ಮೊಬೈಲ್‌ ಚಾರ್ಜರ್ ಶಾಕ್‌ ತಾಗಿ 8 ತಿಂಗಳ ಮಗು ಸಾವು

Published : Aug 02, 2023, 11:31 AM ISTUpdated : Aug 02, 2023, 01:21 PM IST
ಮೊಬೈಲ್‌ ಚಾರ್ಜರ್ ಶಾಕ್‌ ತಾಗಿ 8 ತಿಂಗಳ ಮಗು ಸಾವು

ಸಾರಾಂಶ

ಮನೆಯಲ್ಲಿ ಮೊಬೈಲ್‌ ಚಾರ್ಜ್‌ ಹಾಕಿದ್ದ ವೈರ್‌ ಅನ್ನು ಸ್ವಿಚ್‌ ಆಫ್‌ ಮಾಡದೇ ಹೋಗಿದ್ದು, ಅದನ್ನು ಬಾಯಿಗಿಟ್ಟುಕೊಂಡ 8 ತಿಂಗಳ ಮಗು ವಿದ್ಯುತ್‌ ಶಾಕ್‌ ಉಂಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಕಾರವಾರ, ಉತ್ತರಕನ್ನಡ (ಆ.02): ಮೊಬೈಲ್‌ ಚಾರ್ಜರ್‌ ಬಳಕೆ ಮಾಡುವಾಗ ಕೆಲವು ಬಾರಿ ನಮಗೂ ಶಾಕ್‌ ಹೊಡೆದ ಅಥವಾ ಕೈ ಜುಮ್ಮೆಂದ ಅನುಭವ ಆಗಿರುತ್ತದೆ. ಇದಕ್ಕೆ ಕಾರಣ ಮೊಬೈಲ್‌ ಚಾರ್ಜರ್‌ ಪಾಯಿಂಟ್‌ನಲ್ಲಿ ಕರೆಂಟ್‌ ಪ್ರವಾಹ ಆಗುತ್ತಿರುತ್ತದೆ. ಇದೇ ರೀತಿ ಮೊಬೈಲ್‌ ಚಾರ್ಜ್‌ಗೆ ಹಾಕಿ ಸ್ವಿಚ್‌ ಆಫ್‌ ಮಾಡದಿದ್ದ ಚಾರ್ಜರ್‌ ವೈರ್‌ ಅನ್ನು ಹಿಡಿದುಕೊಂಡ 8 ತಿಂಗಳ ಮಗು ಸ್ಥಳದಲ್ಲಿತೇ ಕರೆಂಟ್‌ ಶಾಕ್‌ ತಗುಲಿ ಸಾವನ್ನಪ್ಪಿರುವ ದುರ್ಘಟನೆ ಕಾರವಾರದಲ್ಲಿ ನಡೆದಿದೆ. 

ಉತ್ತರಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಘಟನೆ ನಡೆದಿದೆ.  ಮೊಬೈಲ್ ಚಾರ್ಜಿಂಗ್ ಶಾಕ್ ತಾಗಿ 8 ತಿಂಗಳ ಮಗು ಸಾವನ್ನಪ್ಪಿದೆ. ಸಂತೋಷ ಹಾಗೂ ಸಂಜನಾ ದಂಪತಿಯ ಸಾನಿಧ್ಯ ಹೆಸರಿನ (8 ತಿಂಗಳು) ಹೆಣ್ಣು ದುರಂತ ಅಂತ್ಯಕಂಡಿದೆ. ಮನೆಯಲ್ಲಿ ಪೋಷಕರು ಮೊಬೈಲ್ ಚಾರ್ಜ್ ಹಾಕಿ ನಂತರ ಮೊಬೈಲ್‌ ತೆಗೆದುಕೊಂಡು ಸ್ವಿಚ್ ಬಂದ್ ಮಾಡದೆ ಅಲ್ಲೇ ಬಿಟ್ಟು ನಿರ್ಲಕ್ಷ್ಯ ಮಾಡಿದ್ದರು. ವಿದ್ಯುತ್‌ ಆನ್‌ ಇದ್ದ ಮೊಬೈಲ್ ಚಾರ್ಜರ್ ಬಾಯಲ್ಲಿಟ್ಟು ಕೊಂಡ ಮಗುವಿಗೆ ಶಾಕ್ ತಗಲಿ ಸಾವನ್ನಪ್ಪಿದೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

Gruha Jyothi Scheme: ಮೊದಲ ಶೂನ್ಯ ಕರೆಂಟ್ ಬಿಲ್ ವಿತರಣೆ: ಗ್ರಾಹಕರು ಫುಲ್‌ ಖುಷ್‌

ಮೊಬೈಲ್‌ ಚಾರ್ಜ್‌ ಹಾಕುವಾಗ ಯುವಕ ಸಾವು: ಮತ್ತೊಂದೆಡೆ ಪಕ್ಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶ್ರೀಪೇವಾಡಿ ಗ್ರಾಮದಲ್ಲಿ ಮೊಬೈಲ್ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವನ್ನಪ್ಪಿದ ದುರ್ಘಟನೆ ಕಳೆದ ತಿಂಗಳು (ಜು.28)ರಂದು ನಡೆದಿತ್ತು. ಇದಾದ ಒಂದೇ ವಾರದಲ್ಲಿ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಗು ಸಾವನ್ನಪ್ಪಿದೆ. ಇನ್ನು ಬೆಳಗಾವಿಯಲ್ಲಿ ಮೊಬೈಲ್‌ ಚಾರ್ಜರ್‌ ಹಾಕುವಾಗ ಮೃತಪಟ್ಟ ಯುವಕ ಆಕಾಶ ಶಿವಸಾದ ಸಂಕಪಾಳ (27) ಆಗಿದ್ದನು. ಮನೆಯಲ್ಲಿ ಮೊಬೈಲ್ ಚಾರ್ಜಿಂಗ್ ಹಾಕಲು ಹೋದಾಗ ದುರ್ಘಟನೆ ನಡೆದಿತ್ತು. ಸ್ಥಳಕ್ಕೆ ಭೇಟಿ ನೀಡಿದ ನಿಪ್ಪಾಣಿ ಬಸವೇಶ್ವರ ಚೌಕ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ನಂತರ ಮನೆಯವರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. 

ಮಕ್ಕಳಿರುವ ಮನೆಯಲ್ಲಿ ಎಚ್ಚರಿಕೆ ಅಗತ್ಯ: ಇನ್ನು ಮೊಬೈಲ್‌ ಚಾರ್ಜರ್‌ನಿಂದ ವಿದ್ಯುತ್‌ ಶಾಕ್‌ ತಗುಲುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ಆದರೆ, ಚಾರ್ಜರ್‌ ಪಿನ್‌ನ ಒಳಭಾಗದಲ್ಲಿ ಸಣ್ಣದಾದ ತಂತಿಗಳು ಇದ್ದು, ಅವುಗಳಲ್ಲಿ ವಿದ್ಯುತ್‌ ಪ್ರವಹಿಸುತ್ತದೆ. ಇನ್ನು ನಾವು ಒದ್ದೆ ಕೈಯಲ್ಲಿ ಮುಟ್ಟಿದಾಗ ನಮಗೂ ಶಾಕ್‌ ಹೊಡೆದ ಅನುಣವ ಆಗಿರುತ್ತದೆ. ಅದೇ ರೀತಿ ಮೊಬೈಲ್‌ ಚಾರ್ಜರ್‌ ಹಾಕಿದ ನಂತರ ಅದನ್ನು ತೆಗೆದುಕೊಂಡು ಸ್ವಿಚ್‌ ಆಫ್‌ ಮಾಡಬೇಕು. ಇಲ್ಲವಾದಲ್ಲಿ ಮಕ್ಕಳಿಗೆ ಅಪಾಯ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುವುದಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ದುರ್ಘಟನೆ ಜೀವಂತ ಉದಾಹರಣೆ ಆಗಿದೆ. 

ಪತ್ನಿ ಹಾಗೂ ಪೋಷಕರ ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಆತ್ಮಹತ್ಯೆಗೆ ಶರಣು!

ಮಳೆಗಾಲದಲ್ಲಿ ವಿದ್ಯುತ್‌ ಉಪಕರಣ ಬಳಕೆಗೆ ಇರಲಿ ಎಚ್ಚರ: ಇನ್ನು ಮಳೆಗಾಲದಲ್ಲಿ ಗೋಡೆಗಳು ಒದ್ದೆಯಾಗಿ ವಿದ್ಯುತ್‌ ಪ್ರವಾಹದ ಪ್ರಮಾಣವೂ ಹೆಚ್ಚಾಗಿರುತ್ತದೆ. ಆದ್ದರಿಂದ ವಿದ್ಯುತ್‌ ಉಪಕರಣ ಮತ್ತು ಸಾಧನಗಳನ್ನು ಬಳಸುವಾಗ ಎಚ್ಚರವಹಿಸಬೇಕು. ಅದರಲ್ಲಿಯೂ ಮಕ್ಕಳನ್ನು ಯಾವುದೇ ಕಾರಣಕ್ಕೂ ವಿದ್ಯುತ್‌ ಸ್ವಿಚ್‌ ಇರುವ ಮತ್ತು ಸಾಕೆಟ್‌ಗಳು ಇರುವ ಜಾಗಕ್ಕೆ ಬಿಡಬಾರದು. ಇನ್ನು ಸ್ನಾನದ ಕೋಣೆ ಹಾಗೂ ಶೌಚಗೃಹ ಹಾಗೂ ವಾಶ್‌ ಬೇಸಿನ್‌ನಲ್ಲಿ ಬಳಸುವಸ್ವಿಚ್‌ಗಳನ್ನು ಬಳಸುವ ವೇಳೆ ಶಾಕ್‌ ಹೊಡೆದ ಅನುಭವ ಉಂಟಾಗುತ್ತದೆ. ಆದ್ದರಿಂದ, ಸ್ವಲ್ಪ ಎಚ್ಚರಿಕೆವಹಿಸಿ ಒದ್ದೆ ಕೈಯಿಂದ ವಿದ್ಯತ್‌ ಉಪಕರಣ ಮುಟ್ಟುವುದನ್ನು ಮಾಡಬೇಡಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!