Kodagu: ದೇವಾಲಯಕ್ಕೆ ಕನ್ನ ಹಾಕಿ ದೇವರ ಚಿನ್ನಾಭರಣ, ಹುಂಡಿ ದೋಚಿದ್ದ ಖದೀಮರು ಅಂದರ್!

By Govindaraj SFirst Published Aug 23, 2024, 7:41 PM IST
Highlights

ರಾತ್ರೋ ರಾತ್ರಿ ದೇವಾಲಯಕ್ಕೆ ಕನ್ನ ಹಾಕಿ ದೇವರ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂಪಾಯಿಯನ್ನು ದೋಚಿದ್ದ ಖದೀಮರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಅಸ್ಸಾಂ ಮೂಲದ ಅಲ್ತಾಫ್ ಅಲಿ, ಮೀರ್ ಹುಸೇನ್ ಬಂಧಿತ ಆರೋಪಿಗಳು. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.23): ರಾತ್ರೋ ರಾತ್ರಿ ದೇವಾಲಯಕ್ಕೆ ಕನ್ನ ಹಾಕಿ ದೇವರ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂಪಾಯಿಯನ್ನು ದೋಚಿದ್ದ ಖದೀಮರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಅಸ್ಸಾಂ ಮೂಲದ ಅಲ್ತಾಫ್ ಅಲಿ, ಮೀರ್ ಹುಸೇನ್ ಬಂಧಿತ ಆರೋಪಿಗಳು. ಹೌದು ಮಡಿಕೇರಿ ನಗರದಲ್ಲಿನ ಶಕ್ತಿ ದೇವತೆಗಳಲ್ಲಿ ಒಂದಾದ ಕೋಟೆ ಮಾರಿಯಮ್ಮ ದೇವಾಲಯಕ್ಕೆ ಇದೇ ತಿಂಗಳ 16 ರ ರಾತ್ರಿ ಬಾಗಿಲು ಮುರಿದು ಒಳನುಗ್ಗಿದ್ದ ಆರೋಪಿಗಳು ದೇವಾಲಯದ ಹುಂಡಿಯನ್ನು ಹೊಡೆದು ಎರಡುವರೆ ಲಕ್ಷ ರೂಪಾಯಿ ನಗದು ದೋಚಿದ್ದರು. ಜೊತೆಗೆ ದೇವರ 111 ಗ್ರಾಂ ಬೆಳ್ಳಿಯ ಹಾಗೂ 3 ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದರು. 

Latest Videos

ಕಳವು ಪ್ರಕರಣದಲ್ಲಿ ತಮ್ಮ ಸುಳಿವು ಸಿಗಬಾರದೆಂದು ದೇವಾಲಯದ ಸಿಸಿ ಟಿವಿ ಕ್ಯಾಮೆರಾಗಳನ್ನು ಬೇರೆಡೆಗೆ ತಿರುಗಿಸಿದ್ದರು. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ದೇವಾಲಯದ ಸುತ್ತಮುತ್ತಲಿನ ಕಟ್ಟಡಗಳಲ್ಲಿ ಇದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅಷ್ಟೇ ಏಕೆ ನಗರದ ವಿವಿಧ ಪ್ರಮುಖ ಸ್ಥಳಗಳಿಂದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಆಗಲೇ ನೋಡಿ ದೇವಾಲಯದ ಬಾಗಿಲು ಮುರಿದು ಒಳನುಗ್ಗಿ ನಗ, ನಾಣ್ಯ ದೋಚಿದ್ದ ಖದೀಮರು ಯಾರೆಂದು ಗೊತ್ತಾಗಿತ್ತು. ಅಷ್ಟಕ್ಕೂ ಈ ಖದೀಮರು ದೇವಾಲಯಕ್ಕೆ ಅಚಾನಕ್ಕಾಗಿ ನುಗ್ಗಿದರಲ್ಲ.  ಬದಲಾಗಿ ನಗರದ ಹಲವೆಡೆ ಸುತ್ತಾಡಿ ಇದೇ ದೇವಾಲಯಕ್ಕೆ ನುಗ್ಗವುದಕ್ಕೆ ಪ್ಲಾನ್ ಮಾಡಿದ್ದರು. 

ಹೀಗಾಗಿ ಮಡಿಕೇರಿ ನಗರದ ಎಲ್ಲೆಲ್ಲಿ ಇವರು ಸುತ್ತಾಡಿದ್ದರೋ ಅದೆಲ್ಲದರ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನೆಲ್ಲಾ ಮಡಿಕೇರಿ ನಗರ ಪೊಲೀಸರು ಸಂಗ್ರಹಿಸಿದ್ದಾರೆ. ಇದನ್ನೇ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಮಡಿಕೇರಿ ತಾಲ್ಲೂಕಿನ ಮೂರ್ನಾಡಿನಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 95 ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.  ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರಿಂದ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿದ್ದು ಜನರು ಎಚ್ಚರ ವಹಿಸುವಂತೆ ಕೊಡಗು ಎಸ್ಪಿ ಕೆ ರಾಮರಾಜನ್ ಸೂಚಿಸಿದ್ದಾರೆ. ಅಸ್ಸಾಂ ಅಥವಾ ಬೇರೆ ಯಾವುದೇ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು ಅವರಿಂದ ದಾಖಲೆಗಳನ್ನು ಪಡೆದುಕೊಳ್ಳಿ. 

ನಾವು ರಾಜ್ಯಪಾಲರನ್ನು ಅವಮಾನಿಸಿಲ್ಲ, ಕಲ್ಲು ಹೊಡೆಯುವುದು ಹೇಡಿತನ: ಬಿ.ಕೆ.ಹರಿಪ್ರಸಾದ್‌

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆಸುವ ವೇಳೆ ನೀವೆ ಜವಾಬ್ದಾರರು ಆಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ್ದ ಖತರ್ನಾಕ್ ಒಬ್ಬ ಮಹಿಳೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ ಖದೀಮನನ್ನು ಭಾಗಮಂಡಲ ಪೊಲಿಸರು ಬಂಧಿಸಿದ್ದಾರೆ. ಸಮೀಪದ ಚೇರಂಬಾಣೆ ಗ್ರಾಮದ ಪುಪ್ಷ ಎಂಬ ಮಹಿಳೆಯ ಮನೆಗೆ ನುಗ್ಗಿ ಚಾಕು ತೋರಿಸಿ ಚಿನ್ನಾಭರಣ ದೋಚಿದ್ದ ಸುದರ್ಶನ್ ಎಂಬಾತನನ್ನು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆ ನಡೆದಿದ್ದ ಪ್ರಕರಣದಲ್ಲಿ ನಿನ್ನೆ ಸಂಜೆ ಅಷ್ಟರಲ್ಲೇ ಆರೋಪಿಯನ್ನು ಬಂಧಿಸಿ ಜನರ ಪ್ರಶಂಸೆಗೆ ಒಳಗಾಗಿದ್ದಾರೆ.

click me!