Belagavi Crime: 6ನೇ ತರಗತಿಯಿಂದಲೇ ಲವ್, ಪ್ರಿಯಕರನ ಜತೆ ಸೇರಿ ಭೀಮನ ಅಮವಾಸ್ಯೆ ದಿನ ಗಂಡನ ಕೊಂದ ಪತ್ನಿ!

By Gowthami K  |  First Published Jul 18, 2023, 11:39 AM IST

ಭೀಮನ ಅಮಾವಾಸ್ಯೆಯಂದು ಕಣ್ಣೆದುರೇ ಗಂಡನ ಮೇಲೆ‌ ಮಚ್ಚು ಲಾಂಗುಗಳಿಂದ ದಾಳಿ ಮಾಡಿ ಕೊಂದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನೋಟಂಕಿ ಆಟ ಆಡಿದ ಪತ್ನಿ ಜೊತೆಗೆ ಪ್ರಿಯಕರನ ಬಂಧನವಾಗಿದೆ.


ಬೆಳಗಾವಿ (ಜು.18): ಭೀಮನ ಅಮಾವಾಸ್ಯೆಯಂದು ದೇವಾಲಯಕ್ಕೆ ಹೋಗಿದ್ದಾಗ ಹೆಂಡತಿಯ ಕಣ್ಣೆದುರೇ ಗಂಡನ ಮೇಲೆ‌ ಮಚ್ಚು ಲಾಂಗುಗಳಿಂದ ದಾಳಿ ಮಾಡಿ ಕೊಂದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಈಗ ಪತ್ನಿಯನ್ನೇ ಬಂಧಿಸಿದ್ದಾರೆ.  

ಕಳೆದ ಮೂರು ತಿಂಗಳ ಹಿಂದಷ್ಟೆ ಕೊಲೆಯಾದ ದುರ್ದೈವಿ ಶಂಕರ್ ಸಿದ್ದಪ್ಪ ಜಗಮುತ್ತಿ(25)  ಸಿದ್ದವ್ವ ಅಲಿಯಾಸ್‌ ಪ್ರಿಯಾಂಕಾ ಜಗಮುತ್ತಿ (21)  ಎಂಬುವವಳನ್ನು ಮದುವೆಯಾಗಿದ್ದ.  ಭೀಮನ ಅಮವಾಸ್ಯೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಬನಸಿದ್ದೇಶ್ವರ ದೇವಸ್ಥಾನಕ್ಕೆ ಗಂಡ ಶಂಕರ್ ನನ್ನು ಕರೆದುಕೊಂಡು ಪತ್ನಿ ಪ್ರಿಯಾಂಕ ಬಂದಿದ್ದಳು.  ದೇವರ ದರ್ಶನ ಪಡೆದ ಬಳಿಕ ವಾಪಸ್‌ ಬರುತ್ತಿದ್ದ ವೇಳೆ ದೇವಸ್ಥಾನ ಆವರಣದಲ್ಲೇ  ತಾನು ಪ್ಲಾನ್ ಮಾಡಿದಂತೆ ಗಂಡನನ್ನು ಮುಗಿಸಿದ್ದಾಳೆ. ಬಳಿಕ ಡ್ರಾಮ ಆಡಿದ್ದಾಳೆ.

Latest Videos

undefined

ಪ್ರಕರಣ ಬೆನ್ನು ಹತ್ತಿದ ಮೂಡಲಗಿ ಪೊಲೀಸರು ಕೊಲೆ ನಡೆದು ಎರಡೇ ಗಂಟೆಯಲ್ಲಿ  ಆರೋಪಿಯನ್ನು ಬಂಧಿಸಿದ್ದರು. ಮೂಡಲಗಿ ತಾಲೂಕಿನ ಬೈರನಟ್ಟಿ ಗ್ರಾಮದ ಶ್ರೀಧರ ಅರ್ಜುನ ತಳವಾರ (22) ಬಂಧಿತ ಆರೋಪಿಯಾಗಿದ್ದು, ವಿಚಾರಣೆ ನಡೆಸಿದಾಗ ಪ್ರಿಯಾಂಕಳ ನೋಟಂಕಿ ಆಟ ಬಯಲಾಗಿದೆ. ಇವರಿಬ್ಬರೂ ಪ್ರೇಮಿಗಳಾಗಿದ್ದರು. ಹೀಗಾಗಿ ಪೊಲೀಸರು ಕಾಲ್ ರೆಕಾರ್ಡ್,  ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಇಬ್ಬರನ್ನೂ ಬಂಧಿಸಿದ್ದಾರೆ.

Bengaluru: ಮಗಳನ್ನು ಪ್ರೀತಿಸಿದ ಯುವಕನ ಕಿಡ್ನಾಪ್ ಮಾಡಿ ಬೆಂಕಿ ಇಟ್ಟ ಪ್ರಕರಣ, ಕುಟುಂಬ ಸಮೇ

ಏನಿದು ಪ್ರಕರಣ?: ಮೂಡಲಗಿ ತಾಲೂಕಿನ ಬೈರನಟ್ಟಿಗ್ರಾಮದ ಶ್ರೀಧರ ತಳವಾರ ಹಾಗೂ ಸಿದ್ದವ್ವ ಅಲಿಯಾಸ್‌ ಪ್ರಿಯಾಂಕಾ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. 6 ತರಗತಿಯಲ್ಲೇ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಶಂಕರ ಜಗಮುತ್ತಿ ಹಾಗೂ ಸಿದ್ದವ್ವ ಕುಟುಂಬದ ಹಿರಿಯರು ಸೇರಿಕೊಂಡು ಮಾತುಕತೆ ನಡೆಸಿ ಶಂಕರನೊಂದಿಗೆ 2023 ಮಾಚ್‌ರ್‍ 19 ರಂದು ವಿವಾಹ ಜರುಗಿತ್ತು. ಆದರೂ ಸಿದ್ದವ್ವ ಪ್ರಿಯಕರನೊಂದಿಗೆ ಕದ್ದುಮುಚ್ಚಿ ಮಾತುಕತೆ ನಡೆಸುತ್ತಿದ್ದಳು.

ಸಿದ್ದವ್ವ ಹುಟ್ಟುಹಬ್ಬವನ್ನು ಭಾನುವಾರ ರಾತ್ರಿ ಪತಿ ಶಂಕರ ಆಚರಿಸಿ ಕುಟುಂಬಸ್ಥರದೊಂದಿಗೆ ಸಂಭ್ರಮಿಸಿದ್ದರು. ಭೀಮನ ಅಮವಾಸ್ಯೆ ಹಾಗೂ ಬನಸಿದ್ದೇಶ್ವರ ದೇವಸ್ಥಾನ ಪೂಜಾರಿಯಾಗಿರುವ ಶಂಕರ ಜಗಮುತ್ತಿ ದೇವಸ್ಥಾನಕ್ಕೆ ಜತೆಯಾಗಿ ಹೋಗಿ ಬರುವುದಾಗಿ ಪತ್ನಿ ಸಿದ್ದವ್ವನಿಗೆ ತಯಾರಾಗುವಂತೆ ತಿಳಿಸಿದ್ದ. ಆದರೆ ಸಿದ್ದವ್ವ ತಾನು ತಯಾರಾಗುವ ಮೊದಲೇ ದೇವಸ್ಥಾನಕ್ಕೆ ಬರುವ ವಿಷಯವನ್ನು ಪ್ರಿಯಕರ ಶ್ರೀಧರ ತಳವಾರನಿಗೆ ಮಾಹಿತಿ ನೀಡಿದ್ದಳು. ಅಲ್ಲದೇ ಹತ್ಯೆ ಬಗ್ಗೆಯೂ ಪ್ಲ್ಯಾನ್‌ ಮಾಡಿಕೊಂಡಿದ್ದರು. ಏನೂ ಗೊತ್ತಿಲ್ಲದಂತೆ ಪತಿ ಶಂಕರನೊಂದಿಗೆ ದೇವಸ್ಥಾನಕ್ಕೆ ಬಂದು ಜೊತೆಯಾಗಿ ದೇವರ ದರ್ಶವನ್ನೂ ಪಡೆದುಕೊಂಡಿದ್ದಾರೆ. ಬಳಿಕ ಸಿದ್ದವ್ವ ಪತಿಗೆ ದ್ವಿಚಕ್ರ ವಾಹನ ತರುವಂತೆ ತಿಳಿಸಿ ವೇಗವಾಗಿ ನಡೆದುಕೊಂಡು ದೇವಸ್ಥಾನದಿಂದ ದೂರ ಬಂದು ನಿಂತಿದ್ದಾಳೆ. ಅಷ್ಟರಲ್ಲಿ ಹತ್ಯೆ ಮಾಡಲು ಬಂದಿದ್ದ ಶ್ರೀಧರ ತಳವಾರ, ದೇವಸ್ಥಾನದ ಬಳಿ ಹೋಗಿ ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

Bengaluru: ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿರುದ್ದ ಪತ್ನಿ ದೂರು

ಬಳಿಕ ಆರೋಪಿ ಸಿದ್ದವ್ವ ಮೋಸಳೆ ಕಣ್ಣೀರು ಸುರಿಸುತ್ತಾ, ಕೂಗಾಟ, ಚೀರಾಟ ನಡೆಸಿದ್ದಾಳೆ. ಇದರಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರು ಘಟನೆ ಕುರಿತು ಸಿದ್ದವ್ವನನ್ನು ವಿಚಾರಿಸಿದ ವೇಳೆ. ನಿನ್ನೆ ತಡರಾತ್ರಿ ನನ್ನ ಪತಿ ನನ್ನ ಬತ್‌ರ್‍ಡೇ ಆಚರಿಸಿದ್ದರು. ಇಂದು ಬೆಳಗಿನ ಜಾವ ದೇವಸ್ಥಾನಕ್ಕೆ ನನ್ನ ಕರೆದುಕೊಂಡು ಬಂದಿದ್ದರು. ಬೈಕ್‌ ತಿರುಗಿಸಿಕೊಂಡು ಬರುತ್ತಾರೆ ಅಂತ ನಾನು ಮುಂದೆ ಹೋಗಿ ನಿಂತುಕೊಂಡಿದ್ದೆ. ಅಷ್ಟರಲ್ಲಿ ಲಾಂಗ್‌ ಹಿಡಿದುಕೊಂಡು ಬಂದ ಒಬ್ಬ ವ್ಯಕ್ತಿ ನನ್ನ ಗಂಡನ ಮೇಲೆ ಹಲ್ಲೆ ಮಾಡಿ ಪರಾರಿಯಾದ. ನಾನು ಓಡಿ ಹೋಗುವಷ್ಟರಲ್ಲಿ ಅವರು ಕೆಳಗೆ ಬಿದ್ದಿದ್ದರು. ನಮ್ಮಿಬ್ಬರ ಮಧ್ಯೆ ಯಾವ ಜಗಳವೂ ಇರಲಿಲ್ಲ. ಬೆಳಗ್ಗೆ ದೇವಸ್ಥಾನಕ್ಕೆ ಕರೆದುಕೊಂಡು ಬಂದರು ಎಂದು ಕಥೆ ಕಟ್ಟಿಕಣ್ಣೀರು ಹಾಕಿದ್ದಳು.

ಘಟನಾ ಸ್ಥಳಕ್ಕೆ ಆಗಮಿಸಿದ ಮೂಡಲಗಿ ಪೊಲೀಸರು ಹಂತಕನ ಪತ್ತೆ ಬಲೆ ಬೀಸಿದ್ದರು, ಜತೆಗೆ ಈಕೆಯ ಹಾವಭಾವದ ಮೇಲೆಯೂ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು ಈಕೆಯನ್ನು ತಮ್ಮದೇ ರೀತಿಯಲ್ಲಿ ವಿಚಾರಿಸಿದ ವೇಳೆ ಅಸಲಿ ಕಹಾನಿ ಹೊರಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಂತಕ ಶ್ರೀಧರ ತಳವಾರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!