
ಕಲಬುರಗಿ, (ಆಗಸ್ಟ್ 6): ಕುಡಿತದ ಚಟ ಬಿಡಿಸಲು ನಾಟಿ ಔಷಧ ಸೇವಿಸಿದ ಕಾರಣ ಸೇಡಂ ತಾಲೂಕಿನ ಇಮಡಾಪೂರ ಗ್ರಾಮದಲ್ಲಿ ಮೂವರು ಮೃತಪಟ್ಟಿರುವ ದಾರುಣ ಘಟನೆ ಬುಧವಾರ ನಡೆದಿದೆ.
ಇದೇ ಔಷಧ ಸೇವಿಸಿದ ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತರನ್ನು ಸೇಡಂ ತಾಲೂಕಿನ ಬುರುಗಪಲ್ಲಿ ಗ್ರಾಮದ ಲಕ್ಷ್ಮೀ ನರಸಿಂಹಲು (45), ಶಹಬಾದ ಪಟ್ಟಣದ ಗಣೇಶ ಬಾಬು ರಾಠೋಡ (24) ಮತ್ತು ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕುಡಿತದ ಚಟವನ್ನು ಬಿಡಲು ಸ್ಥಳೀಯವಾಗಿ ಲಭ್ಯವಾದ ನಾಟಿ ಔಷಧವನ್ನು ಸೇವಿಸಿದ್ದರು. ಆದರೆ, ಔಷಧ ಸೇವಿಸಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿದೆ.
ಇದೇ ಔಷಧವನ್ನು ಸೇವಿಸಿದ ಲಕ್ಷ್ಮೀ ನರಸಿಂಹಲು ಪುತ್ರ ನಿಂಗಪ್ಪ ನರಸಿಂಹಲು ಗಂಭೀರ ಸ್ಥಿತಿಯಲ್ಲಿದ್ದು, ಕಲಬುರಗಿಯ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಔಷಧದ ಮೂಲ, ಅದರ ಗುಣಮಟ್ಟ ಮತ್ತು ತಯಾರಿಕೆ ಪರಿಶೀಲಿಸಲಾಗುತ್ತೆ. ಸ್ಥಳೀಯರು ಈ ಔಷಧವನ್ನು ಯಾರು ಸರಬರಾಜು ಮಾಡಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ.
ಯಾವುದೇ ಔಷಧವನ್ನು ಸೇವಿಸುವ ಮುನ್ನ ಗ್ರಾಮಸ್ಥರು ವೈದ್ಯಕೀಯ ಸಲಹೆ ಪಡೆಯುವುದು ಒಳ್ಳೆಯದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ