ಹಾವೇರಿ: ಮೊಬೈಲ್‌ ಕದ್ದು ಹಣ ದೋಚುತ್ತಿದ್ದ 3 ಆರೋಪಿಗಳ ಬಂಧನ

Published : Aug 17, 2023, 10:00 PM IST
ಹಾವೇರಿ: ಮೊಬೈಲ್‌ ಕದ್ದು ಹಣ ದೋಚುತ್ತಿದ್ದ 3 ಆರೋಪಿಗಳ ಬಂಧನ

ಸಾರಾಂಶ

ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಗುಂಜರಿಯಾ ಸಾಯಿಕುಮಾರ, ಅಕುಲ ವಡಿವೇಲು ಮತ್ತು 12 ವರ್ಷದ ಬಾಲಕನೊಬ್ಬನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳಿಂದ 1.36 ಲಕ್ಷ ನಗದು, 27 ಕಂಪನಿಯ ವಿವಿಧ ಮೊಬೈಲ್‌ಗಳು, ಕೃತ್ಯಕ್ಕೆ ಬಳಸಿದ ಟಾಟಾ ಇಂಡಿಗೋ ಕಾರು ವಶಪಡಿಸಿಕೊಂಡ ಪೊಲೀಸರು. 

ಗುತ್ತಲ(ಆ.17):  ಮೊಬೈಲ್‌ ಕದ್ದು ಹಣ ದೋಚುವ ಪ್ರಕರಣ ಭೇದಿಸಿರುವ ಗ್ರಾಮೀಣ ಠಾಣೆಯ ಸಿಪಿಐ, ಗುತ್ತಲ ಪೊಲೀಸ್‌ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಅಂತರ್‌ರಾಜ್ಯಗಳ ಮೂವರನ್ನು ಬಂಧಿಸಿದ್ದು, ಆರೋಪಿಗಳಿಂದ ಹಣ, ಮೊಬೈಲ್‌ ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿದ ಕಾರವೊಂದನ್ನು ವಶಪಡಿಸಿಕೊಂಡಿದ್ದಾರೆ.

ಹೊರ ರಾಜ್ಯಗಳಿಂದ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳು ಜನದಟ್ಟಣೆಯ ಪ್ರದೇಶಗಳಾದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಮಾರುಕಟ್ಟೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಬಾಲಕನ ಮೂಲಕ ಮೊಬೈಲ್‌ ಕಳ್ಳತನ ಮಾಡಿಸುತ್ತಿದ್ದರು. ನಂತರ ಮೊಬೈಲ್‌ನ ಲಾಕ್‌ ತೆಗೆದು ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ಗಳಾದ ಗೂಗಲ್‌ ಪೇ, ಪೋನ್‌ ಪೇ, ಪೇಟಿಎಂಗಳ ಮೂಲಕ ಹಣವನ್ನು ಇತರ ಅಕೌಂಟಿಗೆ ವರ್ಗಾಯಿಸಿಕೊಳ್ಳುವ ಮೂಲಕ ಲಕ್ಷಗಟ್ಟಲೇ ಹಣವನ್ನು ದೋಚುತ್ತಿದ್ದರು ಎಂದು ತಿಳಿದುಬಂದಿದೆ.

ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!

ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಗುಂಜರಿಯಾ ಸಾಯಿಕುಮಾರ, ಅಕುಲ ವಡಿವೇಲು ಮತ್ತು 12 ವರ್ಷದ ಬಾಲಕನೊಬ್ಬನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳಿಂದ 1.36 ಲಕ್ಷ ನಗದು, 27 ಕಂಪನಿಯ ವಿವಿಧ ಮೊಬೈಲ್‌ಗಳು, ಕೃತ್ಯಕ್ಕೆ ಬಳಸಿದ ಟಾಟಾ ಇಂಡಿಗೋ ಕಾರವೊಂದನ್ನು ವಶಪಡಿಸಿಕೊಂಡಿರುವುದಾಗಿ ಸಿಪಿಐ ಸಂತೋಷ ಪವಾರ ಮಾಹಿತಿ ನೀಡಿದ್ದಾರೆ.

ಗುತ್ತಲ ಹೋಬಳಿಯಲ್ಲಿ ಇಂತಹ ಪ್ರಕರಣಗಳು ದಾಖಲಾದ ಕುರಿತಂತೆ ಪೊಲೀಸ್‌ ಅಧೀಕ್ಷಕ ಡಾ. ಶಿವಕುಮಾರ ಗುಣಾರೆ, ಹೆಚ್ಚುವರಿ ಪೋಲಿಸ್‌ ಅಧೀಕ್ಷಕ ಸಿ. ಗೋಪಾಲ, ಡಿವೈಎಸ್ಪಿ ಎಂ.ಎಸ್‌. ಪಾಟೀಲ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಗ್ರಾಮೀಣ ಠಾಣೆಯ ಸಿಪಿಐ ಸಂತೋಷ ಪವಾರ ಹಾಗೂ ಪಿಎಸ್‌ಐ ಶಂಕರಗೌಡ ಪಾಟೀಲ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ