ಕುಡಿದ ಮತ್ತಿನಲ್ಲಿ ಪತ್ನಿ, ಅತ್ತೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಆರೋಪಿ ಅರೆಸ್ಟ್

By Suvarna News  |  First Published May 27, 2022, 4:29 PM IST

* ಪತ್ನಿ ಹಾಗೂ ಅತ್ತೆಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪಾಪಿಪತಿ..!
* ಕುಡಿದ ಮತ್ತಿನಲ್ಲಿ  ಮಾರಕಾಸ್ತ್ರಗಳಿಂದ ಮನಬಂದಂತೆ ಹೊಡೆದ
* ಕೌಟುಂಬಿಕ ಕಲಹದಿಂದ ಬೇಸತ್ತು ತವರುಮನೆಗೆ ಬಂದಿದ್ದ ಹೆಂಡತಿ ಮಾಳಮ್ಮ


ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ, (ಮೇ.27):
ಕುಡಿದ ಮತ್ತಿನಲ್ಲೊಬ್ಬ ಪತ್ನಿ ಹಾಗೂ ಅತ್ತೆಯ ಮೇಲೆ ಮಾರಕಾಸ್ತ್ರಗಳಾದ ಚಾಕು ಚೂರಿಯಿಂದ ದಾಳಿ ನಡೆಸಿದ್ದಾನೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯಡಿಯಾಪುರ ಗ್ರಾಮದಲ್ಲಿ ಈ ವಿಕೃತ್ಯ ನಡೆದಿದೆ. ಇದರಿಂದಾಗಿ ಹೆಂಡತಿ ಮಾಳಮ್ಮ ಹಾಗೂ ಅತ್ತೆ ನಿಂಗಮ್ಮ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಡ ಸಂತೋಷ್ ಹಾಗೂ ಹೆಂಡತಿ ಮಾಳಮ್ಮ ಇಬ್ಬರ ನಡುವೆ ಕೌಟುಂಬಿಕ ಕಲಹ ಹೆಚ್ಚಾಗಿತ್ತು, ಹಾಗಾಗಿ ಹೆಂಡತಿ ಗಂಡನ ಮನೆಯನ್ನು ಬಿಟ್ಟು ಬೇಸತ್ತು ತವರು ಮನೆಯಾದ ಯಡಿಯಾಪುರಕ್ಕೆ ಬಂದಿದ್ದಳು. ಗಂಡನ ಕಿರಿಕಿರಿ ಹೆಚ್ಚಾಗಿದ್ದರಿಂದ ಮಾಳಮ್ಮ ತನ್ನ ತವರೂ ಮನೆಗೆ ಬಂದಿದ್ದಳು, ಆಗ ಸಂತೋಷ್ ಹೆಂಡತಿ ಮಾಳಮ್ಮ ಹಾಗೂ ಅತ್ತೆ ನಿಂಗಮ್ಮಗೆ  ಮಾದಕಾಸ್ತ್ರಗಳಿಂದ ಹೊಡೆದಿದ್ದಾನೆ.

Tap to resize

Latest Videos

undefined

ಊಟಕ್ಕೆ ಸ್ವಲ್ಪ ಕಾಯಿರಿ ಎಂದ ಪತ್ನಿಯನ್ನು ಥಳಿಸಿ ಬಾವಿಗೆ ತಳ್ಳಿದ ಗಂಡ

ಕುಡಿದ ಮತ್ತಿನಲ್ಲಿ ಸಂತೋಷ್ ನಿಂದ ಅಟ್ಯಾಕ್
ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ರೆ ಏನಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಯಾಕಂದ್ರೆ ಕುಡಿದ ಮತ್ತಿನಲ್ಲಿ ಮಾರಕಾಸ್ತ್ರಗಳಿಂದ ಮನಬಂದಂತೆ ಹೊಡೆದಿದ್ದಾನೆ. ಕ್ಷಣ ಮಾತ್ರದಲ್ಲಿ ತಾಯಿ ನಿಂಗಮ್ಮ ಹಾಗೂ ಮಗಳು ಮಾಳಮ್ಮ ಬಚಾವ್ ಆಗಿದ್ದಾರೆ. ಕೈಯಲ್ಲಿ ಚಾಕು, ಚೂರಿಯಂತಹ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಸಂತೋಷ್ ಇಬ್ಬರು ಮಹಿಳೆಯರಿಗೆ ಚಾಕುವಿನಿಂದ ಚೂಚ್ಚಿ ಕೊಲೆಯ ಯತ್ನ ನಡೆಸಿದ್ದಾನೆ. ಕೌಟುಂಬಿಕ ಕಲಹ ಇದ್ರೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು, ಆದ್ರೆ ಇದನ್ನು ಬಿಟ್ಟು ಇಬ್ಬರೂ ಮಹಿಳೆಯರು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸಂತೋಷ್ ಎಂಬುವವನು ವಿಕೃತಿ ಮೆರೆದಿದ್ದಾನೆ.

ಮಾನಸಿಕ ಕಿರುಕುಳ ನೀಡುತ್ತಿದ್ದ ಸಂತೋಷ್
ಸಂತೋಷ್ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದ ನಿವಾಸಿ, 10 ವರ್ಷದ ಹಿಂದೆ ಹುಣಸಗಿ ತಾಲೂಕಿನ ಯಡಿಯಾಪುರ ಗ್ರಾಮದ ಮಾಳಮ್ಮ ನೊಂದಿಗೆ ಮದುವೆಯಾಗುತ್ತದೆ, ಇವರಿಗೆ 7 ವರ್ಷದ ಒಬ್ಬ ಮಗ ಕೂಡ ಇದಾನೆ. ಸಂಸಾರದಲ್ಲಿ ಬಡತನ ಇರುವುದರಿಂದ ಬೆಂಗಳೂರಿಗೆ ದುಡಿಯಲು ಹೋಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸ್ತಾ ಇದ್ರು, ಆದ್ರೆ ಮಾಳಮ್ಮನ ಗಂಡ ಸಂತೋಷ್ ಬೆಂಗಳೂರಿನಲ್ಲಿಯೂ ಸಹ ನೀನು ಯಾರ ಜೊತೆ ಮಾತನಾಡಬಾರದು ಎಂದು ದಿನದಿನ ಮಾಳಮ್ಮ ಗೆ ಮಾನಸಿಕ ಕಿರುಕುಳ ನೀಡುತ್ತಿದ್ದನಂತೆ, ಇದರಿಂದಾಗಿ ಮಾಳಮ್ಮ ಗಂಡನ ಕಿರುಕುಳಕ್ಕೆ ಬೇಸತ್ತು ತವರೂ ಮಾನೆಯಾದ ಯಾಡಿಯಾಪುರಕ್ಕೆ ಬಂದಿದ್ದಾಳೆ, ಆದ್ರೆ ಸಂತೋಷ್ ಮಾತ್ರ ಮಾಳಮ್ಮನನ್ನ ತವರೂ ಮನೆಯಲ್ಲಿಯೂ ಸಹ ಸುಖದಿಂದ ಇರಲು ಬೀಡದೇ ಹೋದೆ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅಂತ ಇಲ್ಲಿಯೂ ಬಂದು ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನ ಮಾಡಿದ್ದಾನೆ.

ಅರೋಪಿ ಸಂತೋಷ್ ನನ್ನು ಸೆರೆಹಿಡಿದ ಪೋಲಿಸರು
ಪತಿ ಮಾಳಮ್ಮ ಹಾಗೂ ಅತ್ತೆ ನಿಂಗಮ್ಮ ಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಪ್ರಕರಣವೂ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂತೋಷ್ ಗಾಗಿ ಕೆಂಭಾವಿ ಪೋಲಿಸರು ತಲಾಶ್ ನಡೆಸಿದ್ದರು. ಈಗ ಆರೋಪಿ ಸಂತೋಷರ ನನ್ನು ಕೆಂಭಾವಿ ಪೋಲಿಸರು ಸೆರೆಹಿಡಿದು ಹೆಡೆಮುರಿ ಕಟ್ಟಿದ್ದಾರೆ.

click me!