Latest Videos

ರಿವರ್ಸ್‌ ಗೇರ್ ಹಾಕಿದ ಮಹಿಳೆ; ಇಳಿಜಾರಿಗೆ ಹಿಂದಕ್ಕೆ ಚಲಿಸಿ ಕಿಯಾ ಕಾರು ಪಲ್ಟಿ!

By Ravi JanekalFirst Published Jun 15, 2024, 4:40 PM IST
Highlights

ಇಳಿಜಾರಿನಲ್ಲಿ ರಿವರ್ಸ್ ಬಂದ ಕಿಯಾ ಕಾರು ಪಲ್ಟಿಯಾದ ಸಂಪೂರ್ಣ ಜಖಂ ಆದ ಘಟನೆ ಬೆಂಗಳೂರಿನ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಸಮೀಪ  ನಡೆದಿದೆ. ಕಾರಿನಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಬೆಂಗಳೂರು (ಜೂ.15): ಇಳಿಜಾರಿನಲ್ಲಿ ರಿವರ್ಸ್ ಬಂದ ಕಿಯಾ ಕಾರು ಪಲ್ಟಿಯಾದ ಸಂಪೂರ್ಣ ಜಖಂ ಆದ ಘಟನೆ ಬೆಂಗಳೂರಿನ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಸಮೀಪ  ನಡೆದಿದೆ.

ಕಾರಿನಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಮುಂಭಾಗ ಏರುಗತಿಯಲ್ಲಿರುವ ರಸ್ತೆ. ಇದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆ. ಕಾರಿನ ಗೇರ್ ಮುಂದೆ ಹಾಕುವ ಬದಲು ರಿವರ್ಸ್ ಗೇರ್ ಹಾಕಿರುವ ಮಹಿಳೆ. ಇದರಿಂದ ಮೊದಲೇ ಇಳಿಜಾರಿನಲ್ಲಿ ರಸ್ತೆಯಲ್ಲಿ ಕಾರು ಹಿಂದಕ್ಕೆ ಚಲಿಸಲಾರಂಭಿಸಿದೆ. ವೇಗವಾಗಿ ಹಿಂದಕ್ಕೆ ಬಂದ ಕಾರು ಕೆಳಗೆ ಪಲ್ಟಿಯಾಗಿದೆ.

ಪೊಲೀಸರ ಕಿರುಕುಳ ಆರೋಪ; ಠಾಣೆ ಮುಂಭಾಗವೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯುವಕ ಯತ್ನ! 

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸ್ಥಳಕ್ಕೆ ಬಂದಿರುವ ಕಾರಿನ ಮಾಲೀಕ. ಕ್ರೇನ್ ಮೂಲಕ ಕಾರು ತೆಗೆದಿದ್ದಾರೆ. ಕಿಯಾ ಕಾರು ಸಂಪೂರ್ಣ ಜಖಂಗೊಂಡಿದೆ. ನಾಗರಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!