ಕೇಳಿದ್ದಷ್ಟು ಹಣ ಕೊಡಲು ಒಪ್ಪದ್ದಕ್ಕೆ ವಿದೇಶಿ ಪ್ರಜೆಗೆ ಆಟೋ ಗುದ್ದಿಸಿದ

By Kannadaprabha NewsFirst Published Oct 11, 2021, 7:50 AM IST
Highlights

*  ಮೊಬೈಲ್‌ ಕಸಿದು ಕೃತ್ಯ ಆಟೋ ಚಾಲಕನ ಬಂಧನ
* ಪೊಲೀಸರಿಗೆ ದೂರು ನೀಡಿದ ಆಸ್ಪ್ರೇಲಿಯಾ ಮೂಲದ ಗ್ರೇ ಜಾನ್‌ ನ್ಯೂಮ್ಯಾನ್‌
* ಹೆಚ್ಚಿಗೆ ಹಣ ಕೊಡುವಂತೆ ಗ್ರೇ ಜಾನ್‌ ಬಳಿ ಕೇಳಿದ್ದ ಆಟೋ ಚಾಲಕ 
 

ಬೆಂಗಳೂರು(ಅ.11): ಆಟೋ(Auto) ಬಾಡಿಗೆ ಮೊತ್ತ ಕೊಡುವ ವಿಚಾರಕ್ಕೆ ಆಸ್ಟ್ರೇಲಿಯಾ(Australia) ಪ್ರಜೆಯ ಮೊಬೈಲ್‌ ಕಸಿದು, ಆಟೋ ಗುದ್ದಿಸಿ ಪರಾರಿಯಾಗಿದ್ದ ಚಾಲಕನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೈಯ್ಯಪ್ಪನಹಳ್ಳಿ ನಿವಾಸಿ ಆಟೋ ಚಾಲಕ ಶರತ್‌ (23) ಬಂಧಿತ. ಆಸ್ಟ್ರೇಲಿಯಾ ಮೂಲದ ದೊಮ್ಮಲೂರು ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ಗ್ರೇ ಜಾನ್‌ ನ್ಯೂಮ್ಯಾನ್‌ (73) ಎಂಬುವರು ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ(Arrest) ಎಂದು ಪೊಲೀಸರು ಹೇಳಿದ್ದಾರೆ.

ಎಸ್‌ಐ ಹುದ್ದೆ ಆಸೆ ತೋರಿಸಿ 18 ಲಕ್ಷ ವಂಚನೆ

ಗ್ರೇ ಜಾನ್‌ 20 ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಭಾರತಕ್ಕೆ(India) ಬಂದಿದ್ದರು. 11 ವರ್ಷಗಳಿಂದ ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ(Job) ಗ್ರೇ, ನಿವೃತ್ತಿ ಜೀವನ ಅನುಭವಿಸುತ್ತಿದ್ದರು.

ಅ.6ರಂದು ಗ್ರೇ ಅವರು ಚರ್ಚ್‌ ಸ್ಟ್ರೀಟ್‌ನಿಂದ ಸಿವಿ ರಾಮನ್‌ ನಗರದಲ್ಲಿರುವ ಸ್ನೇಹಿತನ ಮನೆಗೆ ತೆರಳಲು ಆಟೋ ಹತ್ತಿದ್ದರು. ಆಟೋ ಚಾಲಕ ಭರತ್‌ಗೆ 200 ಕೊಡುವುದಾಗಿ ಹೇಳಿದ್ದರು. ಆತ ಸಿವಿ ರಾಮನ್‌ ನಗರಕ್ಕೆ ತಂದು ಬಿಟ್ಟಾಗ 200 ಹೆಚ್ಚಿಗೆ ಕೊಡುವಂತೆ ಗ್ರೇ ಜಾನ್‌ ಬಳಿ ಕೇಳಿದ್ದ. ಇದಕ್ಕೆ ಒಪ್ಪಿ ಗ್ರೇ ಹಣ ನೀಡುತ್ತಿದ್ದಂತೆ ಏಕಾಏಕಿ .700 ಕೊಡುವಂತೆ ಒತ್ತಾಯ ಮಾಡಿದ. ಇದರಿಂದ ಆಕ್ರೋಶಗೊಂಡ ಗ್ರೇ ಜಾನ್‌ ದೂರು ನೀಡುವುದಾಗಿ ಹೇಳಿ ಮೊಬೈಲ್‌ನಲ್ಲಿ ಆಟೋ ನಂಬರ್‌ ಸೆರೆ ಹಿಡಿಯಲು ಮುಂದಾಗಿದ್ದರು. ಆ ವೇಳೆ ಭರತ್‌ ಮೊಬೈಲ್‌ ಕಸಿದು ಆಟೋವನ್ನು ಗ್ರೇ ಜಾನ್‌ಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಪರಿಣಾಮ ಗ್ರೇ ಜಾನ್‌ ಗಾಯಗೊಂಡು ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು(police) ಆರೋಪಿಯನ್ನು ಬಂಧಿಸಿ(Arrest), ಜೈಲಿಗಟ್ಟಿದ್ದಾರೆ.
 

click me!