಾತ್ ಕೆಳಕ್ಕೆ ಚಲಿಸಿದ್ದರಿಂದ ಅವರು ಗಂಭೀರವಾಗಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಕಂಪನಿಯ ವಾದವೇನು? 

ಲಿಫ್ಟ್ ತಯಾರಿಸಿದ ಕಂಪನಿ, ಈ ದುರ್ಘಟನೆ ರಕ್ಷಣಾ ಕಾರ್ಯಾಚರಣೆಯ ವೇಳೆ ನಡೆದ ಮಾನವೀಯ ತಪ್ಪಿನಿಂದ ಸಂಭವಿಸಿದೆ ಎಂದು ವಾದಿಸಿತು. ಅಲ್ಲದೆ ಕಟ್ಟಡದಲ್ಲಿ ವಿದ್ಯುತ್ ವೋಲ್ಟೇಜ್ ಏರಿಳಿತ ಇರುವ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿತು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ಲಿಫ್ಟ್ನಲ್ಲಿ ಬಹಳ ದಿನಗಳಿಂದ ತಾಂತ್ರಿಕ ದೋಷಗಳಿದ್ದರೂ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುವುದು ಸಂಬಂಧಪಟ್ಟ ಎಲ್ಲಾ ಪಕ್ಷಗಳ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅದರಂತೆ ಪರಿಹಾರದ ಶೇಕಡಾ 70ರಷ್ಟು ಮೊತ್ತವನ್ನು ಲಿಫ್ಟ್ ಕಂಪನಿ, ಶೇಕಡಾ 25 ರಷ್ಟು ಮೊತ್ತವನ್ನು ನಿರ್ವಹಣಾ ಸಂಸ್ಥೆ (MES) ಹಾಗೂ ಉಳಿದ ಶೇಕಡಾ 5 ರಷ್ಟು ಮೊತ್ತವನ್ನು RAW ಭರಿಸಬೇಕು ಎಂದು ಆದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Johnson & Johnson ಪೌಡರ್​ನಿಂದ ಕ್ಯಾನ್ಸರ್​: 53 ಸಾವಿರ ಕೋಟಿ ರೂ. ಪರಿಹಾರ ನೀಡಲು ಕಂಪೆನಿ ಒಪ್ಪಿಗೆ
ಸಂಬಳ ಕೇವಲ 12 ಸಾವಿರ, ಬ್ಯಾಂಕ್‌ನಲ್ಲಿ ಲಕ್ಷ ಲಕ್ಷ ಹಣ! ಕ್ಲಾಸ್‌ರೂಮ್‌ನಿಂದಲೇ ಡ್ರಗ್ಸ್ ದಂಧೆ ನಡೆಸುತ್ತಿದ್ದ 3 ಲೇಡಿ ಟೀಚರ್ಸ್ ಅಂದರ್!