
ಬೆಂಗಳೂರು (ಜು.18) : ಡಿಕ್ಷನರಿ ಮಾದರಿ ಸಿಕ್ರೇಟ್ ಲಾಕರ್‌ನಲ್ಲಿ ಡ್ರಗ್‌್ಸ ತುಂಬಿಕೊಂಡು ಗ್ರಾಹಕರಿಗೆ ಪೂರೈಸುತ್ತಿದ್ದ ಚಾಲಾಕಿ ವಿದೇಶಿ ಪೆಡ್ಲರ್‌ವೊಬ್ಬ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ನೈಜೀರಿಯಾ ಪ್ರಜೆ ಮಾರ್ಕ್ ಜಸ್ಟೀಸ್ ಎಂಬಾತ ಬಂಧಿತನಾಗಿದ್ದು, ಆರೋಪಿಯಿಂದ .10 ಲಕ್ಷ ಮೌಲ್ಯದ 70 ಗ್ರಾಂ ಕೊಕೇನ್ ಹಾಗೂ ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಾಡುಗೋಡಿ ಸಮೀಪ ಡ್ರಗ್‌್ಸ ಮಾರಾಟಕ್ಕೆ ವಿದೇಶಿ ಪ್ರಜೆ ಬರುವ ಬಗ್ಗೆ ಖಚಿತ ಮಾಹಿತಿ ಪಡೆದು ಇನ್‌ಸ್ಪೆಕ್ಟರ್ ಭರತ್‌ಗೌಡ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
150 ಕೋಟಿ ಮೊತ್ತದ ಡ್ರಗ್ಸ್‌ಗೆ ಬೆಂಕಿಯಿಟ್ಟ ಕರ್ನಾಟಕ ಪೊಲೀಸರು
ಕೆಲ ವರ್ಷಗಳ ಹಿಂದೆ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಮಾರ್ಕ್, ತರುವಾಯ ನಗರಕ್ಕೆ ಬಂದು ನೆಲೆಸಿದ್ದ. ಸುಲಭವಾಗಿ ಹಣ ಸಂಪಾದನೆಗೆ ಡ್ರಗ್‌್ಸ ದಂಧೆ ಶುರು ಮಾಡಿದ್ದ ಮಾರ್ಕ್, ನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ವ್ಯಕ್ತಿಗಳಿಂದ ಡ್ರಗ್‌್ಸ ಪೂರೈಕೆದಾರರಿಂದ ಡ್ರಗ್‌್ಸ ಖರೀದಿಸುತ್ತಿದ್ದ. ಬಳಿಕ ಡಿಕ್ಷನರಿ ಮಾದರಿ ಸಿಕ್ರೇಟ್ ಲಾಕರ್ ಅನ್ನು ಮಾಡಿ ಅದರೊಳಗೆ ಡ್ರಗ್‌್ಸ ತುಂಬಿ ಗ್ರಾಹಕರಿಗೆ ಆರೋಪಿ ಮಾರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಡಿಕ್ಷನರಿ ಮಾದರಿಯ ಸಿಕ್ರೇಟ್ ಲಾಕರ್‌ಗಳನ್ನು ಆರೋಪಿ ಖರೀದಿಸಿದ್ದ. ಹೊರನೋಟಕ್ಕೆ ಪುಸಕ್ತದಂತೆ ಕಾಣುವ ಅವುಗಳ ಒಳಗೆ ರಹಸ್ಯವಾಗಿ ಲಾಕರ್‌ಗಳಿರುತ್ತವೆ. ತನ್ನ ಡ್ರಗ್‌್ಸ ಮಾರಾಟ ಸುಳಿವು ಪೊಲೀಸರಿಗೆ ಗೊತ್ತಾಗದಂತೆ ಎಚ್ಚರಿಕೆವಹಿಸಿದ್ದ ಆತ, ಐದಾರು ಡಿಕ್ಷನರಿ ಮಾದರಿ ಪುಸಕ್ತ ರೂಪದ ಲಾಕರ್‌ಗಳನ್ನು ಖರೀದಿಸಿ ಅದರಲ್ಲೊಂದರಲ್ಲಿ ಡ್ರಗ್‌್ಸ ತುಂಬಿ ಗ್ರಾಹಕರಿಗೆ ತಲುಪಿಸುತ್ತಿದ್ದ. ಆತನನ್ನು ಬಂಧಿಸಿದಾಗ ಡಿಕ್ಷನರಿ ಜಪ್ತಿ ಮಾಡಿದಾಗ ಡ್ರಗ್‌್ಸ ರಹಸ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಡ್ರಗ್‌್ಸ ದಂಧೆ ನಡೆಸುತ್ತಿದ್ದ ಪದವಿ ವಿದ್ಯಾರ್ಥಿಯ ಸೆರೆ
ಬಸವನಗುಡಿ ಬಳಿ ಡ್ರಗ್‌್ಸ ಮಾರಾಟಕ್ಕೆ ಯತ್ನಿಸಿದ್ದ ಮತ್ತೊಬ್ಬ ವಿದ್ಯಾರ್ಥಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕೇರಳ ಮೂಲದ ವೆಸ್ಟರನ್ ರಾಯ್ ಬಂಧಿತನಾಗಿದ್ದು, ಆರೋಪಿಯಿಂದ .20 ಲಕ್ಷ ಮೌಲ್ಯದ ಎಡಿಎಂಎ ಹಾಗೂ ಸ್ಕೂಟರ್ ಜಪ್ತಿ ಮಾಡಲಾಗಿದೆ. ಎರಡು ದಿನಗಳ ಹಿಂದೆ ಬಸವನಗುಡಿ ಬಳಿ ಆರೋಪಿ ಡ್ರಗ್‌್ಸ ಮಾರಾಟಕ್ಕೆ ಯತ್ನಿಸಿದಾಗ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಆಂಧ್ರದಿಂದ ರೈಲಿನಲ್ಲಿ 20 ಕೇಜಿ ಗಾಂಜಾ ತಂದು ಸಿಕ್ಕಬಿದ್ದ ಪೆಡ್ಲರ್
ಕೇರಳ ಮೂಲದ ರಾಯ್, ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ. ಡ್ರಗ್‌್ಸ ದಂಧೆಕೋರರಿಂದ ಕಡಿಮೆ ಬೆಲೆ ಖರೀದಿಸಿ ಡ್ರಗ್‌್ಸ ಖರೀದಿಸಿ ಬಳಿಕ ಅದನ್ನು ದುಬಾರಿ ಬೆಲೆಗೆ ರಾಯ್ ಮಾರುತ್ತಿದ್ದ. ಮೋಜು ಮಸ್ತಿ ಜೀವನಕ್ಕೆ ಹಣ ಸಂಪಾದಿಸಲು ಆತ ಡ್ರಗ್‌್ಸ ದಂಧೆಗಳಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ