ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲ್ಲೇ ದಾಖಲಾಯ್ತು ಕಿಡ್ನಾಪ್ ಕೇಸ್! ಕಾಲೇಜಿಗೆ ಹೋಗಿದ್ದ ಹಿಂದು ಯುವತಿಯ ಕಿಡ್ನಾಪ್!

By Ravi Janekal  |  First Published Jan 13, 2024, 5:38 PM IST

ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಹಿಂದೂ ಯುವತಿಯನ್ನು ಅಪಹರಿಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ. ಹಾನಗಲ್ ಪಟ್ಟಣದ ನಿವಾಸಿ  ಅಪ್ತಾಬ್ ಎಂಬ ಯುವಕ ಮಗಳನ್ನು ಕಿಡ್ನಾಪ್ ಮಾಡಿದ್ದಾನೆಂದು ಯುವತಿಯ ತಂದೆ ಪೊಲೀಸ್ ಠಾಣೆಗೆ ತೆರಳಿ ಅಪಹರಣ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿದ್ದಾರೆ.


ಹಾವೇರಿ (ಜ.13): ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಹಿಂದೂ ಯುವತಿಯನ್ನು ಅಪಹರಿಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ. ಈ ಬಗ್ಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಯುವತಿಯ ತಂದೆ,  ಹಾನಗಲ್ ಪಟ್ಟಣದ ನಿವಾಸಿ  ಅಪ್ತಾಬ್ ಎಂಬ ಯುವಕ ಮಗಳನ್ನು ಕಿಡ್ನಾಪ್ ಮಾಡಿದ್ದಾನೆಂದು ಆರೋಫಿಸಿದ್ದಾರೆ. 

ಹಾನಗಲ್ ಶಹರದ ಹಂಚಿ ಓಣಿಯಯಲ್ಲಿ  ಪೋಷಕರೊಂದಿಗೆ ನೆಲೆಸಿರುವ ಯುವತಿ. ಮಲ್ಲಿಗಾರ್ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ‌ನಲ್ಲಿ  ಮೂರನೇ ವರ್ಷದ ಬಿಕಾಂ ಓದುತ್ತಿದ್ದಳು. ಎಂದಿನಂತೆ ಮನೆಯಿಂದ ಕಾಲೇಜಿಗೆ ಹೋಗುವಾಗ ಅಪ್ತಾಬ್ ಎಂಬ ಯುವಕ ಅಪಹರಣ ಮಾಡಿದ್ದಾನೆಂದು ಆರೋಪಿಸಿರುವ ಯುವತಿಯ ತಂದೆ. ಅಂದು ಕಾಲೇಜಿಗೆ ಹೋಗಿರುವ ಯುವತಿ ಮನೆಗೆ ಬಂದಿರುವುದಿಲ್ಲ. ಹೀಗಾಗಿ ಅಪಹರಣಕ್ಕೊಳಗಾಗಿರುವ ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ, ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ಯುವತಿಯ ಕುಟುಂಬಸ್ಥರು.  ಪೋಷಕರ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. 

Latest Videos

undefined

ಗೂಂಡಾಗಿರಿ ಹತ್ತಿಕ್ಕುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಯಾಕೆ ಮೌನ?

ಹಾನಗಲ್ ನಲ್ಲಿ ಪದೇಪದೆ ಅತ್ಯಾಚಾರ ಪ್ರಕರಣಗಳು!

ನಾಲ್ಕರ ಕ್ರಾಸ್ ಬಳಿ ಸುಮಾರು 7 ಜನ ಲಾಡ್ಜ್ ಗೆ ನುಗ್ಗಿ ಮುಸ್ಲಿಂ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತೆ ಆರೋಪಿಸಿದ್ದರು. ಇದೀಗ ದೀಪಾ ನಿಂಗಪ್ಪ ಲಮಾಣಿ ಅನ್ನುವ ಹುಡುಗಿ  ಕಿಡ್ನಾಪ್ ಕೇಸ್ ಆಗಿದೆ.  ಹಾನಗಲ್ ಬಳಿ ಮಕರವಳ್ಳಿ ಹುಡುಗಿ ಬಟ್ಟೆ ಖರೀದಿ ಮಾಡಲು ಹೋದಾಗ ಟ್ರಯಲ್ ನೋಡಲು ಹೋದಾಗ ವಿಡಿಯೋ ರೆಕಾರ್ಡ್ ಮಾಡಿದ್ದು ಸಹ ಕೇಸ್ ಆಗಿತ್ತು. ಪುಷ್ಪಾ ಅನ್ನುವ ಹುಡುಗಿಗೆ ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡಿದಾರೆ. ಒಟ್ಟು ನಾಲ್ಕು ಪ್ರಕರಣ ಹಾನಗಲ್ ನಲ್ಲೇ ನಡೆದಿದೆ.

ಹಾವೇರಿಯಲ್ಲಿ ನಡೆದಿದ್ದು ನೈತಿಕ ಪೊಲೀಸ್‌ಗಿರಿಯಲ್ಲ, ಸಾಮೂಹಿಕ ಅತ್ಯಾಚಾರ; ಇಲ್ಲಿದ್ದಾರೆ ನೋಡಿ ಗ್ಯಾಂಗ್ ರೇಪಿಸ್ಟ್‌?

ಇಷ್ಟೆಲ್ಲ ಆದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಕಾಟಾಚಾರಕ್ಕೆ ಎಫ್‌ಐಆರ್ ದಾಖಲಿಸಿಕೊಂಡು ಕಾಂಗ್ರೆಸ್ ಸರ್ಕಾರದ ಅಣತಿಯಂತೆ ನಡೆದುಕೊಳ್ತಿದೆ. ಇನ್ನು ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಿತಿ ಮೀರಿದ್ದು ಆರೋಪಿಗಳನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೆ ಪ್ರಕರಣ ಗಂಭೀರವಾಗಿ ಪರಿಗಣಿಸದೇ ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ. ಇದೀಗ ಅಂತಹ ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. 

click me!