ವಿಜಯಪುರದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಹರಿತವಾದ ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಹಂತಕರು ಸ್ಕೂಟಿಯನ್ನು ಕದ್ದೊಯ್ದಿದ್ದಾರೆ.
ವಿಜಯಪುರ (ಜೂ.15): ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ದೊಣ್ಣೆಯಿಂದ ತಲೆಗೆ ಹೊಡೆದು ನಂತರ ಹರಿತವಾದ ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಸ್ಕೂಟಿಯನ್ನು ದುಷ್ಕರ್ಮಿಗಳು ಕದ್ದೊಯ್ದಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ.
ಸಿಂಧಗಿ ಪಟ್ಟಣದ ಹೊರ ವಲಯದಲ್ಲಿ ದುರ್ಘಟನೆ ನಡೆದಿದ್ದು, ಸಂಜೆ ವೇಳೆ ಸಾರ್ವಜನಿಕರ ಸಂಚಾರ ಇಳಿಮುಖವಾಗುತ್ತಿದ್ದಂತೆ ರಸ್ತೆಯ ಪಕ್ಕದಲ್ಲಿ ಹೊಂಚು ಹಾಕಿಕೊಂಡು ಕಾಯುತ್ತಿದ್ದ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಯುವತಿಯ ಬರ್ಬರ ಹತ್ಯೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ಹೊರ ವಲಯದ ಕೊಬೊಟೊ ಶೋರೂಂ ಬಳಿ ನಡೆದಿದೆ. ಗಂಗೂಬಾಯಿ ಯಂಕಂಚಿ (28) ಹತ್ಯೆಯಾದ ಯುವತಿ ಆಗಿದ್ದಾರೆ. ರಸ್ತೆಯಲ್ಲೆ ಮಾರಕಾಸ್ತ್ರಗಳಿಂದ ಯುವತಿಯ ಮೇಲೆ ದಾಳಿ ಮಾಡಲಾಗಿದೆ.
BBMP SCAM: 118 ಕೋಟಿ ರೂ. ಹಗರಣ ಮಾಡಿದ ಬಿಬಿಎಂಪಿ ಇಂಜಿನಿಯರ್‌ಗಳು ಸಸ್ಪೆಂಡ್
ರಕ್ತದ ಮಡುವಿನಲ್ಲಿಯೇ ಯುವತಿ ನರಳಾಡಿ ಸಾವು: ಇನ್ನು ಯುವತಿ ಒಬ್ಬಂಟಿಯಾಗಿ ಸ್ಕೂಟಿ ಮೇಲೆ ಹೊರಟಿದ್ದ ವೇಳೆ ದುಷ್ಕರ್ಮಿಗಳ ದಾಳಿ ಮಾಡಿದ್ದಾರೆ. ದಾಳಿ ವೇಳೆ ಯುವತಿಗೆ ಹೊಡೆದಿದ್ದು, ಆಕೆ ಕೆಳಗೆ ಬಿದ್ದ ನಂತರ ಚೀರಾಡುವುದನ್ನು ತಡೆಯಲು ಹರಿತವಾದ ಮಾರಕಾಸ್ತ್ರದಿಂದ ಆಕೆಯ ಕುತ್ತಿಗೆಯನ್ನು ಕೊಯ್ಯಲಾಗಿದೆ. ರಸ್ತೆಯ ಪಕ್ಕದಲ್ಲಿಯೇ ಯುವತಿ ಕುತ್ತಿಗೆ ಕುಯ್ದಿದ್ದು, ರಕ್ತದ ಮಡುವಿನಲ್ಲಿಯೇ ಯುವತಿ ನರಳಾಡಿ ಸ್ಥಳದಲ್ಲಿಯೇ ಪ್ರಾಣವನ್ನು ಬಿಟ್ಟಿದ್ದಾಳೆ. ಇನ್ನು ಹತ್ಯೆ ಮಾಡಿದ ಬಳಿಕ ಹಂತಕರು ಯುವತಿ ಓಡಿಸುತ್ತಿದ್ದ ಸ್ಕೂಟಿಯನ್ನು ಕೊಂಡೊಯ್ದಿದ್ದಾರೆ.
ಕುತ್ತಿಗೆಯಲ್ಲೇ ಚಾಕು ಬಿಟ್ಟು ಹೋದ ಹಂತಕರು: ಗ್ರಾಮೀಣ ಭಾಗಕ್ಕೆ ಕೆಲಸಕ್ಕೆ ತೆರಳಿ ಮರಳಿ ಸಿಂಧಗಿ ಪಟ್ಟಣಕ್ಕೆ ಬರುವಾಗ ಘಟನೆ ನಡೆದಿದೆ. ಸಿಂಧಗಿ ಪಟ್ಟಣದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ನಡೆದ ದಾಳಿಯ ವೇಳೆ ಸಾರ್ವಜನಿಕರು ಸುತ್ತಲೂ ಇದ್ದರೂ ಯಾವುದೇ ಭಯವಿಲ್ಲದೆ ಕೃತ್ಯ ಎಸಗಿದ್ದಾರೆ. ನಂತರ, ಚಾಕುವಿನಿಂದ ಚುಚ್ಚಿ, ಕುತ್ತಿಗೆಯನ್ನು ಕೊಯ್ದಿದ್ದಾರೆ. ಆದರೆ, ಹಂತಕರು ಯುವತಿಯನ್ನು ಕೊಲೆ ಮಾಡಲು ಬಳಸಿದ್ದ ಚಾಕುವನ್ನು ಕೂಡ ಯುವತಿಯ ಕುತ್ತಿಗೆಯಲ್ಲಿಯೇ ಬಿಟ್ಟು ಪರಾರಿ ಆಗಿದ್ದಾರೆ. ಹಲ್ಲೆ ಮಾಡಲು ಬಳಸಿದ್ದ ದೊಣ್ಣೆಯೂ ಕೂಡ ಯುವತಿ ಮೃತದೇಹದ ಪಕ್ಕದಲ್ಲಿಯೇ ಬಿದ್ದಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ ಯುವತಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ತಾಯಿ ಆಗಲು 4 ವರ್ಷದ ಮಲಮಗನ ಬಲಿಕೊಟ್ಟ ಕ್ರೂರಿ ಮಹಿಳೆ
ಅಮೇಥಿ: ಉತ್ತರಪ್ರದೇಶದ ಅಮೇಥಿಯಲ್ಲಿ ಮಾನವ ಸಮಾಜ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ಮಂತ್ರವಾದಿಯೋರ್ವನ ಮಾತು ಕೇಳಿ ಮಹಿಳೆಯೊಬ್ಬಳು ತನ್ನ 4 ವರ್ಷದ ಮಲಮಗನ ಬಲಿ ಕೊಟ್ಟಿದ್ದಾಳೆ. ಮಗುವನ್ನು ಬಲಿ ಕೊಟ್ಟರೆ ನೀನು ತಾಯಿಯಾಗುತ್ತಿಯಾ ಎಂದು ಮಂತ್ರವಾದಿ ಮಹಿಳೆಗೆ ಸಲಹೆ ನೀಡಿದ್ದಾನೆ. ಆತನ ಮಾತು ಕೇಳಿದ ಮಹಿಳೆ ತಾನು ತಾಯಿಯಾಗುವ ದುರಾಸೆಗೆ ಬಲಿ ಬಿದ್ದು, ಏನು ಅರಿಯದ ಪುಟ್ಟ ಕಂದನನ್ನು ಬಲಿ ನೀಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಂತ್ರವಾದಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
Bengaluru : ಸ್ವಂತ ಮಗಳೇ ಹೆತ್ತ ತಾಯಿಯನ್ನು ಕೊಂದಿದ್ದಕ್ಕೆ ಕೊನೆಗೂ ಸಿಕ್ತು ಕಾರಣ
ಕೊಲೆ ಮಾಡಿ ದೇಹವನ್ನೂ ಸುಟ್ಟರು: ಎರಡು ದಿನದ ಹಿಂದೆ ನರಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಮಂತ್ರವಾದಿ, ಮಲತಾಯಿ ಹಾಗೂ ಆಕೆಯ ಪೋಷಕರನ್ನು ಬಂಧಿಸಿದ್ದಾರೆ. ಜೊತೆಗೆ ಘಟನಾ ಸ್ಥಳದಿಂದ ಗಾಂಜಾ, ನಿಂಬೆಹುಳಿ, ಟವೆಲ್, ಬೈಕ್, ಜಾಯಿಕಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಅಮೇಥಿ ಜಿಲ್ಲೆಯ ಜಮೋ ಪೊಲೀಸ್ ಠಾಣಾ ವ್ಯಾಪ್ತಿಯ ಉಮರ್ದಿಹ್ ರೆಸಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿತೇಂದ್ರ ಪ್ರಜಾಪತಿ ಎಂಬುವವರ 4 ವರ್ಷದ ಕಂದ ಸತ್ಯೇಂದ್ರ ಪ್ರಜಾಪತಿಯ ಅರ್ಧ ಸುಟ್ಟ ದೇಹ ಎರಡು ದಿನದ ಹಿಂದೆ ಮನೆಯಿಂದ ಸ್ವಲ್ಪ ದೂರದಲ್ಲಿ ಕಾಣಿಸಿಕೊಂಡಿತ್ತು. ಈ ವಿಚಾರ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಶುರು ಮಾಡಿದ್ದಾರೆ.