Latest Videos

ಕೊಲೆ ಆರೋಪಿ ನಟ ದರ್ಶನ್ ಹೈಪ್ ಮಾಡುವಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿಲ್ಲ; ನಟಿ ರಮ್ಯಾ

By Sathish Kumar KHFirst Published Jun 15, 2024, 2:42 PM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಟಿವಿಯಲ್ಲಿ ತುಂಬಾ ಹೈಪ್ ಮಾಡುವಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿಲ್ಲ ಎಂದು ನಟಿ ರಮ್ಯಾ ಹೇಳಿದ್ದಾರೆ.

ಬೆಂಗಳೂರು (ಜೂ.15): ನಟಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಚಿತ್ರದುರ್ಗ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ ನಟ ದರ್ಶನ್ ತುಂಬಾ ಹೈಪ್ ಮಾಡುವಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿಲ್ಲ.  ಬೇರೆ ನಟರಿಗೆ ದರ್ಶನ್‌ಗಿಂತಲೂ ಹೆಚ್ಚು ಅಭಿಮಾನಿ ಬಳಗವಿದೆ.  ದರ್ಶನ್ ಸುತ್ತಮುತ್ತ ಇರುವವರಲ್ಲ ನಟೋರಿಯಸ್‌ಗಳು ಎಂದು ನಟಿ ರಮ್ಯಾ ಹೇಳಿದ್ದಾರೆ.

ಸ್ಯಾಂಡಲ್‌ವುಡ್ ಕ್ವೀನ್ ಮೋಹಕತಾರೆ ನಟಿ ರಮ್ಯಾ ಚಿತ್ರರಂಗದ ನಟನೆಯಿಂದ ದೂರವಾದರೂ ಕನ್ನಡ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಈಗ ನಟ ದರ್ಶನ್ ಸಾಮಾನ್ಯ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ ಬೆನ್ನಲ್ಲಿಯೇ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು. ಇದೀಗ ಪುನಃ ರಾಷ್ಟ್ರೀಯ ಸುದ್ದಿವಾಹಿಯೊಂದರ ಜೊತೆ ಮಾತನಾಡಿರುವ ನಟಿ ರಮ್ಯಾ ಅವರು, ದರ್ಶನ್‌ ತುಂಬಾ ಹೈಪ್ ಮಾಡುವಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿಲ್ಲ. ಒಂದು ವೇಳೆ ದೊಡ್ಡ ಅಭಿಮಾನಿ ಬಳಗ ಹೊಂದಿದ್ದರೆ ಅವರ ಎಲ್ಲ ಸಿನಿಮಾಗಳು ಕೂಡ ಸಕ್ಸಸ್ ಆಗಬೇಕಿತ್ತು. ಲೋಕಸಭಾ ಚುನಾವಣೆಯಲ್ಲಿ ಕಳೆದ 6 ತಿಂಗಳಿಂದ ಕೆಲ ರಾಜಕಾರಣಿಗಳ ಪರವಾಗಿ ಪ್ರಚಾರ ಮಾಡಿದ್ದರೂ, ಬಹುತೇಕರು ಚುನಾವಣೆಯಲ್ಲಿ ಸೋತಿದ್ದಾರೆ. ಇನ್ನು ದರ್ಶನ್ ಅರೆಸ್ಟ್ ಆಗಿರುವ ಪೊಲೀಸ್ ಠಾಣೆಯ ಮುಂದೆ 20 ರಿಂದ 50 ಮಂದಿ ನಿಂತ ಮಾತ್ರಕ್ಕೆ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿ ಬಳಗ ಇದೆ ಅಂದುಕೊಳ್ಳೋದು ಸರಿಯಲ್ಲ ಎಂದು ನಟಿ ರಮ್ಯಾ ಹೇಳಿಕೊಂಡಿದ್ದಾರೆ.

'ಕಾನೂನಿಗಿಂತ ಯಾರೂ ದೊಡ್ಡವರಲ್ಲ..' ದರ್ಶನ್‌ ಕೇಸ್‌ ಉಲ್ಲೇಖಿಸಿ ರಮ್ಯಾ ಪೋಸ್ಟ್‌!

ಇನ್ನು ನಟ ದರ್ಶನ್ ಸುತ್ತಲೂ ಇರುವವರೂ ನಟೋರಿಯಸ್‌ಗಳಾಗಿದ್ದು, ಅಕ್ಷರಶಃ ರೌಡಿಗಳು. ಹೀಗಾಗಿಯೇ ದರ್ಶನ್ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಆದರೆ, ದರ್ಶನ್‌ಗೆ ಅಷ್ಟೊಂದು ಅಭಿಮಾನಿ ಬಳಗವಿಲ್ಲ. ಜನರು ಆತನ ಮೇಲೆ ಅಷ್ಟೊಂದು ಪ್ರೀತಿ ತೋರುತ್ತಿಲ್ಲ. ಕನ್ನಡ ಚಿತ್ರರಂಗದ ಬೇರೆ ನಟರಿಗೆ ದರ್ಶನ್‌ಗಿಂತಲೂ ಹೆಚ್ಚು ಅಭಿಮಾನಿ ಬಳಗವಿದೆ. ಅವರ ಅಭಿಮಾನಿಗಳು ನೇತ್ರದಾನ, ರಕ್ತದಾನ ಸೇರಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ದರ್ಶನ್ ಅಭಿಮಾನಿಗಳು ಮಾತ್ರ ಅಪಹರಣ ಮತ್ತು ಕೊಲೆ ಮಾಡುವುದಲ್ಲಿ ತೊಡಗಿಸಿಕೊಂಡಿದ್ದಾರೆ. ದರ್ಶನ್ ಫ್ಯಾನ್ ಕ್ಲಬ್ ಮೂಲಕ ಜನರನ್ನು ಅಪಹರಣ ಮಾಡುವುದು ಮತ್ತು ಜನರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ರಮ್ಯಾ ಆಕ್ರೋಶ ಹೊರ ಹಾಕಿದ್ದಾರೆ.

ದರ್ಶನ್ ಬಂಧನ ಬೆನ್ನಲ್ಲೇ ಒಡೆದ ಹೃದಯ ಸ್ಟೇಟಸ್‌ ಹಾಕಿ ಡಿಲೀಟ್‌ ಮಾಡಿದ ನಟಿ ರಕ್ಷಿತಾ, ರಮ್ಯಾ ರೀಟ್ವೀಟ್!

ನಟ ದರ್ಶನ್ ಜೈಲು ಸೇರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ನಟಿ ರಮ್ಯಾ, ಕಾನೂನಿನ ಮುಂದೆ ಯಾರ ದೊಡ್ಡವರಲ್ಲ. ಯಾರೇ ಆಗಲಿ  ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಾಮೆಂಟ್ ಮಾಡಿದರೆ ಪೊಲೀಸರಿಗೆ ಬಂದು ದೂರು ಕೊಟ್ಟರೆ ಸಾಕು. ಆದರೆ, ನೀವು ಜನರನ್ನು ಹೊಡೆದು ಕೊಲ್ಲುವುದಲ್ಲ. ಈಗ ಕೊಲೆ ಕೇಸಿನಲ್ಲಿ ಕಾನೂನು ಕ್ರಮ ಕೈಗೊಂಡ ಪೊಲೀಸ್ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಈ ಕೇಸಿನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಯಾರೊಬ್ಬರೂ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೇ ತನಿಖೆ ನಡೆಸುತ್ತಿದ್ದು, ಕಾನೂನಿನ ಮೇಲೆ ಜನರ ಭರವಸೆ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನಟಿ ರಮ್ಯಾ ಪೋಸ್ಟ್ ಹಂಚಿಕೊಂಡಿದ್ದರು.

click me!