
ಮಹೀಂದ್ರಘಡ(ಏ.11) ಶಾಲಾ ಕಾಲೇಜುಗಳು ಶೈಕ್ಷಣಿಕ ವರ್ಷದ ಅಂತ್ಯದಲ್ಲಿದೆ. ಹಲವು ಶಾಲೆಗಳಿಗೆ ಈಗಾಲೇ ಬೇಸಿಗೆ ರಜೆ ನೀಡಲಾಗಿದೆ. ವಿದ್ಯಾರ್ಥಿಗಳ ಫಲಿತಾಂಶಗಳು ಪ್ರಕಟಗೊಳ್ಳುತ್ತಿದೆ. ಇದೀಗ ಶೈಶಕ್ಷಣಿಕ ವರ್ಷದ ಅಂತ್ಯದಲ್ಲಿ ದುರ್ಘಟನೆಯೊಂದು ನಡೆದಿದೆ. ಬಸ್ ಚಾಲಕ ಕುಡಿದು ಶಾಲಾ ಬಸ್ ಚಲಾಯಿಸಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. ನಶೆಯಲ್ಲಿ ಓವರ್ ಟೇಕ್ ಮಾಡಲು ಹೋದ ಕಾರಣ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಪರಿಣಾಮ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನು 20 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಹರ್ಯಾಣದ ಮಹೇಂದ್ರಘಡದಲ್ಲಿ ನಡೆದಿದೆ.
ಜಿಎಲ್ ಪಬ್ಲಿಕ್ ಸ್ಕೂಲ್ ಮಕ್ಕಳು ಶಾಲಾ ಬಸ್ ಹತ್ತಿ ಪ್ರಯಾಣ ಆರಂಭಿಸಿದ್ದಾರೆ. ಆದರೆ ಬಸ್ ಚಾಲಕ ಕುಡಿದು ಬಸ್ ಚಲಾಯಿಸುತ್ತಿದ್ದ ಅನ್ನೋ ಮಾತುಗಳು ಕೇಳಿಬಂದಿದೆ. ಉನ್ಹಾನಿ ಗ್ರಾಮದ ಲಿಂಕ್ ರೋಡ್ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಚಾಲಕ ಎದುರಿನಿಂದ ವಾಹನ ಬರುತ್ತಿದ್ದರೂ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಬಸ್‌ನ ವೇಗ ಹೆಚ್ಚಿಸಿದ್ದಾನೆ.
ಅಪಘಾತದ ವೇಳೆ ಕಣ್ಣಿನೊಳಗೆ ನುಗ್ಗಿದ ಬೈಕ್‌ನ ಬ್ರೇಕ್ ಹ್ಯಾಂಡಲ್ ಹೊರತೆಗೆದ ವೈದ್ಯರು
ವೇಗವಾಗಿ ಚಲಿಸಿದ ಬಸ್ ಓವರ್ ಟೇಕ್ ಮಾಡುತ್ತಿದ್ದಂತೆ ನಿಯಂತ್ರಣ ತಪ್ಪಿದೆ. ಪರಿಣಾಮ ಬಸ್ ಪಲ್ಟಿಯಾಗಿದೆ. ಅತೀ ವೇಗದ ಪರಿಣಾಮ ಬಸ್ ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಶಾಲೆಗೆ ತೆರಳಿದ್ದ ಮಕಳ ಪೈಕಿ 5 ವಿದ್ಯಾರ್ಥಿಗಳು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮತ್ತೊರ್ವ ವಿದ್ಯಾರ್ಥಿ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ. ಇತ್ತ 20 ಮಕ್ಕಳು ಗಾಯಗೊಂಡಿರುವುದಾಗಿ ವರದಿಯಾಗಿದೆ. ಎಲ್ಲಾ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಹಿಸ್ಸಾರ್ ಸೂಪರಿಡೆಂಟ್ ಆಫ್ ಪೊಲೀಸ್ ಅರ್ಶ್ ವರ್ಮಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಸ್ ಚಾಲಕನ ವಶಕ್ಕೆ ಪಡೆದಿರುವ ಪೊಲೀಸರು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಶಿಕ್ಷಣ ಸಚಿವೆ ಸೀಮಾ ತ್ರಿಖಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚೆನೆ ನೀಡಲಾಗಿದೆ.
ಘಟನೆಯಲ್ಲಿ ಮತೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಸಂಚಾಪ ಸೂಚಿಸಿರುವ ಶಿಕ್ಷಣ ಸಚಿವೆ, ಎಲ್ಲಾ ಕುಟಂಬದ ಜೊತೆ ಸರ್ಕಾರ ನಿಲ್ಲಿದೆ. ಅವರಿಗೆ ಅಗತ್ಯ ನೆರವು ನೀಡಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಬಸ್ ಚಾಲಕ ಹಾಗೂ ಎಜೆನ್ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಬೆಂಗಳೂರು: ರಂಜಾನ್ ಹಬ್ಬಕ್ಕೆ ಹೊಸ ಚಪ್ಪಲಿ ಖರೀದಿಗಾಗಿ ಬೈಕ್‌ನಲ್ಲಿ ಹೊರಟವರು ಅಪಘಾತಕ್ಕೆ ಬಲಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ