ಕಳೆದ ಎರಡು ವರ್ಷಗಳಿಂದ ಮುರುಘಾ ಮಠದ್ದು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗ್ತಾನೆ ಇದೆ. ಆದ್ರೆ ಶರಣರು ಜೈಲಿನಲ್ಲಿ ಇರುವಾಗಲೇ ಅವರಿಗೆ ಉಡುಗೊರೆಯಾಗಿ ನೀಡಿದ್ದ ಬೆಳ್ಳಿ ಪ್ರತಿಮೆಯನ್ನು ಕಳ್ಳರು ಎಸ್ಕೇಪ್ ಮಾಡಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜು.11): ಕಳೆದ ಎರಡು ವರ್ಷಗಳಿಂದ ಮುರುಘಾ ಮಠದ್ದು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗ್ತಾನೆ ಇದೆ. ಆದ್ರೆ ಶರಣರು ಜೈಲಿನಲ್ಲಿ ಇರುವಾಗಲೇ ಅವರಿಗೆ ಉಡುಗೊರೆಯಾಗಿ ನೀಡಿದ್ದ ಬೆಳ್ಳಿ ಪ್ರತಿಮೆಯನ್ನು ಕಳ್ಳರು ಎಸ್ಕೇಪ್ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ಹೌದು! ಭಕ್ತರು ಉಡುಗೊರೆಯಾಗಿ ನೀಡಿದ್ದ ಮುರುಘಾಶ್ರೀ ಬೆಳ್ಳಿ ಪ್ರತಿಮೆಯನ್ನು ಕಳ್ಳರು ಕದ್ದೊಯ್ದಿರುವ ಘಟನೆ ಚಿತ್ರದುರ್ಗ ಮುರುಘಾಮಠದಲ್ಲಿ ನಡೆದಿದೆ. ಸುಮಾರು 20 ಲಕ್ಷ ಮೌಲ್ಯದ ಬೆಳ್ಳಿ ವಿಗ್ರಹವನ್ನು ಅಕ್ಟೋಬರ್ 18, 2021 ರಂದು ಮುರುಘಾ ಶ್ರೀಗೆ ಅವರ ಭಕ್ತರು ಉಡುಗೊರೆಯಾಗಿ ನೀಡಿದ್ರು.
ಫೋಕ್ಸೋ ಕೇಸಲ್ಲಿ ಮುರುಘಾ ಶ್ರೀ ನ್ಯಾಯಂಗ ಬಂಧನದಲ್ಲಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ಮುರುಘಾಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರನ್ನು ಆಡಳಿತಾಧಿಕಾರಿಯಾಗಿ ಸರ್ಕಾರನೇ ಮಿಸಿದೆ. ಇದರ ಬೆನ್ನಲ್ಲೇ ಕಳೆದ ಜೂನ್ 26 ರಂದು ಮುರುಘಾಮಠದಲ್ಲಿನ ಸಭಾಂಗಣದಲ್ಲಿದ್ದ 22 ಕೆಜಿ ತೂಕದ ಮುರುಘಾಶ್ರೀ ಬೆಳ್ಳಿ ಪುತ್ಥಳಿ ಕಳ್ಳತನವಾಗಿದೆ. ಅಲ್ಲದೇ ಸಭಾಂಗಣದಲ್ಲಿನ ಸಿಸಿಟಿವಿ ಸಹ ಬಂದ್ ಆಗಿದ್ದು,ಈ ಬಗ್ಗೆ ಸೂಕ್ತ ತನಿಖೆ ಬಳಿಕವೇ ಸತ್ಯಾಸತ್ಯ ಹೊರಬರಬೇಕೆಂದು ವಿರಕ್ತ ಮಠದ ಬಸವಪ್ರಭು ಶ್ರೀ ತಿಳಿಸಿದ್ದಾರೆ. ಇನ್ನೂ ಈ ಪ್ರಕರಣ ಸಂಬಂಧ, ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಬಸವಕುಮಾರ ಶ್ರೀ ಪ್ರತಿಕ್ರಿಯೆ ನೀಡಿದ್ದು, ಈ ಕೃತ್ಯ ಹೇಗೆ ಆಯ್ತು ಎಂಬುದೇ ನಮಗೆ ಪ್ರಶ್ನೆಯಾಗಿದೆ.
ಇದೊಂದೆ ವಿಷಯಕ್ಕೆ ರಶ್ಮಿಕಾ ಮಂದಣ್ಣ ನಾಚುವುದಂತೆ..: ಆದರೂ ಇದು ನಿಮಗಾಗಿ ಎಂದಿದ್ಯಾಕೆ ನ್ಯಾಷನಲ್ ಕ್ರಶ್!
ಎಲ್ಲಾವು ಯಥಾಸ್ಥಿತಿಯಲ್ಲಿ ನಡೆದುಕೊಂಡು ಹೋಗ್ತಿರೋ ಈ ಸಮಯದಲ್ಲಿ ಈ ರೀತಿ ಕೃತ್ಯ ಆಗಿರೋದು ಬೇಸರ ತಂದಿದೆ. ಪುತ್ಥಳಿ ಕಳವು ಬಗ್ಗೆ ಬಸವಪ್ರಭು ಶ್ರೀಗಳೇ ತಿಳಿಸಿದ್ರು, ಮಂಡಳಿ ಅಧ್ಯಕ್ಷರಾದ ಕಳಸದ್ ಅವರ ಆದೇಶದ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆದಷ್ಟು ಬೇಗ ಪ್ರಕರಣ ಸತ್ಯಾಂಶ ಹೊರ ಬರಬೇಕಿದೆ ಎಂದರು. ಒಟ್ಟಾರೆಯಾಗಿ ಮುರುಘಾ ಮಠದಲ್ಲಿಯೇ ಈ ರೀತಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿರೋದು ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ತನಿಖೇ ಚುರುಕುಗೊಳಿಸಿರೋ ಪೊಲೀಸರು ಪ್ರತಿಮೆ ಕದ್ದ ಕಳ್ಳರಿಗೆ ಎಡೆಮುರಿ ಕಟ್ಟಬೇಕಿದೆ.