ಮ್ಯಾಟ್ರಿಮೊನಿಯಲ್ಲಿ ಮದುವೆ ಪ್ರಪೋಸ್ ಮಾಡಿ ಹುಡ್ಗೀರಿಗೆ ವಂಚಿಸೋದೇ ದೀಪಕ್‌ನ ಕಾಯಕ!

By Sathish Kumar KH  |  First Published Apr 11, 2024, 12:44 PM IST

ಬೆಂಗಳೂರಿನ ದೀಪಕ್ ನೋಡೋಕ್ ಮಾತ್ರ ಚಂದ. ಮಾಡೋದು ಮಾತ್ರ ಮನೆಹಾಳ ಕೆಲಸ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಯ ಯುವತಿಯರಿಗೆ ಮದುವೆ ಮಾಡಿಕೊಳ್ಳುವುದಾಗಿ ವಂಚನೆ ಮಾಡುವುದೇ ಈತನ ಕಾಯಕ ಆಗಿದೆ.


ಬೆಂಗಳೂರು (ಏ.11): ಈತ ನೋಡೋದಕ್ಕೂ ಕೆಂಪಗೆ ಇದ್ದಾನೆ. ಹ್ಯಾಂಡ್‌ಸಮ್ ಅಲ್ಲದಿದ್ದರೂ ಸುಮಾರಾಗಿ ಚೆನ್ನಾಗಿ ಕಾಣಿಸ್ತಾನೆ. ಇನ್ನೇನು ನಮಗೂ ಮದ್ವೆಯಾಗಿಲ್ಲ ಎಂದು ಗಂಡು ಹುಡುಕುತ್ತಿರುವರು ಈತನನ್ನು ನೋಡಿದರೆ, ಹಣ ಖರ್ಚಾದರೂ ಸರಿ ಮದುವೆ ಮಾಡಿ ಕೊಡೋಣ ಎನ್ನುವಂತಿದ್ದಾನೆ. ಆದರೆ, ಈತ ಮಾಡೋದು ಮಾತ್ರ ಮನೆಹಾಳ ಕೆಲಸ ಎಂಬುದು ಯಾರಿಗೂ ಗೊತ್ತಿಲ್ಲ. ಮ್ಯಾಟ್ರಿಮೊನಿಯಲ್ಲಿ ಮದುವೆಯಾಗ್ತೀನಿ ಎಂದು ಚೆಂದ ಚೆಂದದ ಫೋಟೋ ಹಾಕಿ ಯುವತಿಯರಿಗೆ ವಂಚಿಸೋದನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ನಮ್ಮ ರಾಜ್ಯದಲ್ಲಿ ಕೃಷಿ ಕಾರ್ಮಿಕರು, ರೈತರು ಹಾಗೂ ಮಧ್ಯಮ ವರ್ಗದ ಗ್ರಾಮೀಣ ಯುವಕರು ತಮಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಪರಿತಪಿಸುತ್ತಿದ್ದಾರೆ. ಆದರೆ, ಈ ವಂಚಕ ಜೀವನಕ್ಕಾಗಿ ಒಂದು ಕೆಲಸವನ್ನೂ ಮಾಡದೇ ಮದುವೆಯಾಗದ ಯುವತಿಯರಿಗೆ ವಂಚನೆ ಮಾಡುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದನು. ಈತ ಸಿಕ್ಕ ಸಿಕ್ಕ ಹುಡುಗೀರನ್ನೆಲ್ಲಾ ನಂಬಿಸಿ, ಮಾತಿನಲ್ಲಿಯೇ ಮರಳು ಮಾಡಿ ಯಾಮಾರಿಸುತ್ತಿದ್ದನು. ಈಗ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಪೊಲೀಸ್ ಠಾಣೆಯಲ್ಲಿ ಮುದ್ದೆ ಮುರಿಯುತ್ತಿದ್ದಾನೆ. 

Tap to resize

Latest Videos

ಮದುವೆಯಾದ ಪತ್ನಿಯನ್ನೇ ಕಾಲ್ ಗರ್ಲ್ ಮಾಡಿದ ಗಂಡ; ಫೇಸ್‌ಬುಕ್‌ನಲ್ಲಿ ಹೆಂಡತಿ ಫೊಟೋ ಹಂಚಿಕೊಂಡ ಕಿತಾಪತಿ

ಹೌದು, ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದು ಇಲ್ಲಿದ್ದಾನೆ ನೋಡಿ.. ತುಮಕೂರಿನ ನಿವಾಸಿಯಾಗಿರುವ ದೀಪಕ್ ಎಂಬ ವಂಚಕನ ಬಗ್ಗೆ.. ಈತ ಮ್ಯಾಟ್ರಿಮೊನಿಯಲ್ ಆಪ್‌ನಲ್ಲಿ ತನ್ನ ವಿವಿಧ ಫೋಟೋಗಳು ಹಾಗೂ ಹ್ಯಾಂಡ್‌ಸಮ್ ವ್ಯಕ್ತಿಗಳ ಫೋಟೋವನ್ನು ಹಾಕಿಕೊಂಡು ಮದುವೆಯ ಪ್ರಪೋಸಲ್‌ ಇಡುತ್ತಿದ್ದನು. ಇನ್ನು ತಾನು ಮಾಡೋದು ಮನೆಹಾಳ ಕೆಲಸವಾಗಿದ್ದರೂ, ತಮಿಳುನಾಡಿನ ಮಧುರೈ ಬ್ಯಾಂಕ್‌ ಒಂದರಲ್ಲಿ ಮ್ಯಾನೇಜರ್ ಆಗಿದ್ದೇನೆ ಎಂದು ಪ್ರೊಫೈಲ್ ಹಾಕಿಕೊಂಡಿದ್ದನು. ಈತ ಒಂದೇ ಬಾರಿಗೆ ಏಳೆಂಟು ಫೋನ್‌ಗಳನ್ನು ಮೆಂಟೇನ್‌ ಮಾಡುತ್ತಾ ಹುಡುಗಿಯರೊಂದಿಗೆ ಬಣ್ಣ ಬಣ್ಣದ ಮಾತನಾಡಿ ಹಣವನ್ನು ಪಡೆದು ಯಾಮಾರಿಸುತ್ತಿದ್ದನು.

ಜೆಪಿ ನಗರದ ಮಹಿಳೆಗೆ ವಂಚಿಸಿ ಸಿಕ್ಕಾಕೊಂಡ: ಮ್ಯಾಟ್ರಿಮೋನಿಯಲ್ಲಿ ವರಾನ್ವೇಷಣೆ ಮಾಡ್ತಿದ್ದ ಜೆ.ಪಿ ನಗರದ ಯುವತಿಗೆ ಮ್ಯಾಟ್ರಿಮೋನಿ ಆಪ್ ನಲ್ಲಿ ದೀಪಕ್‌ನ ಪರಿಚಯವಾಗಿದೆ. ಮಧುರೈನಲ್ಲಿ ಬ್ಯಾಂಕ್ ಉದ್ಯೋಗಿ, ನಿನ್ನನ್ನು ಮದುವೆ ಆಗ್ತೀನಿ ಎಂದಿದ್ದಾನೆ . ಅದರಂತೆ, ಒಂದು ದಿನ ತನ್ನ ವ್ಯಾಲೆಟ್ ಮಿಸ್ ಆಗಿದೆ, ಅರ್ಜೆಂಟ್‌ 30  ಸಾವಿರ ರೂ. ಹಣ ಹಾಕುವಂತೆ ಕೇಳಿದ್ದಾನೆ. ತಕ್ಷಣ ಯುವತಿ ಹಣ ಕಳಿಸಿದ್ದಾಳೆ. ಬರಬರುತ್ತಾ ಇದು ನನ್ನ ಆಫೀಸ್‌ ನಂಬರ್ ನನಗೊಂದು ಸಿಮ್ ಬೇಕು, ಈಗ ನಾನು ಬೆಂಗಳೂರಿಗೆ ಬರೋಕ್ಕಾಗಲ್ಲ. ನಿಮ್ಮದೇ ಹೆಸರಿನಲ್ಲಿ ಒಂದು ಸಿಮ್ ಖರೀದಿಸಿ ಕೊಡಿ ಎಂದು ಕೇಳಿದ್ದಾನೆ. ಆಗ, ಮಹಿಳೆ ಸಿಮ್ ಖರೀದಿಸಿ ಇಟ್ಟಾಗ, ತಮ್ಮ ಆಫೀಸ್ ಬಾಯ್‌ ಕಳಿಸ್ತೇನೆ ಅವರ ಕೈಗೆ ಸಿಮ್ ಕಾರ್ಡ್‌ ಕೊಟ್ಟು ಕಳುಹಿಸಿ ಎಂದು ಹೇಳಿದ್ದಾನೆ. ಸಿಮ್ ಅನ್ನು ಆಕೆ ಕೊಟ್ಟು ಕಳುಹಿಸಿದ್ದಾಳೆ. ನಂತರ, ಯುವತಿ ನಡೆದಿದ್ದನ್ನೆಲ್ಲ ತನ್ನ ಸ್ನೇಹಿತರೊಬ್ಬರ ಬಳಿ ಹೇಳಿಕೊಂಡಾದ ನೀವು ಮೋಸ ಹೋಗಿದ್ದೀರಿ ಎಂದು ಹೇಳಿದ್ದಾರೆ. 

ಮಹಿಳೆ ಹಣವನ್ನು ಕೇಳಿದಾಗ ಸಬೂಬು ಹೇಳುತ್ತಾ ದಿನಗಳನ್ನು ಮುಂದೂಡಿದ್ದಾನೆ. ಜೊತೆಗೆ, ಫೋನ್ ಸ್ವಿಚ್‌ ಆಫ್ ಮಾಡಿಕೊಳ್ಳಲೂ ಮುಂದಾಗಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನಂತರ, ಪೊಲೀಸರು  ಆತನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ತಾನು 3 ವರ್ಷಗಳಿಂದ ಯುವತಿಯರಿಗೆ ವಂಚನೆ ಮಾಡಿಕೊಂಡು ಬರುತ್ತಿರುವುದರ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಮ್ಯಾಟ್ರಿಮೊನಿಯಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, 250 ಮಹಿಳೆಯರಿಗೆ ವಂಚಿಸಿದ ಅಂಕಲ್!

ಹಣ ಅಕೌಂಟ್‌ಗೆ ಬಂದ ಕೂಡಲೇ ಸಿಮ್‌ ಕಾರ್ಡ್‌ ಎಸೆಯುತ್ತಿದ್ದ ಆರೋಪಿ: ಆರೋಪಿ ದೀಪಕ್ ಮ್ಯಾಟ್ರಿಮೊನಿಯಲ್ಲಿ ಸಿಗುವ ಯುವತಿಯರೊಂದಿಗೆ ಬಣ್ಣ ಬಣ್ಣದ ಮಾತನಾಡಿ ಹಣ ಹಾಕಿಸಿಕೊಳ್ಳುತ್ತಿದ್ದನು. ಯಾವಾಗ ಯುವತಿಯರಿಗೆ ವಂಚನೆಯ ಬಗ್ಗೆ ಅನುಮಾನ ಬರುತ್ತಿತ್ತೋ ಆಗಲೇ ಆ ಸಿಮ್‌ ಕಾರ್ಡ್‌ ಎಸೆದುಬಿಡುತ್ತಿದ್ದನು. ಈತ ಎರಡು ದಿನಗಳ ಅಂತರದಲ್ಲಿ ಬರೋಬ್ಬರಿ 7 ಸಿಮ್ ಖರೀದಿ ಮಾಡಿದ್ದನು. ಒಬ್ಬೊಬ್ಬ ಯುವತಿಯರ ಬಳಿ ತಲಾ ಒಂದೊಂದು ಸಿಮ್‌ ತರಿಸಿಕೊಂಡು ಅದರಿಂದ ಬೇರೊಬ್ಬರಿಗೆ ವಂಚನೆ ಮಾಡಿ ಸಿಮ್‌ ಬೀಸಾಡುತ್ತಿದ್ದನು. ಇನ್ನು ಈತ ವಾಟ್ಸಾಪ್‌ ಹಾಗೂ ಫೋನ್‌ ಕಾಲ್‌ಗಳಲ್ಲಿ ಮಾತನಾಡುತ್ತಿದ್ದನು. ಇದಕ್ಕೆ ಮನೆಯಲ್ಲಿದ್ದರೆ ಅಡ್ಡಿಯಾಗುತ್ತದೆಂದು ಕುಟುಂಬದಿಂದ ದೂರು ಉಳಿದುಕೊಂಡು ಲಾಡ್ಜ್‌ನಲ್ಲಿಯೇ ವಾಸ್ತವ್ಯ ಹೂಡಿದ್ದನು. ವಂಚನೆ ಮಾಡಿದ ಹಣದಲ್ಲಿ ಶೋಕಿ ಮಾಡುತ್ತಿದ್ದಾನೆ.

click me!