ಕರ್ನಾಟಕ ರಾಜ್ಯ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಬರೋಬ್ಬರಿ 187.33 ಕೋಟಿ ನಿಗಮದ ಅಕೌಂಟ್ ಗೆ ಹಣ ವರ್ಗಾವಣೆಯಾಗಿದೆ ಎಂದು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಕಿರಣ್ ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಮೇ.29): ಕರ್ನಾಟಕ ರಾಜ್ಯ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಬರೋಬ್ಬರಿ 187.33 ಕೋಟಿ ನಿಗಮದ ಅಕೌಂಟ್ ಗೆ ಹಣ ವರ್ಗಾವಣೆಯಾಗಿದೆ ಎಂದು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಮಹರ್ಷಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ರಿಂದ ದೂರು ನೀಡಿದ್ದು ಈ ಸಂಬಂಧ 6 ಜನ ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್ ಐಆರ್ ದಾಖಲಾಗಿದೆ. ವಸಂತ ನಗರದಲ್ಲಿ ನಿಗಮದ ಹೆಸರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಖಾತೆ ಇತ್ತು, ಕಳೆದ ಫೆಬ್ರವರಿ 19 ರ 2024 ರಂದು ಖಾತೆಯನ್ನು ಎಂಜಿ ರೋಡ್ ಬ್ರಾಂಚ್ ಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ.
undefined
ಖಾತೆ ಸಂಖ್ಯೆ 520141001659653 ಅಕೌಂಟ್ ನಿಗಮದ ಪರವಾಗಿ ನಿರ್ವಹಣೆ ಮಾಡಲಾಗುತ್ತಿರುತ್ತೆ. ಇದೇ ಫೆಬ್ರವರಿ 26 ರಂದು ಬ್ಯಾಂಕಿನವರು ನಿಗಮದ ಎಂಡಿ ಹಾಗೂ ಲೆಕ್ಕಾಧಿಕಾರಿಗಳು ಸಹಿ ಪಡೆದುಕೊಂಡಿರುತ್ತಾರೆ. ತದ ನಂತರ ಸದರಿ ಖಾತೆಯಿಂದ ಮಾರ್ಚ್ ರಂದು 25 ಕೋಟಿ , ಮಾರ್ಚ್ 6 ರಂದು 25 ಕೋಟಿ, ಮಾರ್ಚ್ 21 ರಂದು 44 ಕೋಟಿ, ಮೇ 21 ರಂದು 50. ಕೋಟಿ ಹಣ ಹಾಗೂ 22 ರಂದು 33 ಕೋಟಿ ಹಣ ಅಕ್ರಮ ವರ್ಗಾವಣೆಯಾಗಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಿ ದೂರು ನೀಡಲಾಗಿದೆ. ಒಟ್ಟು ನಿಗಮದ ಬ್ಯಾಂಕ್ ಅಕೌಂಟ್ ನಿಂದ 187.33 ಕೋಟಿ ಹಣ ವರ್ಗಾವಣೆಯಾಗಿತ್ತು.
ನಿಗಮದ ಅಕೌಂಟ್ ನಿಂದ ಬೇರೆ ಬೇರೆ ಅಕೌಂಟ್ ಗೆ ಹಾಗೂ ಸ್ಟೇಟ್ ಹುಜುರ್ ಟ್ರೇಜರಿ ಖಾಜನೆ -02 ಯಿಂದ ನಿಗಮದ ಖಾತೆಗೆ ಹಣ ಸಂದಾಯವಾಗಿದ್ದು, ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದರು. ಸದರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ನಿಗಮದಿಂದ ಯಾವುದೇ ಪತ್ರ ವ್ಯವಹಾರ ನಡೆಸಿರುವುದಿಲ್ಲ.ಆದರೂ ನಕಲಿ ದಾಖಲೆ ಸೃಷ್ಠಿಸಿ ಕೋಟ್ಯಾಂತರ ಅಕ್ರಮ ಹಣ ವರ್ಗಾವಣೆ ಮಾಡಿದ ಗಂಭೀರ ಆರೋಪವಿದೆ. ಬರೋಬ್ಬರಿ 94.73.08.500 ಹಣ ಅಕ್ರಮ ಹಣ ವರ್ಗಾವಣೆಯಾಗಿದ್ದು,ಸದ್ಯ ಯೂನಿಯನ್ ಬ್ಯಾಂಕ್ ನ ಎಂಡಿ ಹಾಗೂ ಸಿಇಓ ಮನಿಮೇಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್ , ರಾಮಸುಬ್ರಮಣ್ಯಂ, ಸಂಜಯ ರುದ್ರ ,ಪಂಕಜ್ ದ್ವಿವೇದಿ ,ಸುಶಿಚಿತ ರಾವ್ ಸೇರಿ ಇತರ ಬ್ಯಾಂಕ್ ಆಡಳಿತ ಮಂದಿ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.
ಕರ್ಕಶ ಸೌಂಡ್ ಮಾಡುವ ಪೋಕರಿಗಳಿಗೆ ಬಿತ್ತು ಶಾಕ್: ಬೈಕ್ಗಳ ಸೈಲೆನ್ಸರ್ ನಾಶ ಮಾಡಿದ ಪೊಲೀಸರು!
ಬ್ಯಾಂಕ್ ಆಡಳಿತ ಮಂಡಳಿ ಬೇಜಾವಾಬ್ದಾರಿಯಿಂದ ಅಕ್ರಮ ಹಣ ವರ್ಗಾವಣೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಲೆಕ್ಕ ಮಾಡುವಾಗಲೇ ನಡೆದಿರುವ ಕೃತ್ಯ ನಡೆದಿರುವ ಸಾಧ್ಯತೆಗಳಿವೆ ಎನ್ನಲಾಕ್ತಿದ್ದು,ಸದ್ಯ ಹೈಗ್ರೌಂಡ್ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಈ ಅಕ್ರಮದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು, ಸಚಿವರುಗಳು ಭಾಗಿಯಾಗಿರುವ ಆರೋಪ ಇದೆ. ಪ್ರಕರಣ ಮತ್ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದುನೋಡಬೇಕಿದೆ.