ನಿರ್ಮಾಣ ಹಂತದ ಕಟ್ಟಡದ ಕಂಪೌಂಡ್ ಕುಸಿದು ಕಾರ್ಮಿಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ನಡೆದಿದೆ. ಬಸಲಿಂಗಯ್ಯ ಶಾಸ್ತ್ರೀ (38) ಮೃತ ಕಾರ್ಮಿಕ.
ವಿಜಯಪುರ (ಮಾ.18): ನಿರ್ಮಾಣ ಹಂತದ ಕಟ್ಟಡದ ಕಂಪೌಂಡ್ ಕುಸಿದು ಕಾರ್ಮಿಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ನಡೆದಿದೆ.
ಬಸಲಿಂಗಯ್ಯ ಶಾಸ್ತ್ರೀ (38) ಮೃತ ಕಾರ್ಮಿಕ. ಹಗರಿಬೊಮ್ಮನಹಳ್ಳಿ ನಿವಾಸಿಯಾಗಿರು ಮೃತ ಕಾರ್ಮಿಕ. ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಸ್ಟೇಶನ್ ಕಟ್ಟಡದ ಕಂಪೌಂಡ್ ಕುಸಿದು ನಡೆದಿರುವ ದುರ್ಘಟನೆ. ಕಟ್ಟಡದ ಕಳಪೆ ಕಾಮಗಾರಿಯೇ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಕಾರ್ಮಿಕನ ಶವ ಹೊರತೆಗೆಯಲಾಗಿದೆ. ಕಾರ್ಮಿಕರ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿದೆ.
ದಾವಣಗೆರೆ: ಪಾನೀಪೂರಿ ತಿಂದು 19 ಮಕ್ಕಳು ಅಸ್ವಸ್ಥಗೊಂಡ ಪ್ರಕರಣ; ಚಿಕಿತ್ಸೆ ಫಲಿಸದೇ ಇಂದು ಓರ್ವ ಬಾಲಕ ಸಾವು!
ಕಳಪೆ ಕಾಮಗಾರಿಗೆ ಬಲಿ?
ಕಳಪೆ ಕಾಮಗಾರಿಯಿಂದಲೇ ಕಟ್ಟಡದ ಕಂಪೌಂಡ್ ಕುಸಿದು ಕಾರ್ಮಿಕನ ಬಲಿಪಡೆದಿದೆ ಕಾರ್ಮಿಕರು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದೊಳಗೆ ಸಿಲುಕಿದ ಕಾರ್ಮಿಕನ ಮೃತದೇಹ ಹೊರತೆಗೆಯುವ ವೇಳೆ ಪ್ರತಿಭಟನೆ ನಡೆಸಿದರು. ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಪೊಲೀಸರು ಪ್ರತಿಭಟನಕಾರರ ಮನವೊಲಿಸಿದರೂ ಜಗ್ಗದೆ ಪ್ರತಿಭಟನೆ ಮುಂದುವರಿಸಿರುವ ಕಾರ್ಮಿಕರು.
ಮುದ್ದೇಬಿಹಾಳ ಪೋಲಿಸ್ ಠಾಣೆಯ ಅಪರಾದ ವಿಭಾಗದ ಪಿಎಸ್‌ಐ ಎಸ್‌ಎನ್ ನಾಯ್ಕ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.