ಉತ್ತರಪ್ರದೇಶ: ಬ್ಯಾಂಕ್‌ ಸಾಲ ಪಡೆಯಲು ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಗ್ಯಾಂಗ್‌ ಬಂಧನ

Published : May 27, 2022, 03:54 PM IST
ಉತ್ತರಪ್ರದೇಶ: ಬ್ಯಾಂಕ್‌ ಸಾಲ ಪಡೆಯಲು ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಗ್ಯಾಂಗ್‌ ಬಂಧನ

ಸಾರಾಂಶ

ಕಾನ್ಪುರದಲ್ಲಿ ಬ್ಯಾಂಕ್ ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

ಕಾನ್ಪುರ (ಮೇ 27): ಉತ್ತರ ಪ್ರದೇಶದ ನಜೀರಾಬಾದ್ ಪೊಲೀಸರು ನಕಲಿ ದಾಖಲೆಗಳ ಮೇಲೆ ಸಾಲ ಪಡೆದ ಗ್ಯಾಂಗನ್ನು ಬಂಧಿಸಿದ್ದಾರೆ. ಬ್ಯಾಂಕ್‌ನಿಂದ ನಕಲಿ ದಾಖಲೆಗಳ ಸಹಾಯದಿಂದ ಗ್ಯಾಂಗ್ ಸಾಲ ಪಡೆಯುತ್ತಿತ್ತು.  20 ಲಕ್ಷ ರೂ.ಗಳ ನಾಲ್ಕು ಸಾಲಗಳನ್ನು ಮಂಜೂರು ಮಾಡಲಾಗಿತ್ತು, ಆದರೆ ಮೊತ್ತವನ್ನು ವರ್ಗಾಯಿಸುವ ಮೊದಲು ಪೊಲೀಸರು ಗ್ಯಾಂಗನ್ನು ಬಂಧಿಸಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗುರುವಾರ, ಎಡಿಸಿಪಿ ಮನೀಶ್ ಸೋಂಕರ್  "ಮೇ 24 ರಂದು ಬಂಧನ್ ಬ್ಯಾಂಕ್ ಅಶೋಕ್ ನಗರದ ಮ್ಯಾನೇಜರ್ ರವಿ ಒಮರ್ ಅವರು ನಜೀರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ"  ಎಂದು ತಿಳಿಸಿದ್ದಾರೆ. ಬ್ಯಾಂಕ್ ಸಾಲದ ಅರ್ಜಿಯಲ್ಲಿ ಆರೋಪಿಗಳು ಆಶಿಶ್ ಖನ್ನಾ, ಪಂಕಜ್ ಶುಕ್ಲಾ ಮತ್ತು ಇತರರು ನಕಲಿ ಐಡಿಗಳು ಮತ್ತು ವಿಳಾಸಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಮೂವರು ಆರೋಪಿಗಳ (Crime News) ಹೆಸರು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಮಾಲ್ ರಸ್ತೆಯ ಸಾರ್ವಜನಿಕ ಸೌಕರ್ಯ ಕೇಂದ್ರದ ನಿರ್ವಾಹಕರು ಭಾಗಿಯಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ: Davanagere: ಕದಿಯಲು ಬಂದ ಕಳ್ಳ ಆಯ ತಪ್ಪಿ ಬಿದ್ದು ಸಾವು!

ಸೋಂಕರ್ ಬ್ಯಾಂಕ್ ಮ್ಯಾನೇಜರ್‌ಗೆ, ಆರೋಪಿಗಳನ್ನು ಸಹಿಗಾಗಿ ಬ್ಯಾಂಕ್‌ಗೆ ಕರೆಸಿ ಟ್ರ್ಯಾಪ್ ಮಾಡಲು ಹೇಳಿದರು. ಆರೋಪಿಗಳು ಕಚೇರಿಗೆ ಬಂದ ತಕ್ಷಣ ನಜೀರಾಬಾದ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮೂವರನ್ನೂ ಜೈಲಿಗೆ ಕಳುಹಿಸಲಾಗಿದೆ.‌

ಪ್ರಮುಖ ಆರೋಪಿ ಚಂದನ್ ಶ್ರೀವಾಸ್ತವ ಸಾರ್ವಜನಿಕ ಅನುಕೂಲಕ್ಕಾಗಿ ಕೇಂದ್ರವನ್ನು ನಡೆಸುತ್ತಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಅಲ್ಲಿಂದ ಜನರ ದಾಖಲೆಗಳನ್ನು (Documents) ಸಂಗ್ರಹಿಸಿ ಬ್ಯಾಂಕಿನಲ್ಲಿ ನಕಲಿ ಸಾಲ ಪಡೆಯಲು ಎಡಿಟ್ ಮಾಡುತ್ತಿದ್ದರು. ಶ್ರೀವಾಸ್ತವ್ ಬಳಿಯಿಂದ ಸಾವಿರಾರು ನಕಲಿ ಐಡಿಗಳು, ಆಧಾರ್ ಕಾರ್ಡ್‌ಗಳು, ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಹಣ ಡಬಲ್ ಮಾಡಿಕೊಡುವುದಾಗಿ ವಂಚನೆ: ಮನಿ ಡಬಲಿಂಗ್ ಗ್ಯಾಂಗ್ ಸೆರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ