ಸರ್ಪದಿಂದ ಕಚ್ಚಿಸಿ ಪತ್ನಿ ಕೊಲೆ..  ಪಾಪಿ ಪತಿಗೆ 82 ದಿನದಲ್ಲೇ ಶಿಕ್ಷೆ!

By Suvarna News  |  First Published Oct 11, 2021, 3:45 PM IST

* ಹೆಂಡತಿಯನ್ನು ಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ ಪ್ರಕರಣ
* ಮೂರು ತಿಂಗಳೋಳಗೆ ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್
* ಡಮ್ಮಿ ಬೊಂಬೆ ಬಳಸಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು
*  ಕೇರಳದಲ್ಲಿ ದೊಡ್ಡ ಸುದ್ದಿಯಾಗಿದ್ದ  ಉತ್ರಾ ಮರ್ಡರ್


ತಿರುವನಂತಪುರ(ಅ. 11) ) ಸರ್ಪದಿಂದ(Cobra) ಕಚ್ಚಿಸಿ ಹೆಂಡತಿಯನ್ನು(Wife) ಭೀಕರವಾಗಿ ಕೊಲೆ (Murder)ಮಾಡಿದ  ಪ್ರಕರಣದ  ತೀರ್ಪು ಹೊರಬಿದ್ದಿದೆ.  ಪತ್ನಿಯನ್ನು ಕೊಂದಿದ್ದ ಗಂಡ ಅಪರಾಧಿ (found guilty)ಎಂದು ಸಾಬೀತಾಗಿದ್ದು ಕೋಲಂ ಅಡಿಶನಲ್ ಸೆಶನ್ಸ್ ಕೋರ್ಟ್ IPC ಸೆಕ್ಷನ್  302, 307, 328 ಮತ್ತು  201 ಅಡಿಯಲ್ಲಿ ದೋಷಿ ಎಂದು ಹೇಳಿದೆ. ಮಂಗಳವಾರ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

ಸರ್ಕಾರಿ ಕೆಲಸದಲ್ಲಿದ್ದ ಸೂರಜ್  ಎಂಬಾತನನ್ನು ಹೆಂಡತಿ ಉತ್ರಾಳನ್ನು ಕೊಲೆ ಮಾಡಿದ್ದ. ವಿಷ ಸರ್ಪದಿಂದ ಹೆಂಡತಿಯನ್ನು ಎರಡು ಸಾರಿ ಕೊಚ್ಚಿಸಿ ಕೊಲೆ ಮಾಡಿದ್ದ. ಹಾವನ್ನು ತೆಗೆದುಕೊಂಡ ಬಂದ್ ಜಾರ್ ಪತ್ತೆ ಮಾಡಲಾಗಿದ್ದು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. 

Tap to resize

Latest Videos

ಮಿಲನದ ಬಳಿಕ  ಸಂಗಾತಿಯನ್ನೇ ತಿನ್ನುವ ಕಾಳಿಂಗ, ಕಾರಣ ಏನು?

ಹಾವು ಕಚ್ಚಿ ಮೇ 7 ರಂದು ಉತ್ರಾ ಸಾವನ್ನಪ್ಪಿದ್ದರು. ಇದಾದ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸೂರಜ್  ಒಪ್ಪಿಕೊಂಡಿದ್ದ. 10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ. ಮೇ 2 ರಂದೇ ಕೊಲೆ ಮಾಡಲು ಯತ್ನ ಮಾಡಿದ್ದ ಆದರೆ ಹಾವು ಕೈಕೊಟ್ಟಿತ್ತು.

ಪ್ರಕರಣ ದಾಖಲಾಗಿ 82 ದಿನದಲ್ಲಿಯೇ ತೀರ್ಪು ಹೊರಗೆ ಬಂದಿದೆ. ಹಾವಿನಿಂದ ಕಚ್ಚಿಸಿ ಸಾಯಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಸೂರಜ್ ಭಾವಿಸಿದ್ದ,

ತನಿಖೆಯ  ಬೆನ್ನು ಹತ್ತಿದ್ದ   ಪೊಲೀಸರು ಮಹಿಳೆಯನ್ನು ಹೋಲುವ ಡಮ್ಮಿ ಬೊಂಬೆಯೊಂದನ್ನು ಬಳಸಿ ಅದಕ್ಕೆ ಹಾವಿನಿಂದ ಕಚ್ಚಿಸಿದ್ದರು. ಹಾವು ಮಹಿಳೆಯ ಗೊಂಬೆಗೆ ಕಚ್ಚಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಯಾವ ಕಾರಣಕ್ಕೆ ಕಚ್ಚುತ್ತದೆ? ಹಾವಿನ ವರ್ತನೆ  ಹೇಗಿರುತ್ತದೆ?  ಒಂದು ವೇಳೆ ಕಚ್ಚಿದರೆ ವಿಷ ಏರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಎಲ್ಲ ಅಂಶಗಳನ್ನು ಅಧಿಕಾರಿಗಳು ಸಂಗ್ರಹ ಮಾಡಿಕೊಂಡಿದ್ದರು.

ವಿಚಾರಣೆ ವೇಳೆ ಸೂರಜ್ ತನ್ನ ತಪ್ಪು ಒಲಪ್ಪಿಕೊಂಡಿದ್ದ. ಹಣಕ್ಕಾಗಿ ಯುವತಿಯನ್ನು ಮದುವೆಯಾಗಿದ್ದೆ ಎಂದು ಹೇಳಿದ್ದ. ಕೇರಳದಲ್ಲಿ ಈ ಪ್ರಕರಣದ ದೊಡ್ಡ ಸದ್ದು ಮಾಡಿದ್ದು ಮಹಿಳೆಯ ಕುಟುಂಬದವರು ದೂರು ದಾಖಲಿಸಿದ್ದರು. 

click me!