ಹಾಸನದಲ್ಲಿ ಮಹಿಳೆಯಿಂದ ದಾಖಲಾದ ಲೈಂಗಿಕ ದೌರ್ಜನ್ಯ ಕೇಸ್‌ನಡಿ ವಕೀಲ ದೇವರಾಜೇಗೌಡ ಅವರನ್ನು ಹಾಸನ ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ. ಆದರೆ, ಎಸ್‌ಐಟಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಹಾಸನ (ಮೇ 11): ರಾಜ್ಯದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಆರೋಪ, ಲೈಂಗಿಕ ದೌರ್ಜನ್ಯ ಹಾಗೂ ಜಾತಿ ನಿಂದನೆ ಕೇಸಿನಡಿ ವಕೀಲ ದೇವರಾಜೇಗೌಡನನ್ನು ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ. ಆದರೆ, ಇವರನ್ನು ಎಸ್‌ಐಟಿ ವಶಕ್ಕೆ ಪಡೆಯುತ್ತದೆಯೇ ಇಲ್ಲವೋ? ಎಂಬುದು ಖಚಿತವಾಗಿಲ್ಲ.
ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆಯಲ್ಲಿ ಏ.1ರಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ವ್ಯಕ್ತಿ ವಿರುದ್ದ ಜಾತಿ ನಿಂದನೆ ಆರೋಪ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪೊಲೀಸರಿಂದ ವಶಕ್ಕೆ ಪಡೆದು ಹಾಸನಕ್ಕೆ ಕರೆತರಲಾಗಿದೆ. ಇಂದು ವಿಚಾರಣೆ ಬಳಿಕ, ನ್ಯಾಯಾದೀಶರ ಎದುರು ಹಾಜರು ಪಡಿಸೋ ಸಾಧ್ಯತೆಯಿದೆ. ಹೊಳೆನರಸೀಪುರ ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ನಡೆಯುತ್ತಿರೋ ವಿಚಾರಣೆ ಮಾಡಲಾಗಿದೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತ ನೇತೃತ್ವದಲ್ಲಿ ದೇವರಾಜೇಗೌಡ ಅವರನ್ನು ಬೆಳಗ್ಗೆಯಿಂದಲೂ ವಿಚಾರಣೆ ಮಾಡಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ನ್ಯಾಯಾಧೀಶರ ಮುಂದೆ ದೇವರಾಜೇಗೌಡ ರನ್ನ ಹಾಜರುಪಡಿಸೋ ಸಾಧ್ಯತೆಯಿದೆ.
undefined
ಬೆಂಗಳೂರು : ಮಹಿಳಾ ಕಕ್ಷಿದಾರಳನ್ನೇ ಕಾಮದಾಟಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್ ಬಂಧನ!
ಎಸ್‌ಐಟಿಗೆ ಹಸ್ತಾಂತರ ಮಾಡ್ತಾರಾ?
ಹಾಸನ ಜಿಲ್ಲಾ ಪೊಲೀಸರಿಂದ ಬಂಧನಕ್ಕೊಳಗಾದ ವಕೀಲ ದೇವರಾಜೇಗೌಡ ಅವರನ್ನು ಎಸ್ಐಟಿ ಗೆ ಹಸ್ತಾಂತರ ಆಗ್ತಾರಾ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ದೇವರಾಜೇಗೌಡರನ್ನ ನ್ಯಾಯಾಧೀಶರ ಎದುರು ಹಾಜರು ಪಡಿಸುವ ವೇಳೆ ಎಸ್ ಐ ಟಿ ತಮ್ಮ ವಶಕ್ಕೆ ಕೇಳೋ ಸಾಧ್ಯತೆಯಿದೆ. ಅಶ್ಲೀಲ ವೀಡಿಯೋ ಇದ್ದ ಪೆನ್ ಡ್ರೈವ್ ವೈರಲ್ ಮಾಡಿದ ಬಗ್ಗೆ ದೇವರಾಜೇಗೌಡ ವಿರುದ್ದ ಆರೋಪ ಕೇಳಿಬಂದಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ದೇವರಾಜೇಗೌಡ ಅವರಿಗೆ ಪೆನ್ ಡ್ರೈವ್ ನೀಡಿದ್ದಾಗಿ ಹೇಳಿಕೆ ನೀಡಿದ್ದನು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಈಗಾಗಲೇ ಒಮ್ಮೆ ದೇವರಾಜೇಗೌಡರನ್ನು ಕರೆದು ವಿಚಾರಣೆ ನಡೆಸಲಾಗಿತ್ತು. ಈಗ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನವಾಗಿರುವ ದೇವರಾಜೇಗೌಡನನ್ನು ಪೆನ್ ಡ್ರೈವ್ ವೈರಲ್ ಸಂಬಂಧ ವಿಚಾರಣೆಗಾಗಿ ವಶಕ್ಕೆ ಪಡೆಯಲು ಮುಂದಾಗಬಹುದು.
ದೇವರಾಜೇಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದ್ದರೂ, ಹಾಜರಾಗದ ಹಿನ್ನೆಲೆಯಲ್ಲಿ ಎಸ್‌ಐಟಿ ತಮ್ಮ ವಶಕ್ಕೆ ಒಪ್ಪಿಸುವಂತೆ ನ್ಯಾಯಾಲಯದ ಮುಂದೆ ಕೇಳುವ ಸಾಧ್ಯತೆಯಿದೆ. ಆದರೆ, ಇಂದು ಕೋರ್ಟ್ ರಜೆ ಇರುವ ಹಿನ್ನೆಲೆಯಲ್ಲಿ ದೇವರಾಜೇಗೌಡನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ಈ ವೇಳೆ ಎಸ್‌ಐಟಿ ತನ್ನ ವಶಕ್ಕೆ ಪಡೆಯಲು ನ್ಯಾಯಾಲಯ ಅನುಮತಿ ನೀಡಿದರೆ ವಶಕ್ಕೆ ಪಡೆಯಲಿದೆ. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಕುರಿತು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣ: ಎಸ್‌ಐಟಿಗೆ ಡಿಕೆಶಿ ಹೆಸರು ಹೇಳದಂತೆ ಒತ್ತಡ, ವಕೀಲನ ಆಡಿಯೋ ಬಾಂಬ್..!
ವಕೀಲ ದೇವರಾಜೇಗೌಡ ಪೊಲೀಸರಿಗೆ ಲಾಕ್ ಆಗಿದ್ಹೇಗೆ?
ರಾಜಕೀಯ ಮುಖಂಡ ಶಿವರಾಮೇಗೌಡ, ಸಂತ್ರಸ್ಥೆ ಪತಿ ಜೊತೆ ಮಾತಾಡಿದ ಆಡಿಯೋವನ್ನು ದೇವರಾಜೇಗೌಡ ಸಾಮಾಜಿಕ ಜಾಲತಾಣಗಳನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೇವರಾಜೇಗೌಡ ರ ಚಲನ ವಲನದ ಬಗ್ಗೆ ಹೊಳೆನರಸೀಪುರ ಪೊಲೀಸರು ನಿಗಾ ವಹಿಸಿದ್ದರು. ಮಾಧ್ಯಮಗಳಲ್ಲಿ ದೇವರಾಜೇಗೌಡ ನಾಪತ್ತೆ ಆಗಿದ್ದಾರೆ ಎಂಬ ಸುದ್ದಿಗಳು ಪ್ರಸಾರ ಆಗುತ್ತಿದ್ದಂತೆಯೇ, ನಾನು ಮನೆಯಲ್ಲಿ ಇದ್ದೇನೆ, ಎಲ್ಲಿಯೂ ಹೋಗಿಲ್ಲ ಅಂತ ವಿಡಿಯೋ ಅಪ್ಲೋಡ್ ಮಾಡಿ ಪೊಲೀಸರ ದಿಕ್ಕು ತಪ್ಪಿಸಿದ್ದರು. ಜೊತೆಗೆ, ಬಂಧನದ ಭೀತಿಯಿಂದ ಗೋವಾ ಕಡೆಗೆ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ. ದೇವರಾಜೇಗೌಡ ನಿನ್ನೆ ರಾತ್ರಿ 8:05 ಗಂಟೆಗೆ ಆಡಿಯೋ ಮತ್ತು ವಿಡಿಯೋ ಅಪ್ಲೋಡ್ ಮಾಡಿದ್ದರು. ಹಿರಿಯೂರು ಪೊಲೀಸರು ರಾತ್ರಿ 08:10 ನಿಮಿಷಕ್ಕೆ ಹಿರಿಯೂರು ಬಳಿಯ ಟೋಲ್ ಗೇಟ್ ನಲ್ಲಿ ಬಂಧಿಸಿ ಹೊಳೆನರಸೀಪುರ ಸಿಪಿಐ ಕಚೇರಿಗೆ ಕರೆತಂದು ವಿಚಾರಣೆ ಮಾಡುತ್ತಿದ್ದಾರೆ.