ಕೊಲ್ಕತ್ತಾದಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಪಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಆದ್ರೂ ಆತನ ಪರ ಕಬಿತಾ ಸರ್ಕಾರ್ ವಾದ ಮಂಡಿಸಲಿದ್ದಾರೆ. ಅಷ್ಟಕ್ಕೂ ಆತನಿಗೆ ಯಾಕೆ ವಕೀಲರು ಬೇಕು, ಆ ವಕೀಲರು ಯಾರು ಎನ್ನುವ ವಿವರ ಇಲ್ಲಿದೆ.
ಕೊಲ್ಕತ್ತಾ ಆರ್ ಜಿ ಆರ್ ಮೆಡಿಕಲ್ ಕಾಲೇಜಿ (Kolkata RGR Medical College) ನಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ (trainee doctor raped and murder) ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮುಖ್ಯ ಆರೋಪಿ ಸಂಜಯ್ ರಾಯ್ (Sanjay Roy) ನನ್ನು ಸಿಬಿಐ ವಶಕ್ಕೆ ಪಡೆದಿದೆ. ಸಂಜಯ್ ರಾಯ್ ವಿರುದ್ಧ ಸಾಕಷ್ಟು ಸಾಕ್ಷ್ಯ ಸಿಕ್ಕಿದ್ದು, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಈ ಮಧ್ಯೆ ಕೋಲ್ಕತ್ತಾದ ಸೀಲ್ದಾ ನ್ಯಾಯಾಲಯವು ಕಬಿತಾ ಸರ್ಕಾರ್ ಅವರನ್ನು ಸಂಜಯ್ ರಾಯ್ ಅವರ ವಕೀಲರನ್ನಾಗಿ ನೇಮಿಸಿದೆ.
ಸಂಜಯ್ ರಾಯ್ ಗೆ ಪಾಲಿಗ್ರಾಫ್ ಪರೀಕ್ಷೆ ಸಹ ನಡೆಸಲಾಗಿದೆ. ಇದ್ರಲ್ಲಿ ಸಂಜಯ್ ತಾನು ತಪ್ಪು ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಸಂಜಯ್ ಮೇಲೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿರುವ ಈ ಸಮಯದಲ್ಲಿ ಆತನ ಪರ ವಾದ ಮಾಡಲು ವಕೀಲರು ಮುಂದಾಗಿದ್ದಾರೆ ಎಂದಾಗ ಅಚ್ಚರಿ ಆಗೋದು ಸಹಜ. ಬಹುತೇಕರು ಕಬಿತಾ ಸರ್ಕಾರ್ ವಿರುದ್ಧವೂ ಕೆಂಡಕಾರಿದ್ದಾರೆ. ಈ ಬಗ್ಗೆ ಕಬಿತಾ ಸರ್ಕಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
undefined
ಪ್ರವಾಸಿ ತಾಣಗಳಲ್ಲಿ ನಕಲಿ ಆನ್‌ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೇ ಟೋಪಿ? ಕಳಸ ಡಿಆರ್‌ಎಫ್‌ಒ ಅಮಾನತು
ಸಂಜಯ್ ರಾಯ್ ಪರ ವಾದ ಮಂಡಿಸಲಿರುವ ಕಬಿತಾ ಸರ್ಕಾರ್ ಹೇಳೋದೇನು? : ಕಬಿತಾ ಸರ್ಕಾರ್, ಕಳೆದ 25 ವರ್ಷಗಳಿಂದ ವಕೀಲ ವೃತ್ತಿಯಲ್ಲಿದ್ದಾರೆ. ಅವರು ಅಲಿಪುರ ನ್ಯಾಯಾಲಯದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಸಂಜಯ್ ರಾಯ್ ಕೇಸ್ ಒಪ್ಪಿಕೊಂಡ ಕಬಿತಾ, ಯಾವುದೇ ವ್ಯಕ್ತಿ, ಆರೋಪಿಯಾಗಿದ್ದರೂ ನ್ಯಾಯಯುತ ವಿಚಾರಣೆಗೆ ಎಲ್ಲರಿಗೂ ಹಕ್ಕು ನೀಡಲಾಗಿದೆ. ಸಂಜಯ್ ಪರ ವಾದ ಮಂಡಿಸೋದು ನನ್ನ ಕರ್ತವ್ಯ. ಕಾನೂನು ಸಹಾಯ ನೀಡುವ ವಕೀಲನಾಗಿರುವ ಕಾರಣ, ಎಲ್ಲ ಪ್ರಕರಣದಂತೆ ಈ ಪ್ರಕರಣದಲ್ಲೂ ಕಾನೂನು ಪ್ರಕಾರ ನಾನು ನನ್ನ ಕರ್ತವ್ಯವನ್ನು ಮಾಡ್ತಿದ್ದೇನೆ ಎಂದಿದ್ದಾರೆ.
ಘೋರ ಅಪರಾಧದ ಆರೋಪಿಗೆ ವಕೀಲರು ಏಕೆ ಇರಬೇಕು? : ಸಂಜಯ್ ರಾಯ್ ಕೇಸ್ ತೆಗೆದುಕೊಳ್ಳಲು ಯಾವುದೇ ವಕೀಲರು ಸಿದ್ಧವಿರಲಿಲ್ಲ. ನಂತ್ರ ಸೀಲ್ದಾ ನ್ಯಾಯಾಲಯ ಕಬಿತಾ ಸರ್ಕಾರ್ ಅವರನ್ನು ವಕೀಲರನ್ನಾಗಿ ನೇಮಿಸಿದೆ. ವ್ಯಕ್ತಿ ಯಾವುದೇ ಅಪರಾಧ ಮಾಡಿರಲಿ, ಭಾರತದ ಸಂವಿಧಾನವು ಎಲ್ಲಾ ನಾಗರಿಕರಿಗೆ ನ್ಯಾಯಯುತ ವಿಚಾರಣೆ ಮತ್ತು ನ್ಯಾಯದ ಹಕ್ಕನ್ನು ನೀಡುತ್ತದೆ. ಇದನ್ನು ಸಂವಿಧಾನದ 39ಎ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿದೆ.
ಸಮಾನ ಅವಕಾಶದ ಆಧಾರದ ಮೇಲೆ ಎಲ್ಲರಿಗೂ ನ್ಯಾಯವನ್ನು ನೀಡಬೇಕೆಂದು ಆರ್ಟಿಕಲ್ 39Aನಲ್ಲಿ ಹೇಳಲಾಗಿದೆ. ಯಾವುದೇ ನಾಗರಿಕರು ಹಣಕಾಸಿನ ಅಡಚಣೆ ಅಥವಾ ಇನ್ನಾವುದೇ ಕಾರಣದಿಂದ ನ್ಯಾಯ ಪಡೆಯುವ ಅವಕಾಶದಿಂದ ವಂಚಿತರಾಗಬಾರದು. ಇದಕ್ಕಾಗಿ ಸರ್ಕಾರ ಉಚಿತ ಕಾನೂನು ನೆರವು ವ್ಯವಸ್ಥೆ ಮಾಡಲಿದೆ. ಎಲ್ಲಾ ನಾಗರಿಕರು ನ್ಯಾಯಯುತ ವಿಚಾರಣೆಯ ಹಕ್ಕನ್ನು ಹೊಂದಿದ್ದಾರೆ, ಇದಕ್ಕಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಸರ್ಕಾರವು ರಾಜ್ಯ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳನ್ನು ರಚಿಸುತ್ತದೆ. ಒಬ್ಬ ಆರೋಪಿ ಅಥವಾ ಯಾವುದೇ ವ್ಯಕ್ತಿಯು ಕಾನೂನು ವೆಚ್ಚವನ್ನು ಭರಿಸಲಾಗದಿದ್ದರೆ ಅಥವಾ ವಕೀಲರು ಅವರ ಪ್ರಕರಣದಲ್ಲಿ ಹೋರಾಡಲು ನಿರಾಕರಿಸಿದಾಗ, ನ್ಯಾಯಾಲಯವು ಅವನನ್ನು ಪ್ರತಿನಿಧಿಸಲು ಕಾನೂನು ಸೇವೆಗಳ ಪ್ರಾಧಿಕಾರವನ್ನು ನೇಮಿಸುತ್ತದೆ.
ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಊಟದ ವ್ಯವಸ್ಥೆ: ಅತ್ತ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ.. ಇದು ದಾಸನ ಜೈಲು
ಕಸಬ್ ಪರ ವಾದ ಮಂಡನೆ : 2008ರ ನವೆಂಬರ್ 26ರಂದು ಮುಂಬೈನಲ್ಲಿ ಉಗ್ರರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಉಳಿದ ಎಲ್ಲಾ ಉಗ್ರರು ಸಾವನ್ನಪ್ಪಿದ್ದರು. ಆದ್ರೆ ಅಜ್ಮಲ್ ಕಸಬ್ ಜೀವಂತವಾಗಿ ಸಿಕ್ಕಿಬಿದ್ದಿದ್ದ. ಅಜ್ಮಲ್ ಕಸಬ್ ಪ್ರಕರಣದ ವಿರುದ್ಧ ಹೋರಾಡಲು ವಕೀಲರು ನಿರಾಕರಿಸಿದ್ದರು. ಇದರ ನಂತರ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಅವರನ್ನು ಮಹಾರಾಷ್ಟ್ರ ಕಾನೂನು ಸೇವಾ ಪ್ರಾಧಿಕಾರವು ಅವರ ವಕೀಲರನ್ನಾಗಿ ನೇಮಿಸಿತ್ತು. ನಿರ್ಭಯಾ ಪ್ರಕರಣದಲ್ಲೂ ವಕೀಲರ ನೇಮಕವಾಗಿತ್ತು.