
ಮೈಸೂರು(ಆ.18): ಮನೆಗೆ ಆಹ್ವಾನ ಪತ್ರ ನೀಡುವ ನೆಪದಲ್ಲಿ ಆಗಮಿಸಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಚಿನ್ನದ ವ್ಯಾಪಾರಿ ಮತ್ತು ಅವರ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ಬುಧವಾರ ನಡೆದಿದೆ.
ಹೂಟಗಳ್ಳಿಯ ನಿವಾಸಿ ಬಾಬುರಾವ್ ಮತ್ತು ಅವರ ಪತ್ನಿ ಕಮಲಾಬಾಯಿ ಎಂಬವರೇ ಗಾಯಗೊಂಡವರು. ಬುಧವಾರ ಮಧ್ಯಾಹ್ನ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮಹಿಳೊಂದಿಗೆ ಆಗಮಿಸಿದ ವ್ಯಕ್ತಿ ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!
ಮಹಿಳೆಯೊಂದಿಗೆ ಅಪರಿಚಿತ ವ್ಯಕ್ತಿಯು ಆಹ್ವಾನ ಪತ್ರಿಕೆ ನೀಡಲು ಮನೆಗೆ ಬಂದಿದ್ದರು. ಪತಿ ಕಿರುಚಿದ್ದು ಕೇಳಿ ಹೊರ ಬಂದು ನೋಡಿದಾಗ ಅಪರಿಚಿತ ಅವರ ಹೊಟ್ಟೆ ಹಾಗೂ ಕೈಗೆ ಚುಚ್ಚಿ ಹಲ್ಲೆ ಮಾಡುತ್ತಿದ್ದ. ನಿನಗೆ ಏನು ಬೇಕೆಂದು ಕೇಳಿದಾಗ, ನಿಮ್ಮ ಮಗ ಬೇಕೆಂದು ಹೇಳಿದ. ನನ್ನ ಬಾಯಿಗೆ ಬಟ್ಟೆ ತುರುಕಿದ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕೈಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಗಾಯಾಳು ಕಮಲಾಬಾಯಿ ದೂರು ನೀಡಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ