ನಕಲಿ ಆಭರಣ ತೋರಿಸಿ ಅಸಲಿ ಚಿನ್ನ ಎಗರಿಸಿದ ಖತರ್ನಾಕ್ ಮಹಿಳೆ!

By Ravi Janekal  |  First Published Jul 18, 2023, 11:41 AM IST

ಚಿನ್ನಾಭರಣಗಳನ್ನು ನೀಡುವುದಾಗಿ ನಂಬಿಸಿ ಹೊರ ಜಿಲ್ಲೆಯ ಮಹಿಳೆಯೊಬ್ಬರು ವೃದ್ಧೆಗೆ ಮೋಸ ಮಾಡಿ ಆಭರಣಗಳನ್ನು ಎಗರಿಸಿ ಕದ್ದೊಯ್ದು ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ತೂಪನಕೊಲ್ಲಿಯ ಕಾರ್ಮಿಕ ಮಹಿಳೆ ಕಾವೇರಿ ಎಂಬವರು ಮೋಸಕ್ಕೆ ಹೋಗಿರುವ ಮಹಿಳೆ.
 ಏನಿದು ಘಟನೆ? 


ವರದಿ :ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

 ಕೊಡಗು (ಜು.18) : ಚಿನ್ನಾಭರಣಗಳನ್ನು ನೀಡುವುದಾಗಿ ನಂಬಿಸಿ ಹೊರ ಜಿಲ್ಲೆಯ ಮಹಿಳೆಯೊಬ್ಬರು ವೃದ್ಧೆಗೆ ಮೋಸ ಮಾಡಿ ಆಭರಣಗಳನ್ನು ಎಗರಿಸಿ ಕದ್ದೊಯ್ದು ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ತೂಪನಕೊಲ್ಲಿಯ ಕಾರ್ಮಿಕ ಮಹಿಳೆ ಕಾವೇರಿ ಎಂಬವರು ಮೋಸಕ್ಕೆ ಹೋಗಿರುವ ಮಹಿಳೆ.

Latest Videos

undefined

 ಏನಿದು ಘಟನೆ? 

ಜುಲೈ 16 ರಂದು ತೂಪನಕೊಲ್ಲಿಯ ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸ ಮಾಡಿಕೊಂಡಿರುವ ಕಾರ್ಮಿಕ ಮಹಿಳೆ ಕಾವೇರಿ ಎಂಬವರು ತಮ್ಮ ಸಂಬಂಧಿಕರ ವಿವಾಹ ಕಾರ್ಯಕ್ಕೆ ಸಿದ್ದಾಪುರಕ್ಕೆ ಬಂದಿದ್ದರು. ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಮದುವೆಯ ಮಂಟಪದಲ್ಲಿ ಮದುವೆ ಕಾರ್ಯ ಮುಗಿಸಿ ಮನೆಗೆ ಹಿಂತಿರುಗಿ ಹೋಗಲು ಸಿದ್ದಾಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು ಎನ್ನಲಾಗಿದೆ. 

ಈ ಸಂದರ್ಭ ಮಧ್ಯಾಹ್ನದ ಸಮಯದಲ್ಲಿ ಕಾವೇರಿ ಅವರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಅಪರಿಚಿತ ಮಹಿಳೆ ಆಗಮಿಸಿ ತಾನು ಕೊಳ್ಳೆಗಾಲದ ನಿವಾಸಿ. ತನಗೆ ರೂ. 500 ಸಾಲ ನೀಡುವಂತೆ ಕೇಳಿದ್ದಾಳೆ. ಈ ಸಂದರ್ಭದಲ್ಲಿ ನನ್ನ ಬಳಿ ಹಣ ಇಲ್ಲವೆಂದು ಕಾವೇರಿ ತಿಳಿಸಿದ್ದಾರೆ. 

ಚಿನ್ನದ ಆಸೆಗೆ 10 ಲಕ್ಷ ಪಂಗನಾಮ ಹಾಕಿಸಿಕೊಂಡ, ಅಜ್ಜಿ ಗ್ಯಾಂಗ್ ಚಿನ್ನದ ಆಟಕ್ಕೆ ಬೆಸ್ತು ಬಿದ್ದ ಬಂಗಾರ ವ್ಯಾಪಾರಿ!

ಕೂಡಲೇ ಅಪರಿಚಿತ ಮಹಿಳೆ ನನ್ನ ಬಳಿ ಚಿನ್ನಾಭರಣಗಳು ಸುಮಾರು ಇದೆ. ಅದನ್ನು ನಿಮಗೆ ನೀಡುವುದಾಗಿ ಹೇಳಿದ್ದು, ನಿಮ್ಮ ಕತ್ತಿನಲ್ಲಿರುವ ಹಾಗೂ ಕಿವಿಯಲ್ಲಿರುವ ಆಭರಣಗಳನ್ನು ತನಗೆ ನೀಡುವಂತೆ ಹೇಳಿ ಅಪರಿಚಿತ ಮಹಿಳೆ ಕಾವೇರಿಯವರ ತಲೆಗೆ ಕೈ ಇಟ್ಟು ಕೇಳಿದ್ದಾರೆ ಎನ್ನಲಾಗಿದೆ. ಇದನ್ನು ನಂಬಿದ ವೃದ್ಧೆ ಕಾವೇರಿ ತನ್ನ ಕತ್ತಿನಲ್ಲಿದ್ದ ಮತ್ತು ಕಿವಿಯಲ್ಲಿದ್ದ ಓಲೆಯನ್ನು ಬಿಚ್ಚಿ ಕೊಟ್ಟಿದ್ದಾರೆ. ನಂತರ ಯಾಕೋ ಸಂಶಯಗೊಂಡ ವೃದ್ಧೆ ಸಿದ್ದಾಪುರ- ವೀರಾಜಪೇಟೆ ರಸ್ತೆಯಲ್ಲಿರುವ ಚಿನ್ನದಂಗಡಿಗೆ ಮಹಿಳೆಯನ್ನು ಕರೆದುಕೊಂಡು ಚಿನ್ನ ಪರಿಶೀಲನೆಗೆ ಹೋಗಿದ್ದಾರೆ. 

ಇಲ್ಲಿ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ತಿಳಿದು ಬಂದಿದೆ. ಇದಾದ ನಂತರ ಸ್ವಲ್ಪ ಸಮಯದಲ್ಲೇ ಅಪರಿಚಿತ ಮಹಿಳೆ ವೃದ್ಧೆಯ ಚಿನ್ನಾಭರಣಗಳನ್ನು ಎಗರಿಸಿ ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದಾಳೆ. ಮೋಸಕ್ಕೆ ಸಿಲುಕಿದ ವೃದ್ಧೆ ಕಾವೇರಿಯು ಮನೆಗೆ ತೆರಳಿದಾಗ ಅವರ ಪುತ್ರಿ ಕಾವೇರಿ ಬಳಿ ಚಿನ್ನಾಭರಣಗಳು ಎಲ್ಲಿ ಎಂದು ಕೇಳಿದಾಗ ಸತ್ಯಾಂಶ ಹೊರಬಂದಿದೆ. ಆದರೆ, ಅಪರಿಚಿತ ಮಹಿಳೆ ತಲೆಗೆ ಕೈ ಇಟ್ಟು ಮಂಕು ಬರುವ ರೀತಿಯಲ್ಲಿ ಮಾಡಿ ಚಿನ್ನಾಭರಣಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾಳೆ. ತನಗೆ ಇನ್ನು ಮಂಕು ಬಿಟ್ಟಿರುವುದಿಲ್ಲ. ತಲೆ ಸುತ್ತುವ ರೀತಿಯಲ್ಲಿ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಮೋಸಕ್ಕೆ ಸಿಲುಕಿದ ಕಾವೇರಿಯವರು ಸಿದ್ದಾಪುರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಚಿನ್ನದಂಗಡಿಗೆ ತೆರಳಿ ಮಾಹಿತಿ ಪಡೆದುಕೊಂಡರು. ಅಲ್ಲದೆ ವಂಚನೆಗೆ ಸಿಲುಕಿದ ಮಹಿಳೆಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಹಾಡಹಗಲೇ ಅಪರಿಚಿತ ಮಹಿಳೆಯಿಂದ ಸುಮಾರು ಒಂದೂವರೆ ಪವನ್ ಚಿನ್ನಾಭರಣಗಳನ್ನು ಕಳೆದುಕೊಂಡಿರುವ ಬಡ ಕಾರ್ಮಿಕ ಮಹಿಳೆಗೆ ದಿಕ್ಕು ತೋಚದಂತಾಗಿದೆ. 

 

ಲೇಡಿ ಡಾಕ್ಟರ್‌ ವೇಷದಲ್ಲಿ ಮಹಿಳಾ ರೋಗಿಗಳ ಚಿನ್ನ ಕಳವು

ಇನ್ನಾದರೂ ಮಹಿಳೆಯರು ಚಿನ್ನಾಭರಣಗಳ ಆಸೆಗೆ ಒಳಗಾಗದೆ ತಮ್ಮಲ್ಲಿರುವ ಆಭರಣಗಳ ಬಗ್ಗೆ ಜಾಗರೂಕರಾಗಿ ಎಚ್ಚರವಹಿಸಬೇಕು. ನಕಲಿ ಆಭರಣ ನೀಡಿದ ಮಹಿಳೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

click me!