ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಹೆಚ್.ಎ.ಎಲ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು(ಫೆ16): ಮಾದಕ ಜಾಲದ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಹೆಚ್.ಎ.ಎಲ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಕೇರಳ (Kerala) ಮೂಲದ ಶಮೀರ್ ಮತ್ತು ಸಾಹೀರ್ ಎಂಬ ಇಬ್ಬರು ಆರೋಪಿಗಳನ್ನು ಸಿಸಿಬಿ (CCB) ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಾಲೇಜು ಹಾಗೂ ಸಾಫ್ಟ್ ವೇರ್ ಕಂಪನಿಗಳ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲಿಸರು ಇವರಿಬ್ಬರನ್ನು ಬಂಧಿಸಿದ್ದು, ಬಂಧಿತರಿಂದ 3 ಲಕ್ಷ ಮೌಲ್ಯದ 52 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ.
ಪ್ರೇಯಸಿಯಿಂದಾಗಿ ಡ್ರಗ್ ಪೆಡ್ಲರ್ ಆದ ಯುವಕ!: ಪೊಲೀಸರ ವಿಚಾರಣೆ ವೇಳೆ ಬಂಧಿತ ಯುವಕ ಶಮೀರ್ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದು, ಪ್ರೇಯಸಿಯಿಂದಾಗಿ ಡ್ರಗ್ ಪೆಡ್ಲರ್ ಆದೆ ಎಂದಿದ್ದಾನೆ. ಕೇರಳ ಮೂಲದ ಶಮೀರ್ಯುವತಿಯೊಬ್ಬಳನ್ನು ಪ್ರೀತಿಸ್ತಿದ್ದ, ಇದು ಹುಡುಗಿ ಮನೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ 2019 ರಲ್ಲಿ ಪ್ರೇಯಸಿ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ನನ್ನನ್ನು ಲಾಕ್ ಮಾಡಿಸಿದ್ರು ಎಂದು ಆರೋಪಿಸಿದ್ದಾನೆ.
ಡ್ರಗ್ಸ್ ಕೇಸ್ ನಲ್ಲಿ ಕೊಚ್ಚಿಯ ಇನ್ಫೋಪಾರ್ಕ್ ಪೊಲೀಸರು ಶಮೀರ್ ನನ್ನು ಬಂಧಿಸಿದ್ದರು. 1 ವರ್ಷಗಳ ಕಾಲ ಜೈಲಿನಲ್ಲಿದ್ದ ಶಮೀರ್ ಜೈಲಿಂದ ಹೊರಬರಲು ಲಾಯರ್ ಖರ್ಚು, ಪೈನ್ ಅಂತ 8 ರಿಂದ 10ಲಕ್ಷ ವ್ಯವಯಿಸಿದ್ದಾನಂತೆ. ಹೀಗಾಗಿ ಮತ್ತೆ ಡ್ರಗ್ ಪೆಡ್ಲಿಂಗ್ ಮುಂದುವರೆಸಿದ್ದನಂತೆ.
ಕೇರಳ ಬಿಟ್ಟು ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಶಮೀರ್ ಹೆಚ್ಎಎಲ್ ನಲ್ಲಿ ಮನೆ ಮಾಡಿಕೊಂಡು ನಾಯಿ ಸಾಕಿಕೊಂಡಿದ್ದ ಜೊತೆಗೆ ನೈಜೀರಿಯಾ ಪ್ರಜೆಗಳ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಒಂದೂವರೆ ಸಾವಿರಕ್ಕೆ ಎಂಡಿಎಂಎ ಖರೀದಿಸಿ ಅನದನು ಇತರರಿಗೆ 4 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಇಷ್ಟು ಮಾತ್ರವಲ್ಲ ಬೆಂಗಳೂರಲ್ಲಿ ಖರೀದಿಸಿದ ಮಾದಕ ವಸ್ತುವನ್ನು ಕೇರಳಕ್ಕೆ ಕೂಡ ಕಳುಹಿಸಿ ಕೊಡುತ್ತಿದ್ದ. ಬೇರೆ ಕೆಲಸ ಸಿಗದೆ ಡ್ರಗ್ಸ್ ಮಾರಾಟ ಮಾಡುತ್ತಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಶಮೀರ್ ಬಾಯಿ ಬಿಟ್ಟಿದ್ದಾನೆ.
Drugs Case: ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಮೂವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ
ಬ್ರೆಜಿಲ್‌ನಿಂದ ತಂದು ಬೆಂಗ್ಳೂರಲ್ಲಿ ಡ್ರಗ್ಸ್ ಮಾರಾಟ, ಇಬ್ಬರ ಬಂಧನ: ರಾಜಧಾನಿಯಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ ಗೋವಿಂದಪುರ ಠಾಣೆ ಪೊಲೀಸರು(Police), ನಗರಕ್ಕೆ ಡ್ರಗ್ಸ್(Drugs) ಪೂರೈಸುತ್ತಿದ್ದ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ .2.5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ನೈಜೀರಿಯಾ(Nigeria) ಪ್ರಜೆ ಚಿಬ್ಯುಜೆ ಚಿನೊನ್ಸೊ ಹಾಗೂ ಮಹಾರಾಷ್ಟ್ರದ(Maharashtra) ಶ್ರೀಕಾಂತ್ ಬಂಧಿತರಾಗಿದ್ದು, ಆರೋಪಿಗಳಿಂದ(Accused) 1.21 ಕೋಟಿ ಮೌಲ್ಯದ 2.428 ಕೆ.ಜಿ. ಬ್ರೌನ್ ಶುಗರ್(Brown Sugar) ಹಾಗೂ .1.30 ಕೋಟಿ ಮೌಲ್ಯದ ಕೊಕೇನ್(Cocaine) ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಈ ಇಬ್ಬರು ಪೆಡ್ಲರ್‌ಗಳ ಸಹಚರರು ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಅವರು ನೀಡಿದ ಮೇರೆಗೆ ಪೆಡ್ಲರ್‌ಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru Crime: ಆಂಧ್ರದಲ್ಲಿ ಗಾಂಜಾ ಬೆಳೆದು ಬೆಂಗ್ಳೂರಲ್ಲಿ ಮಾರಾಟ ಮಾಡ್ತಿದ್ದ ಪೆಡ್ಲರ್ ಪೊಲೀಸ್ ಬಲೆಗೆ
ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ:ಮಹಾರಾಷ್ಟ್ರದ ಅಂಕೋಲಾ ಮೂಲದ ಶ್ರೀಕಾಂತ್ ವೃತ್ತಿಪರ ಪೆಡ್ಲರ್(Drug Peddler) ಆಗಿದ್ದು, ಅಸ್ಸಾಂ ಗಡಿ ಪ್ರದೇಶದಿಂದ ಕಡಿಮೆ ಬೆಲೆಗೆ ಸಗಟು ರೂಪದಲ್ಲಿ ಬ್ರೌನ್ಸ್ ಶುಗರ್ ಖರೀದಿಸುತ್ತಿದ್ದ. ಬಳಿಕ ಬೆಂಗಳೂರು(Bengaluru) ಸೇರಿದಂತೆ ಇತರೆಡೆ ಬೇರೆ ಪೆಡ್ಲರ್‌ಗಳಿಗೆ ಪೂರೈಸುತ್ತಿದ್ದ. ಬೆಂಗಳೂರಿನಲ್ಲಿ ತನ್ನ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ರೂಪಿಸಿದ್ದ. ಇತ್ತೀಚಿಗೆ ಆತನ ದಂಧೆ ಬಗ್ಗೆ ಬಾತ್ಮೀದಾರರಿಂದ ಗೋವಿಂದಪುರ ಠಾಣೆ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಅಂತೆಯೇ ಕಾರ್ಯಾಚರಣೆ ನಡೆಸಿ ಫೆ.7ರಂದು ಗೋವಿಂದಪುರದ ಫಾತಿಮಾ ಲೇಔಟ್‌ನ ಕೆ.ನವಾಜ್ ಷರೀಫ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಶ್ರೀಕಾಂತ್ ಬಗ್ಗೆ ಬಾಯ್ಬಿಟ್ಟಿದ್ದ. ಈ ಮಾಹಿತಿ ಮೇರೆಗೆ ಮಹಾರಾಷ್ಟ್ರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ(Arrest) ಕರೆ ತಂದಿದ್ದಾರೆ. ಆತನಿಂದ 1.21 ಕೋಟಿ ಮೌಲ್ಯದ ಬ್ರೌನ್ ಶುಗರ್ ಸಹ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.