Pune Crime News : ಕಾರ್ಮಿಕನ ಸಿಟ್ಟು... ವೇತನ ಕೊಡದ ಕಂಪನಿಯ ವಾಹನಗಳು ಪುಡಿ ಪುಡಿ!

Published : Jan 03, 2022, 03:50 PM IST
Pune Crime News : ಕಾರ್ಮಿಕನ ಸಿಟ್ಟು...  ವೇತನ ಕೊಡದ ಕಂಪನಿಯ ವಾಹನಗಳು ಪುಡಿ ಪುಡಿ!

ಸಾರಾಂಶ

* ಕೆಲಸ ಮಾಡಿದ ಹಣ ಕೊಡಲಿಲ್ಲ ಎಂದು ಕಂಪನಿಯ ಉಪಕರಣ ಜಖಂ * ವಾಹನಗಳ ಗಾಜು ಪುಡಿ ಪುಡಿ ಮಾಡಿ ಪರಾರಿ * ಎರಡು ತಿಂಗಳು ಕೆಲಸ ಮಾಡಿದ ಹಣ ಕೊಟ್ಟಿಲ್ಲ ಎಂಬುದು ಸಿಟ್ಟಿನ ಮೂಲ * ಪುಣೆಯ ಕಂಪನಿ ಕೆಲಸಗಾರನ ವಿಚಿತ್ರ ವರ್ತನೆ

ಪುಣೆ (ಜ. 03)   ಕೆಲಸ ಮಾಡಿದ ಹಣ(salary)  ಕೊಟ್ಟಿಲ್ಲ ಎಂದು ತಾನು  ಕೆಲಸ ಮಾಡುತ್ತಿದ್ದ ಕಂಪನಿಯ (company) ಉಪಕರಣಗಳನ್ನು ಧ್ವಂಸ ಮಾಡಿದ ಆರೋಪದ ಮೇಲೆ ಪುಣೆ (Pune) ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದಾರೆ.   ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ಕಂಪನಿಯ ಕೆಲಸಗಾರನನ್ನು ಬಂಧಿಸಿದ್ದಾರೆ. ಕಂಪನಿಯ ಸರ್ವಣಕುಮಾರ್ ಸತ್ಯನಾರಾಯಣ ಶಾ (44) ಎಂಬುವರು ದೂರು ದಾಖಲಿಸಿದ್ದಾರೆ. 

ಹೊಸ ವರ್ಷದ ಮುನ್ನಾದಿನ ಮತ್ತು ಜನವರಿ 1 ರ ಬೆಳಿಗ್ಗೆ, ಆರೋಪಿಯು ಪುಣೆಯ ಮೋಶಿಯಲ್ಲಿರುವ ಕಂಪನಿಯ ಆಸ್ತಿ  ಹಾನಿ ಮಾಡಿದ್ದಾನೆ. ಏಳು ಡಂಪರ್‌ಗಳು, ಮೂರು ಮಿಕ್ಸರ್‌ಗಳು, ಒಂದು ಸ್ಪ್ರೇ ಬೌಸರ್, ಎರಡು ಟೆಂಪೋ ಮತ್ತು ಒಂದು ಜನರೇಟರ್ ವ್ಯಾನ್ ಗಳಿಗೆ ಹಾನಿ ಮಾಡಿದ್ದಾನೆ. ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾನೆ. ಕೆಲವು ಉಪಕರಣಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 435 ಮತ್ತು 427 ರ ಅಡಿಯಲ್ಲಿ ಎಂಐಡಿಸಿ ಭೋಸಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Delhi Crime: ತಡ ರಾತ್ರಿ ಬಂದು ಊಟ ಕೇಳಿದವರು ಮಾಡಿದ ದಾರುಣ ಕೆಲಸ!

ವರಾತ ತೆಗೆದ ಅತ್ತೆಯನ್ನು ಸ್ಕ್ರೂಡ್ರೈವರ್‌ನಿಂದ ಇರಿದು ಕೊಲೆಗೈದ ಸೊಸೆ!:  ಅತ್ತೆ-ಸೊಸೆ ಜಗಳ ಎಲ್ಲಿಯವರೆಗೆ ಎಂದರೆ ಕೊಲೆಯಾಗುವವರೆಗೆ (Murder) ಎನ್ನುವಂತೆ ಆಗಿದೆ ಈ ಸ್ಟೋರಿ. 27 ವರ್ಷದ ಮಹಿಳೆಯೊಬ್ಬರು (Woman) ತಮ್ಮ 46 ವರ್ಷದ ಅತ್ತೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಕೊಂದ ನಂತರ ಅತ್ತೆಯ ದೇಹವನ್ನು ಸುಟ್ಟು (Fire)ಹಾಕಿದ್ದಾರೆ.

ತಿರುಚ್ಚಿ ವಿಶ್ವಾಸ್ ನಗರದ ನಿವಾಸವೊಂದರಲ್ಲಿ  ಬೆಂಕಿ ಅವಘಡದಿಂದಾಗಿ  ಮಹಿಳೆ ಸಾವನ್ನಪ್ಪಿದಳು ಎಂದು ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ವೇಳೆ ಒಂದೊಂದೇ ವಿಚಾರಗಳು ಬಹಿರಂಗವಾದವು. 

ಡಿಸೆಂಬರ್ 30 ರಂದು, ಎಸ್ ಶಕಿಂಶಾ (74) ಎಂಬುವರು ಪೊಲೀಸ್   ತಮ್ಮ ಮಗಳು ನವೀನಾ ಮೇಲೆ ದಾಳಿ ಮಾಡಲಾಗಿದೆ ಎಂದು ದೂರು ನೀಡುತ್ತಾರೆ. ಆಕೆ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದು ತನಿಖೆ ಆಗಬೇಕು ಎಂದು ಆಗ್ರಹಿಸುತ್ತಾರೆ. . ಮೃತ ಮಗಳ ತಲೆಯ ಮೇಲೆ ಗಾಯಗಳಾಗಿವೆ ಎಂದು ಶಕಿಂಶಾ ಆರೋಪಿಸುತ್ತಾರೆ.

ಬೆಂಕಿ ಅವಘಡದ ಎಂದು ಹೇಳುತ್ತಿರುವ ಸಮಯದಲ್ಲಿ ನವೀನಾ ಸೊಸೆ ರೇಷ್ಮಾ ಮತ್ತು ಆಕೆಯ ಎರಡು ವರ್ಷದ ಪುತ್ರ ಮನೆಯಲ್ಲೇ ಇದ್ದರು. ಅವರು ಹೇಗೆ ಬಚಾವಾದರು ಎಂದು ಪ್ರಶ್ನೆ ಮಾಡುತ್ತಾರೆ. 

ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಏತನ್ಮಧ್ಯೆ, ಸಂತ್ರಸ್ತೆಯ ತಲೆಯ ಮೇಲಿನ ಗಾಯದ ಬಗ್ಗೆ ಪೊಲೀಸರು ರೇಷ್ಮಾಳನ್ನು ವಿಚಾರಣೆ ನಡೆಸಿದ್ದಾರೆ. ನಂತರ ಸೊಸೆ ರೇಷ್ಮಾ ನವೀನ್‌ನನ್ನು ಸ್ಕ್ರೂಡ್ರೈವರ್‌ನಿಂದ ಇರಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ, ಅವಳು ಬಲಿಪಶುವಿನ ದೇಹವನ್ನು ಸೀಮೆಎಣ್ಣೆಯಿಂದ ಸುಟ್ಟಿದ್ದು ಅಗ್ನಿ ಅನಾಹುತದ ನಾಟಕ ಮಾಡಿದ್ದಾರೆ.

ಅತ್ತೆ ಸೊಸೆ ಜಗಳ: ಕೆಲಸ ಮಾಡುತ್ತಿದ್ಗದ ಅತ್ತೆ ಅಡುಗೆ ಮನೆಯ ನೆಲದ ಮೇಲೆ ಜಾರಿ ಬಿದ್ದಿದ್ದಾರೆ. ಈ ವೇಳೆ ಸಹಾಯಕ್ಕೆಂದು ಸೊಸೆಯನ್ನು ಕರೆದಿದ್ದಾರೆ. ಸೊಸೆ ಬರುವುದು ತಡವಾಗಿದೆ ಎಂದು ಅತ್ತೆ ದೂರಿದ್ದಾರೆ.  ಈ ವೇಳೆ ಕೋಪಗೊಂಡ ಸೊಸೆ ರೇಷ್ಮಾ ಸ್ಕ್ರೂಡ್ರೈವರ್ ಬಳಸಿ ಅತ್ತೆಗೆ ಅನೇಕ ಬಾರಿ ಇರಿದಿದ್ದಾಳ. ಅತ್ತೆ ಸ್ಥಳದಲ್ಲೇ ಸಾವು ಕಂಡಿದ್ದಾರೆ.  ರೇಷ್ಮಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

 ಎಣ್ಣೆ ಹಾಕಲು 100 ಕೇಳಿದವನ ಕೊಲೆ:    ಮದ್ಯಪಾನ (Liquor)ಮಾಡಲು 100 ಕೇಳಿದವನಿಗೆ ತೂಕ ಮಾಡುವ ಬಟ್‌ನಿಂದ ತಲೆಗೆ ಹೊಡೆದು ಕೊಂದ ಪ್ರಕರಣ ಬೆಂಗಳೂರಿನಿಂದ ವರದಿಯಾಗಿತ್ತು. ಅಪಘಾತವಾಗಿದೆ ಎಂದು ಸುಳ್ಳಿನ ಕತೆ ಹೇಳಿ ತಪ್ಪಿಸಿಕೊಂಡಿದ್ದ ಮಾಂಸದಂಗಡಿ ಕೆಲಸಗಾರನೊಬ್ಬ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ(Bengaluru Police) ಸಿಕ್ಕಿಬಿದ್ದಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!