
ಕೊಡಗು (ಜೂ.15): ಕೊಡಗು ಜಿಲ್ಲೆಯ ಹೆಬ್ಬಾಗಿಲಾದ ಕುಶಾಲನಗರ ಪಟ್ಟಣದಲ್ಲಿ ಬೈಕ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಸ್ಕೂಟಿ ಸವಾರಿ ಮಾಡುತ್ತಿದ್ದ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತವಾಗ ಸಂಭವಿಸಿದ ಯುವತಿಯನ್ನು ಭಾವನಾ (21) ಎಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದ ಅಪಘಾತ ನಡೆದಿದೆ. ಕುಶಾಲನಗರದ ಇಂದಿರಾ ಬಡಾವಣೆಯ ನಿವಾಸಿ ಪೂಣಚ್ಚ ಎಂಬುವರ ಪುತ್ರಿ ಭಾವನಾ ಈಗ ಸಾವಿಗೀಡಾಗಿದ್ದಾರೆ. ಕುಶಾಲನಗರದ ಬೈಚನಹಳ್ಳಿ ಬಳಿ ನಡೆದ ಅಪಘಾತ ಸಂಭವಿಸಿದೆ. ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಯುವತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇನ್ನು ಘಟನೆ ಕುರಿತಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
VIJAYAPURA: ಸ್ಕೂಟಿಗಾಗಿ ಯುವತಿಯ ಕುತ್ತಿಗೆ ಕೊಯ್ದ ಹಂತಕರು
ಮುಗಿಲು ಮುಟ್ಟಿದ ಆಕ್ರಂದನ: ಬೈಕ್ ಮತ್ತು ಸ್ಕೂಟಿ ಅಪಘಾತದಲ್ಲಿ ರಸ್ತೆಗೆ ಬಿದ್ದ ಯುವತಿಯ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಇನ್ನು ಯುವತಿಯನ್ನು ಸ್ಥಳೀಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲು ಕರೆತರಲಾಗುತ್ತಿತ್ತು. ಆದರೆ, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವತಿ ದಾರಿ ಮಧ್ಯದಲ್ಲಿಯೇ ತಂದೆ- ತಾಯಿ ಮಡಿಲಲ್ಲಿ ಪ್ರಾಣವನ್ನು ಬಿಟ್ಟಿದ್ದಾಳೆ. ಮಗಳ ಸಾವನ್ನು ನೋಡಿದ ಪೋಷಕರು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಕೂಟಿಗಾಗಿ ಯುವತಿಯ ಕುತ್ತಿಗೆ ಕೊಯ್ದ ಹಂತಕರು
ವಿಜಯಪುರ (ಜೂ.15): ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ದೊಣ್ಣೆಯಿಂದ ತಲೆಗೆ ಹೊಡೆದು ನಂತರ ಹರಿತವಾದ ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಸ್ಕೂಟಿಯನ್ನು ದುಷ್ಕರ್ಮಿಗಳು ಕದ್ದೊಯ್ದಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ. ಸಿಂಧಗಿ ಪಟ್ಟಣದ ಹೊರ ವಲಯದಲ್ಲಿ ದುರ್ಘಟನೆ ನಡೆದಿದ್ದು, ಸಂಜೆ ವೇಳೆ ಸಾರ್ವಜನಿಕರ ಸಂಚಾರ ಇಳಿಮುಖವಾಗುತ್ತಿದ್ದಂತೆ ರಸ್ತೆಯ ಪಕ್ಕದಲ್ಲಿ ಹೊಂಚು ಹಾಕಿಕೊಂಡು ಕಾಯುತ್ತಿದ್ದ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಯುವತಿಯ ಬರ್ಬರ ಹತ್ಯೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ಹೊರ ವಲಯದ ಕೊಬೊಟೊ ಶೋರೂಂ ಬಳಿ ನಡೆದಿದೆ. ಗಂಗೂಬಾಯಿ ಯಂಕಂಚಿ (28) ಹತ್ಯೆಯಾದ ಯುವತಿ ಆಗಿದ್ದಾರೆ. ರಸ್ತೆಯಲ್ಲೆ ಮಾರಕಾಸ್ತ್ರಗಳಿಂದ ಯುವತಿಯ ಮೇಲೆ ದಾಳಿ ಮಾಡಲಾಗಿದೆ.
ತಾನು ತಾಯಿ ಆಗಲು 4 ವರ್ಷದ ಮಲಮಗನ ಬಲಿಕೊಟ್ಟ ಕ್ರೂರಿ ಮಹಿಳೆ
ರಕ್ತದ ಮಡುವಿನಲ್ಲಿಯೇ ಯುವತಿ ನರಳಾಡಿ ಸಾವು: ಇನ್ನು ಯುವತಿ ಒಬ್ಬಂಟಿಯಾಗಿ ಸ್ಕೂಟಿ ಮೇಲೆ ಹೊರಟಿದ್ದ ವೇಳೆ ದುಷ್ಕರ್ಮಿಗಳ ದಾಳಿ ಮಾಡಿದ್ದಾರೆ. ದಾಳಿ ವೇಳೆ ಯುವತಿಗೆ ಹೊಡೆದಿದ್ದು, ಆಕೆ ಕೆಳಗೆ ಬಿದ್ದ ನಂತರ ಚೀರಾಡುವುದನ್ನು ತಡೆಯಲು ಹರಿತವಾದ ಮಾರಕಾಸ್ತ್ರದಿಂದ ಆಕೆಯ ಕುತ್ತಿಗೆಯನ್ನು ಕೊಯ್ಯಲಾಗಿದೆ. ರಸ್ತೆಯ ಪಕ್ಕದಲ್ಲಿಯೇ ಯುವತಿ ಕುತ್ತಿಗೆ ಕುಯ್ದಿದ್ದು, ರಕ್ತದ ಮಡುವಿನಲ್ಲಿಯೇ ಯುವತಿ ನರಳಾಡಿ ಸ್ಥಳದಲ್ಲಿಯೇ ಪ್ರಾಣವನ್ನು ಬಿಟ್ಟಿದ್ದಾಳೆ. ಇನ್ನು ಹತ್ಯೆ ಮಾಡಿದ ಬಳಿಕ ಹಂತಕರು ಯುವತಿ ಓಡಿಸುತ್ತಿದ್ದ ಸ್ಕೂಟಿಯನ್ನು ಕೊಂಡೊಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ