
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಆ.7): ಆತ ಆಗ್ತಾನೆ ಕೂಲಿ ಕೆಲ್ಸ ಮುಗ್ಸಿ ಹೆಂಡ್ತಿ ಮಕ್ಳ ಜೊತೆ ಊಟ ಮಾಡೋ ತಯಾರಿಯಲ್ಲಿದ್ದ.. ಯಾರೊ ತಮ್ಮ ಜಾಗದಲ್ಲಿ ಜಮೀನು ಸ್ವಚ್ಛ ಕಾರ್ಯದಲ್ಲಿ ತೊಡಗಿದ್ರು ಇದನ್ನ ಪ್ರಶ್ನೆ ಮಾಡಿದ್ದೆ ತಡ ಬಿತ್ತು ನೋಡಿ ಮಚ್ಚಿನೇಟು.. ಬೆಟ್ಟಹಳ್ಳಿಯ ಮಚ್ಚೇಶ್ವರನ ಕಥೆ ನಿಮ್ಮ ಮುಂದೆ.
ಯಾರೊ ಜಾಗವನ್ನ ಸ್ವಚ್ಛಗೊಳಿಸ್ತಿದ್ದಾನೆ ಆತನನ್ನ ತಡೆಯೋಕೆ ಮತ್ತೋರ್ವ ಯತ್ನಿಸ್ತಿರೋದು ಮಾತಿನಲ್ಲೇ ಮಲ್ಲಯುದ್ದ.. ಮಾತು ಮಾತಾಡ್ತಯಿದ್ದಂತೆ ಉಲ್ಟಾ ಲಾಂಗ್ ನಿಂದ ಡೆಡ್ಲಿ ಅಟ್ಯಾಕ್.. ಒಂದೇ ಒಂದು ಶಾಟ್ ಗೆ ಪತ್ರುಗುಟ್ಟಿ ನೆಲಕ್ಕುರುಳಿದ ವ್ಯಕ್ತಿ.. ಈ ಎಲ್ಲಾ ಹೈಡ್ರಾಮ ಹಾಗೂ ಡೆಡ್ಲಿ ಅಟ್ಯಾಕ್ ನಡೆದಿದ್ದು ಗಡಿ ನಾಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಹೌದು ಕೇವಲ ಒಂದೇ ಒಂದು ಗುಂಟೆ ಜಾಗಕ್ಕಾಗಿ ಬೆಟ್ಟಹಳ್ಳಿ ಸಿದ್ದರಾಜುನಿಗು ಹಾಗೂ ಅದೇ ಗ್ರಾಮದ ಮಲ್ಲು ಅಲಿಯಾಸ್ ಲಾಂಗ್ ಮಲ್ಲು ನಡುವೆ ವ್ಯಾಜ್ಯವಿತ್ತು. ಕಳೆದ ಜುಲೈ 27 ರ ಸಂಜೆ 7.30ರ ಅಸುಪಾಸಿನ ಸಮಯ.. ಸಿದ್ದರಾಜು ಮನೆ ಬಳಿ ಬಂದ ಮಲ್ಲು ಇದು ನನಗೆ ಸೇರಬೇಕಾಗಿದ್ದ ಜಾಗ ಖ್ಯಾತೆ ತೆಗೆದಿದ್ದ ಸಾಲ್ದು ಅಂತ ಜಾಗವನ್ನ ಸಹ ತೆರವು ಕಾರ್ಯ ಮಾಡಿಸ್ಥಯಿದ್ದ ಅಸಲಿಗೆ ಸಿದ್ದರಾಜು ಹೆಸರಲ್ಲೇ ಆ ಜಾಗವಿದ್ರು ಬೇಕಂತಲೇ ಖ್ಯಾತೆ ತೆಗೆದು ಉಲ್ಟಾ ಲಾಂಗಿನಿಂದ ಮುಖದ ಭಾಗಕ್ಕೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ.
ಇನ್ನು ಗಲಾಟೆಯ ಸಂಪೂರ್ಣ ಚಿತ್ರಣ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದ್ದು ಡೆಡ್ಲಿ ಅಟ್ಯಾಕ್ ನ ರಣ ಭೀಕರ ದೃಶ್ಯ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಇಷ್ಟೊಂದು ಭಯಾನಕವಾಗಿ ಹಲ್ಲೆ ನಡೆಸಿದ ಬಳಿಕ ಮಲ್ಲು ಅಲಿಯಾಸ್ ಲಾಂಗ್ ಮಲ್ಲು ಲಾಂಗ್ ಅಲ್ಲೇ ಬಿಸಾಡಿ ಎಸ್ಕೇಪ್ ಆಗಿದ್ದ ತಕ್ಷಣವೇ ಗಾಯಾಳು ಸಿದ್ದರಾಜ್ ನನ್ನ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ಈಗ ಚಿಕಿತ್ಸೆ ಪಡೆದ ಬಳಿಕ ಸಿದ್ದರಾಜು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ನೆಪ ಮಾತ್ರಕ್ಕೆ ಎಫ್ ಐ ಆರ್ ಮಾಡ್ಕೊಂಡಿರುವ ಗುಂಡ್ಲುಪೇಟೆ ಟೌನ್ ಪೊಲೀಸರು ಇನ್ನು ಆರೋಪಿಯನ್ನ ಬಂಧಿಸದೆ ಇರುವುದು ಸಂತ್ರಸ್ಥ ಕುಟುಂಬದವರಿಗೆ ಭಾರಿ ಅನುಮಾನ ಹುಟ್ಟು ಹಾಕಿದೆ. ಪೊಲೀಸರ ಆತನ ಬಳಿ ಹಣ ಪಡೆದು ಇನ್ನು ಬಂಧಿಸದೆ ಹಾಗೇ ಬಿಟ್ಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದೇನೆ ಹೇಳಿ ಯಾರ ಭಯವಿಲ್ಲದೆ ಗ್ರಾಮದ ಮದ್ಯ ಭಾಗದಲ್ಲಿ ಲಾಂಗ್ ನಿಂದ ಹಲ್ಲೆ ಮಾಡಿದ್ರು ಖಾಕಿಗಳೇಕೆ ಮೌನ ವಹಿಸಿದ್ದಾರೆ.. ಇಂತ ಮೃಗಗಳಿಗೆ ಲಾಳ ಹಾಕಿ ಕಾನೂನು ರೀತಿಯ ಕ್ರಮ ಕೈಗೊಳ್ಳದೆ ಹೋದ್ರೆ ಇದು ಯುಪಿ ಬಿಹಾರದ ತರ ಗೂಂಡ ರಾಜ್ಯ ಆಗೋದ್ರಲ್ಲಿ ಎರೆಡು ಮಾತಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ