KKRTC Recruitment: ಕಂಡಕ್ಟರ್‌ ನೇಮಕಾತಿ, ದೇಹ ತೂಕ ಹೆಚ್ಚಿಸಲು ಕಬ್ಬಿಣ ಕಟ್ಟಿದ ಅಭ್ಯರ್ಥಿ!

By Suvarna News  |  First Published Feb 11, 2023, 11:53 PM IST

ಕಲ್ಯಾಣಕರ್ನಾಟಕ ಸಾರಿಗೆ ನೇಮಕಾತಿ ವೇಳೆ ಅಕ್ರಮ ಪತ್ತೆ. ಹೀಗೆ ವಾಮ ಮಾರ್ಗದಿಂದ ಉದ್ಯೋಗ ಗಿಟ್ಟಿಸಿಕೊಳ್ಳುವ ಸಂಚಿಗೆ ಮುಂದಾದ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯಿಂದಲೇ ವಜಾ ಮಾಡಲಾಗಿದೆ.


ಕಲಬುರಗಿ (ಫೆ.11): ಕೆಕೆಆರ್‌ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಯ ಕಂಡಕ್ಟರ್‌ ನೇಮಕಾತಿ ವೇಳೆ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ದೇಹದ ತೂಕ ಹೆಚ್ಚಿಸಿಕೊಳ್ಳಲು ಅಡ್ಡದಾರಿ ಹಿಡಿದು ಸಿಕ್ಕಿಬಿದ್ದಿದ್ದಾರೆ. ಹೀಗೆ ವಾಮ ಮಾರ್ಗದಿಂದ ಉದ್ಯೋಗ ಗಿಟ್ಟಿಸಿಕೊಳ್ಳುವ ಸಂಚಿಗೆ ಮುಂದಾದ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯಿಂದಲೇ ವಜಾ ಮಾಡಲಾಗಿದೆ.

ಕೆಕೆಆರ್‌ಟಿಸಿ, 1,619 ಚಾಲಕ- ನಿರ್ವಾಹಕ ಹುದ್ದೆಯ ನೇಮಕಾತಿಗೆ ಮುಂದಾಗಿದೆ. ಇದಕ್ಕಾಗಿ ಸಂದರ್ಶನ ನಡೆಸುತ್ತಿದೆ. ಕಂಡಕ್ಟರ್‌ ಹುದ್ದೆಗೆ ಅಭ್ಯರ್ಥಿಗಳ ದೇಹದ ತೂಕ 55 ಕೆಜಿ ಇರಬೇಕಾದ್ದು ಕಡ್ಡಾಯ. ಹೀಗಾಗಿ, ಸಂದರ್ಶನದ ವೇಳೆ ದೈಹಿಕ ಪರೀಕ್ಷೆಗೆ ಬಂದ ಅಭ್ಯರ್ಥಿಗಳಲ್ಲಿ ಇಬ್ಬರು ತೊಡೆ ಭಾಗದಲ್ಲಿ ತಲಾ 5 ಕೆಜಿ ತೂಕದ ಕಲ್ಲು ಕಟ್ಟಿಕೊಂಡಿದ್ದು ಸ್ಕ್ರೀನಿಂಗ್‌ ವೇಳೆ ಪತ್ತೆಯಾಗಿದೆ. ಇದಲ್ಲದೆ ಇನ್ನೋರ್ವ ಅಭ್ಯರ್ಥಿ ಅಂಗಿಯೊಳಗೆ ಕಬ್ಬಿಣದ ರಾಡ್‌ ಸಿಕ್ಕಿಸಿಕೊಂಡು ತೂಕ ಹೆಚ್ಚಳಕ್ಕೆ ಮುಂದಾದದ್ದು ಗೊತ್ತಾಗಿದೆ. ಇದಕ್ಕಾಗಿಯೇ ಅಭ್ಯರ್ಥಿ ವಿಶೇಷವಾಗಿ ವಿನ್ಯಾಸಗೊಳಿಸಿ ಹೊಲಿಸಿದ್ದ ಅಂಗಿ ತೊಟ್ಟು ಬಂದಿದ್ದ.

Latest Videos

undefined

ನೇಮಕಾತಿ ವೇಳೆ ಪರೀಕಾ ಆಕ್ರಮಕ್ಕೆ ಜೀವಾವಧಿ ಶಿಕ್ಷೆ, 10 ಕೋಟಿ ದಂಡ
ಡೆಹ್ರಾಡೂನ್‌: ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು 10 ಕೋಟಿ ರು.ವರೆಗೂ ದಂಡ ವಿಧಿಸಬಹುದಾದ ಸುಗ್ರೀವಾಜ್ಞೆಗೆ ಉತ್ತರಾಖಂಡ ರಾಜ್ಯಪಾಲ ಗುರ್ಮೀತ್‌ ಸಿಂಗ್‌ ಶನಿವಾರ ಒಪ್ಪಿಗೆ ನೀಡಿದ್ದಾರೆ.

Bengaluru: ಕಟ್ಟಡ ಡೆಮಾಲಿಷನ್‌ ವೇಳೆ ಪಿಲ್ಲರ್‌ ಕುಸಿತ: ಇಬ್ಬರು ಕಾರ್ಮಿಕರು ಸಾವು

ರಾಜ್ಯಪಾಲದ ಒಪ್ಪಿಗೆಯೊಂದಿಗೆ ಉತ್ತರಾಖಂಡ ಸ್ಪರ್ಧಾತ್ಮಕ ಪರೀಕ್ಷೆ (ನೇಮಕಾತಿ ಅಕ್ರಮ ತಡೆ) ಸುಗ್ರೀವಾಜ್ಞೆ ಕಾಯ್ದೆಯಾಗಿ ಮಾರ್ಪಟ್ಟಿದೆ. ಈ ಕಾಯ್ದೆಯ ಅನ್ವಯ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವವರಿಗೆ ಗರಿಷ್ಠ ಜೀವಾವಧಿ ಶಿಕ್ಷ ಮತ್ತು 10 ಕೋಟಿ ರು.ವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ ಈ ಅಕ್ರಮದಿಂದ ಸಂಪಾದನೆ ಮಾಡಿರುವ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

9 ವರ್ಷದ ಬಾಲಕಿಯ ರೇಪ್‌ ಮಾಡಿದ ಆರೋಪಿ, ಬುಲ್ಡೋಜರ್‌ ಬಳಸಿ ಮನೆ ಕೆಡವಿದ ಪೊಲೀಸ್‌!

ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿದ್ದಕ್ಕೆ ರಾಜ್ಯಪಾಲರಿಗೆ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಮಿ ಧನ್ಯವಾದ ಅರ್ಪಿಸಿದ್ದು, ಈಗ ಕಾಯ್ದೆ ರಾಜ್ಯದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶಂಕಿತ ಅಲ್‌ಖೈದಾ ಉಗ್ರನನ್ನು ಬಂಧಿಸಿದ ಎನ್‌ಐಎ!

click me!