
ಸಾಮಾನ್ಯವಾಗಿ ಮನೆಯಲ್ಲಿ ಭದ್ರವಾಗಿ ತೆಗೆದಿಟ್ಟ ಚಿನ್ನವನ್ನು ಯಾರೂ ಕೂಡ ಆಗಾಗ ನೋಡಿಕೊಂಡು ಇರುವುದಿಲ್ಲ, ಏನಾದರೂ ದೊಡ್ಡ ಹಬ್ಬ ಸಮಾರಂಭಗಳಿದ್ದಾಗ ಮಾತ್ರ ಈ ಚಿನ್ನದ ದುಬಾರಿ ಆಭರಣಗಳು ಕತ್ತನ್ನು ಅಲಂಕರಿಸುತ್ತವೆ. ಹೀಗಾಗಿ ಕುಟುಂಬವೊಂದಕ್ಕೆ ತಮ್ಮ ಮನೆಯಲ್ಲಿ ಚಿನ್ನ ಕದ್ದೋಗಿ ಆರು ತಿಂಗಳುಗಳೇ ಕಳೆದಿದ್ದರೂ ಅದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ, ಆದರೆ ಇತ್ತೀಚೆಗೆ ಅವರ ಹಳೆಯ ಕೆಲಸದಾಕೆಯ ಡಾನ್ಸ್ ವೀಡಿಯೋವೊಂದು ವೈರಲ್ ಆಗಿ ಮನೆ ಮಾಲೀಕರನ್ನು ತಲುಪಿತ್ತು. ಅದರಲ್ಲಿ ಕೆಲಸದಾಕೆ ಧರಿಸಿದ್ದ ಚಿನ್ನಾಭರಣ ನೋಡಿ ಅನುಮಾನ ಬಂದು ತಮ್ಮ ಮನೆಯ ಚಿನ್ನ ಇಡುವ ಕಬೋರ್ಡ್ ತೆಗೆದ ಮನೆ ಮಾಲೀಕರಿಗೆ ಶಾಕ್ ಕಾದಿತ್ತು. ಅಲ್ಲಿಟ್ಟಿದ್ದ ಅವರ ಚಿನ್ನದ ಆರಭರಣಗಳು ಮಿಸ್ ಆಗಿತ್ತು.
ಪಶ್ಚಿಮ ಬಂಗಳದ ಕೋಲ್ಕತ್ತಾದಲ್ಲಿ ಘಟನೆ
ಅಂದಹಾಗೆ ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಇಲ್ಲಿನ ಬೆಹಲಾದ ಯುನಿಕ್ಯೂ ಪಾರ್ಕ್ ನಿವಾಸಿಯೂ ಆಗಿದ್ದ ಸಂಚಿತಾ ಮುಖರ್ಜಿ ಎಂಬುವವರು 35 ವರ್ಷದ ಪೂರ್ಣಿಮಾ ಮೊಂಡಲ್ ಅವರನ್ನು ಮೂರು ವರ್ಷದ ಹಿಂದೆ ತಮ್ಮ ಮನೆ ಕೆಲಸದಾಕೆಯಾಗಿ ನೇಮಿಸಿದ್ದರು. ಆದರೆ ಕಳೆದ ಅಕ್ಟೋಬರ್‌ನಲ್ಲಿ ಈ ಪೂರ್ಣಿಮಾ ಕೆಲಸ ಬಿಟ್ಟಿದ್ದಳು. ಆದರೆ ಸಂಚಿತಾ ಹಾಗೂ ಅವರ ಪತಿ ಸಮಿರನ್ ಅವರಿಗೆ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವುದು ಇತ್ತೀಚೆಗಷ್ಟೇ ಗಮನಕ್ಕೆ ಬಂದಿತ್ತು.
ಚಿನ್ನ ಕದ್ದು ಕೆಲಸಬಿಟ್ಟಿದ ಕಳ್ಳಿ
ಇತ್ತ ಈ ಪೂರ್ಣಿಮಾಗೆ ರೀಲ್ಸ್ ಮಾಡುವ ಹುಚ್ಚಿತ್ತು. ಆಕೆ ಆಗಾಗ ಡಾನ್ಸ್ ಮಾಡಿ ಈ ರೀಲ್ಸ್‌ನ್ನು ಯೂಟ್ಯೂಬ್‌ನಲ್ಲಿ ಶಾರ್ಟ್ಸ್ ರೂಪದಲ್ಲಿ ಅಪ್‌ಲೋಡ್ ಮಾಡುತ್ತಿದ್ದಳು. ಕೆಲಸದಾಕೆ ಪೂರ್ಣಿಮಾ ಮೊಂಡಲ್ ಯೂಟ್ಯೂಬ್‌ನಲ್ಲಿ ಶಾರ್ಟ್ಸ್ ಎಂಬ ಹೊಸ ರೀಲ್‌ಗಳನ್ನು ಅಪ್‌ಲೋಡ್ ಮಾಡುವ ಹುಚ್ಚಿಗೆ ಬಿದ್ದಿದ್ದಳು. ಅದಕ್ಕಾಗಿ ಅವಳು ರಸ್ತೆಗಳಲ್ಲಿಯೂ ನೃತ್ಯ ಮಾಡಿ ಅವುಗಳನ್ನು ಅಲ್ಲಿ ಪೋಸ್ಟ್ ಮಾಡುತ್ತಿದ್ದಳು. ಆದರೆ, ಅನಕ್ಷರಸ್ಥಳಾಗಿದ್ದರಿಂದ, ಕಾಮೆಂಟ್‌ಗಳ ವಿಭಾಗದಲ್ಲಿನ ಕಾಮೆಂಟ್‌ಗಳನ್ನು ಓದಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ ಮತ್ತು ಆಗಾಗ್ಗೆ ಆಕೆ ನನ್ನ ಸಹಾಯವನ್ನು ಕೇಳುತ್ತಿದ್ದಳು. ಹೀಗೆ ನಾನು ಅಂತಹ ಒಂದು ಸಣ್ಣ ವೀಡಿಯೊವನ್ನು ಪರಿಶೀಲಿಸುತ್ತಿದ್ದಾಗ ಅವಳು ನನ್ನದೇ ಆಭರಣಗಳನ್ನು ಧರಿಸಿದ್ದಾಳೆಂಬುದನ್ನು ನಾನು ಅರಿತುಕೊಂಡೆ ಎಂದು ಮನೆ ಮಾಲಕಿ ಸಂಚಿತಾ ಮುಖರ್ಜಿ ಘಟನೆ ತಮ್ಮ ಅರಿವಿಗೆ ಹೇಗೆ ಬಂತು ಎಂಬ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಾನು ಅಕ್ಟೋಬರ್ 2024 ರಿಂದ ನನ್ನ ಮನೆಯಿಂದ ಎರಡು ಚಿನ್ನದ ಕಿವಿಯೋಲೆಗಳನ್ನು ಕಳೆದುಕೊಂಡಿದ್ದೇನೆ. ಏಪ್ರಿಲ್ ಮೊದಲ ವಾರದಲ್ಲಿ, ಮಂಡಲ್ ನನ್ನ ಕಳೆದುಹೋದ ಚಿನ್ನದ ಕಿವಿಯೋಲೆಗಳಲ್ಲಿ ಒಂದನ್ನು ಧರಿಸಿ ಹಲವಾರು ಯೂಟ್ಯೂಬ್ ಶಾರ್ಟ್ಸ್ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾಳೆ ಎಂದು ನನಗೆ ತಿಳಿದು ಬಂದಿದೆ. ನಾನು ವೀಡಿಯೊವನ್ನು ನನ್ನ ಮೊಬೈಲ್‌ನಲ್ಲಿ ಉಳಿಸಿಕೊಂಡಿದ್ದೇನೆ. ಅವಳು ನನ್ನ ಮನೆಯಲ್ಲಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದಾಗ ನನ್ನ ಎರಡು ಚಿನ್ನದ ಕಿವಿಯೋಲೆಗಳನ್ನು ಕದ್ದಿದ್ದಾಳೆ ಎಂದು ನನಗೆ ಅನುಮಾನವಿದೆ ಎಂದು ಮುಖರ್ಜಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬರೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪರ್ಣಶ್ರೀ ಪೊಲೀಸರು ಮೊಂಡಲ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಮುಖರ್ಜಿ ಅವರ ಎರಡು ಕಿವಿಯೋಲೆಗಳನ್ನು ಮಾತ್ರವಲ್ಲದೆ ಅವರ ಪತಿಗೆ ಸೇರಿದ ಒಂದು ಉಂಗುರವನ್ನು ಸಹ ವಶಪಡಿಸಿಕೊಂಡಿದ್ದಾರೆ, ನಾವು ಪ್ರಕರಣದ ತನಿಖೆ ಮುಂದುವರಿಸಿದ್ದೇವೆ ಮತ್ತು ಮೊಂಡಲ್ ತಾನು ಕೆಲಸ ಮಾಡುತ್ತಿದ್ದ ಇತರ ನಿವಾಸಗಳಿಂದ ಕದ್ದ ಇನ್ನೂ ಕೆಲವು ವಸ್ತುಗಳನ್ನೂ ವಶಪಡಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಹಿರಿಯ ತನಿಖಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಇಡೀ ಮನೆಯನ್ನು ಪರಿಶೀಲಿಸಲು ಸಾಧ್ಯವಾಗದ ಕಾರಣ, ನನ್ನ ಮಾಜಿ ಸೇವಕಿ ಇನ್ನೇನಾದರೂ ಕದ್ದಿದ್ದಾಳೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ ಪೊಲೀಸರು ನನ್ನ ದೂರನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕ್ರಮ ಕೈಗೊಂಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ" ಎಂದು ಮುಖರ್ಜಿ ಹೇಳಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಈಗ ಲಾಲ್ ಬಜಾರ್ ಪೊಲೀಸರು ಮನೆಕೆಲಸದಾಕೆಯನ್ನು ಇಟ್ಟುಕೊಳ್ಳುವ ಕೆಲವರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಇಂತಹ ಅಪರಾಧಗಳಿಗೆ ಬಲಿಯಾಗುವ ಸಾಧ್ಯತೆಗಳನ್ನು ತಡೆಯಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು. ನಿಮ್ಮ ಮನೆಯ ಅಲ್ಮೇರಾಗಳಿಗೆ ಬೀಗ ಹಾಕಬೇಕು. ಮನೆಗೆ ಕೆಲಸಕ್ಕೆ ಬರುವವರನ್ನು ಪರಿಶೀಲಿಸಬೇಕು ಹಾಗೂ ಅವರ ಮುಂದೆ ಹಣಕಾಸಿನ ಚರ್ಚೆಗಳನ್ನು ತಪ್ಪಿಸಬೇಕು ಎಂದು ಲಾಲ್‌ಬಜಾರ್‌ನ ಕಳ್ಳತನ ವಿರೋಧಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ