* ಚೆಕ್ ಅಪ್ ಗೆ ಎಂದು ಬಂದು ವೈದ್ಯನ ನಂಬರ್ ಪಡೆದುಕೊಂಡರು
* ನಯವಾಗಿ ಮಾತನಾಡಿ ಬುಟ್ಟಿಗೆ ಹಾಕಿಕೊಂಡರು
* ವೈದ್ಯನಿಗೆ ಚಾಟಿಂಗ್ ರುಚಿ ಹತ್ತಿಸಿದರು
ಕೊಲ್ಲಾಪುರ (ಜ. 03) ಇವರು ಅಂತಿಂಥ (Woman)ಮಹಿಳೆಯರಲ್ಲ. ಬಾಲಕಿಯೊಬ್ಬಳನ್ನು (Girl) ಮುಂದೆ ಮಾಡಿ ವೈದ್ಯನನ್ನು(Doctor) ಬಲೆಗೆ ಕೆಡವಿದ್ದರು. ಆತನಿಂದ ಲಕ್ಚಾಂತರ ರೂ. ಸುಲಿಗೆ ಮಾಡಿದ್ದರು.
ವೈದ್ಯನೊಬ್ಬನ್ನು ಬಲೆಗೆ ಬೀಳಿಸಿ ಆತನಿಂದ 60 ಲಕ್ಷ ರೂ. ವಂಚನೆಗೆ ಯತ್ನಿಸಿ ಮಾಡಿದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಚೆಕ್ ಅಪ್ ಗೆ ಎಂದು ಬಂದವರು ವೈದ್ಯನ ನಂಬರ್ ಪಡೆದುಕೊಂಡು ನಿಧಾನವಾಗಿ ಚಾಟಿಂಗ್ ಆರಂಭಿಸಿದ್ದಾರೆ.
undefined
ನಿಮ್ಮ ಮೇಲೆ ನಮಗೆ ಪ್ರೀತಿ ಹುಟ್ಟಿದೆ ಎಂದು ವೈದ್ಯರ ಜತೆ ಮಾತನಾಡಿ ನಿಧಾನವಾಗಿ ಚಾಟಿಂಗ್ ಮಾಡುತ್ತ ಬುಟ್ಟಿಗೆ ಹಾಕಿಕೊಂಡಿದ್ದರು. ಬಂಧಿತ ಮಹಿಳೆಯರನ್ಜು ಪೂನಂ ಪಾಟೀಲ್, ಪ್ರಾಚಿ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಮಹಿಳೆಯರ ಜತೆ ಅಪ್ರಾಪ್ತ ಬಾಲಕಿಯೊಬ್ಬಳ ವಿಚಾರಣೆಗೆ ಒಳಪಡಿಸಲಾಗಿದೆ.
Sexual Harassment : ಕೆಲಸ ಕೊಡಿಸುವ ನೆಪದಲ್ಲಿ ವಿವಾಹಿತೆಯನ್ನು ಹೋಟೆಲ್‌ಗೆ ಕರೆದ!
ಮಹಿಳೆಯರ ನಾಟಕ ನಂಬಿದ ವೈದ್ಯ ಅವರೊಂದಿಗೆ ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾನೆ. ಇದೇ ಆತನಿಗೆ ಮುಳುವಾಗಿದೆ. ಮೆಸೇಜ್ ಗಳನ್ನೇ ಇಟ್ಟುಕೊಂಡು ನಂತರ ಬ್ಲಾಕ್ ಮೇಲ್ ಆರಂಭಿಸಿದ್ದಾರೆ.
ಮೊದಲು ಹನ್ನೆ ರಡು ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಬೆದರಿದ ವೈದ್ಯ ಹಣ ನೀಡಿದ್ದಾನೆ. ಇದಾದ ಮೇಲೆ 48 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ಶೇರ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು. ಕೊನೆಗೆ ದಾರಿ ಕಾಣದ ವೈದ್ಯ ಪೊಲೀಸರ ಮೊರೆ ಹೋಗಿದ್ದಾನೆ.
400 ಮಹಿಳೆಯರ ಗುಪ್ತಾಂಗದ ವಿಡಿಯೋ ಸೆರೆ ಹಿಡಿದ ನಕಲಿ ಸ್ತ್ರೀರೋಗ ತಜ್ಞ! ನಕಲಿ ಸ್ತ್ರೀರೋಗತಜ್ಞನ ಬಣ್ಣ ಬಯಲಾಗಿದ್ದು, ಅಕ್ರಮವೆಸಗುತ್ತಿದ್ದ ಸ್ತ್ರೀರೋಗ ತಜ್ಞನನ್ನು ಪೊಲೀಸರು ಆತನನ್ನು ಬಂಧಿಸಿದ್ದರು. . ಈತ ನೂರಾರು ಮಹಿಳೆಯರ ಯೋನಿ ಪರೀಕ್ಷೆಯನ್ನು ವೆಬ್‌ಕ್ಯಾಮ್ ಮೂಲಕ ಮಾಡಿದ್ದಪ್ರಕರಣ ಇಟಲಿಯಿಂದ ವರದಿಯಾಗಿತ್ತು.
400ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿದ ಆರೋಪ ಇವರ ಮೇಲಿದೆ. ಪೊಲೀಸರು ದಾಳಿ ನಡೆಸಿ ಈ ವೈದ್ಯರನ್ನು ಬಂಧಿಸಿದ್ದಾರೆ. ಹಲವಾರು ಸಂತ್ರಸ್ತರು ದೂರು ನೀಡಿದ ನಂತರ ಬಳಿಕ ಹಲವಾರು ಸ್ಮಾರ್ಟ್‌ಫೋನ್‌ಗಳು ಮತ್ತು ಮೆಮೊರಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ, ನಂತರ ಅಧಿಕಾರಿಗಳು ಆರೋಪಿಗಳ ಟ್ಯಾಪಿಂಗ್ ನಡೆಸಿದ್ದಾರೆ.
ದೇಶಾದ್ಯಂತ ಕ್ಲಿನಿಕ್‌ಗಳಲ್ಲಿ ಸ್ವ್ಯಾಬ್ ಮಾಡಿದ ಮಹಿಳೆಯರನ್ನು ಈ ವ್ಯಕ್ತಿ ಗುರಿಯಾಗಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಆನ್‌ಲೈನ್ ಸ್ತ್ರೀರೋಗ ಪರೀಕ್ಷೆಗೆ ಒಳಗಾಗುವಂತೆ ಅವರನ್ನು ಮನವೊಲಿಸಿದ್ದಾರೆ. ಇಟಲಿಯಾದ್ಯಂತ ಲಾಜಿಯೊದಿಂದ ಲೊಂಬಾರ್ಡಿಯಾ ಮತ್ತು ಕ್ಯಾಲಬ್ರಿಯಾದವರೆಗೆ 400 ಕ್ಕೂ ಹೆಚ್ಚು ಮಹಿಳೆಯರು ಈ ನಕಲಿ ವೈದ್ಯನ ಬಲೆಗೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಿಪಬ್ಲಿಕಾ ಡೈಲಿಯೊಂದಿಗೆ ಮಾತನಾಡಿದ ಸಂತ್ರಸ್ತರೊಬ್ಬರು, ಆರೋಪಿಯು ವೈದ್ಯರಂತೆ ಪೋಸ್ ನೀಡಿದ್ದಾನೆ. ಅವರು ಮಹಿಳೆಯರ ಜನ್ಮ ದಿನಾಂಕ ಮತ್ತು ಸ್ಥಳವನ್ನು ತಿಳಿದಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ನಾನು ಸ್ತ್ರೀರೋಗ ಪರೀಕ್ಷೆಯನ್ನು ಮಾಡಿದ್ದೇನೆಯೇ ಎಂದು ಕೇಳಿದ್ದರು. ಎಲ್ಲಾ ಬಗೆಯ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ, ನಂತರ ಜೂಮ್ ಅಥವಾ ಹ್ಯಾಂಗ್‌ಔಟ್ ಮೂಲಕ ವೀಡಿಯೊ ಕರೆ ಮಾಡಿ ಕಿರುಕುಳ ನೀಡುತ್ತಿದ್ದ.