ಬೀದರ್: ಆನ್ಲೈನ್‌ನಲ್ಲಿ ಮೋಸ, ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ

By Girish Goudar  |  First Published Nov 11, 2022, 1:30 AM IST

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ್ ಗ್ರಾಮದಲ್ಲಿ ನಡೆದ ಘಟನೆ 


ಬೀದರ್(ನ.11):  ಆನ್ಲೈನ್‌ನಲ್ಲಿ ಮೋಸ ಹೋದ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ್ ಗ್ರಾಮದಲ್ಲಿ ನಿನ್ನೆ(ಗುರುವಾರ) ನಡೆದಿದೆ. ಆರತಿ ಕನಾಟೆ(28) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿಯಾಗಿದ್ದಾರೆ. 

ಮೃತ ಆರತಿ ಅವರು ಆನ್ಲೈನ್‌ನಲ್ಲಿ ಇನ್ವೆಸ್ಟ್ ಮಾಡಿ 2.5 ಲಕ್ಷ ರೂ. ಕಳೆದುಕೊಂಡಿದ್ದರು. ಸಾಲ- ಸೂಲ ಮಾಡಿಕೊಂಡು ಆನ್ಲೈನ್‌ನಲ್ಲಿ ಇನ್ವೆಸ್ಟ್ ಮಾಡಿದ್ದರು ಅಂತ ತಿಳಿದು ಬಂದಿದೆ. 

Tap to resize

Latest Videos

ಪತ್ನಿ ಸಾವು... ಐದು ವರ್ಷದ ಕಂದನನ್ನು ಕೊಂದು ನೇಣಿಗೆ ಶರಣಾದ ತಂದೆ

ಹಣ ವಾಪಸಾಗುವ ಯಾವುದೇ ಲಕ್ಷಣಗಳ ಕಂಡು ಬಾರದ ಹಿನ್ನೆಲೆಯಲ್ಲಿ ಮನನೊಂದು ಆರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್ ಬರೆದಿಟ್ಟು ಉಪನ್ಯಾಸಕಿ ಆರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವಕಲ್ಯಾಣ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  
 

click me!