ಹುಬ್ಬಳ್ಳಿ: ಟವರ್‌ ಮೇಲೆ ಎರಡು ಧರ್ಮಧ್ವಜ ಪ್ರಕರಣ, ಇಬ್ಬರ ಬಂಧನ

By Kannadaprabha News  |  First Published Aug 17, 2023, 11:30 PM IST

ಹಳೇ ಹುಬ್ಬಳ್ಳಿ ಆನಂದನಗರ ಘೋಡ್ಕೆ ಪ್ಲಾಟ್‌ನ ಮೊಬೈಲ್‌ ಟವರ್‌ ಮೇಲೆ ಕೆಲ ಕಿಡಿಗೇಡಿಗಳು ಮಂಗಳವಾರ ಎರಡೂ ಧರ್ಮದ ಧ್ವಜಗಳನ್ನು ಕಟ್ಟಿದ್ದರು. ಇಲ್ಲಿರುವ ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. 


ಹುಬ್ಬಳ್ಳಿ(ಆ.17):  ಇಲ್ಲಿನ ಆನಂದನಗರದ ಘೋಡ್ಕೆ ಪ್ಲಾಟ್‌ನ ಟವರ್‌ ಮೇಲೆ ಎರಡು ಧರ್ಮದ ಧ್ವಜ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೈಯದ್‌ಅಲಿ ನಾಗನೂರ, ರವಿ ನಾಗರಾಜ ಕಾನನಾ ಬಂಧಿತರು. ಇದಕ್ಕೂ ಮೊದಲು ಪೊಲೀಸ್‌ ಇನಸ್ಪೆಕ್ಟರ್‌ ಸುರೇಶ ಯಳ್ಳೂರ ನೇತೃತ್ವದ ತಂಡ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಟವರ್‌ ಮೇಲೆ ಪಾರಿವಾಳ ಕೂಡದಿರಲು ಧ್ವಜ ಕಟ್ಟಿದ್ದೇವೆ ಎಂದು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ಬೀದಿಯಲ್ಲಿರುವ ದನಗಳ ಹಿಡಿದು ಮಾರಾಟ, ಕೇರಳ ಮೆಡಿಕಲ್ ಕಾಲೇಜು ಸಿಬ್ಬಂದಿ ಬಂಧನ!

ಘಟನೆಯ ಹಿನ್ನೆಲೆ:

ಇಲ್ಲಿನ  ಹಳೇ ಹುಬ್ಬಳ್ಳಿ ಆನಂದನಗರ ಘೋಡ್ಕೆ ಪ್ಲಾಟ್‌ನ ಮೊಬೈಲ್‌ ಟವರ್‌ ಮೇಲೆ ಕೆಲ ಕಿಡಿಗೇಡಿಗಳು ಮಂಗಳವಾರ ಎರಡೂ ಧರ್ಮದ ಧ್ವಜಗಳನ್ನು ಕಟ್ಟಿದ್ದರು. ಇಲ್ಲಿರುವ ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಹಿಂದೂ ಜಾಗರಣ ವೇದಿಕೆ ಮಹಾನಗರ ಘಟಕದ ಪದಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. 

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಧ್ವಜ ತೆರವುಗೊಳಿಸಿದ್ದರು. ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದರು. ಹು-ಧಾ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್‌ ಸಿಬ್ಬಂದಿಗೆ ಪೊಲೀಸ್‌ ಆಯುಕ್ತರು ಅಭಿನಂದನೆ ಸಲ್ಲಿಸಿದ್ದಾರೆ.

click me!