₹25 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ 'ಮುಡಾ' ಆಯುಕ್ತ ಮನ್ಸೂರ್ ಅಲಿ!

By Ravi Janekal  |  First Published Mar 23, 2024, 10:11 PM IST

ನಗರದ ಉದ್ಯಮಿಯೊಬ್ಬರಿಗೆ ಟಿಡಿಆರ್ ಪ್ರಮಾಣಪತ್ರ ನೀಡಲು ₹25 ಲಕ್ಷ ಲಂಚಕ್ಕೆ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ಮನ್ಸೂರ್ ಅಲಿ  ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


ಮಂಗಳೂರು (ಮಾ.23) ನಗರದ ಉದ್ಯಮಿಯೊಬ್ಬರಿಗೆ ಟಿಡಿಆರ್ ಪ್ರಮಾಣಪತ್ರ ನೀಡಲು ₹25 ಲಕ್ಷ ಲಂಚಕ್ಕೆ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ಮನ್ಸೂರ್ ಅಲಿ  ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇಂದು ಸಾಗರ್ ರಿಯಾಲಿಟಿ ಪ್ರಮೋಟರ್ಸ್‌ನ ಮಾಲೀಕ, ಉದ್ಯಮಿ ಗಿರಿಧರ್ ಶೆಟ್ಟಿಯಿಂದ ದಲ್ಲಾಳಿ ಮೂಲಕ 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿರುವ ಕಮಿಷನರ್. ಈ ವೇಳೆ ದಲ್ಲಾಳಿ ಸಲೀಂನನ್ನೂ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು. ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ದಾಳಿ.

Latest Videos

undefined

ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಆರ್‌ ಪುರಂ ಠಾಣೆ ಇನ್ಸ್‌ಪೆಕ್ಟರ್‌, ಪಿಎಸ್‌ಐ!
 
ಇತ್ತೀಚೆಗೆ ಕುಡುಪು ಗ್ರಾಮದಲ್ಲಿ ಜಾಗ ಖರೀದಿ ಮಾಡಿದ್ದ ಉದ್ಯಮಿ ಗಿರಿಧರ್ ಶೆಟ್ಟಿ. ಜಮೀನಿಗೆ ಟಿಡಿಆರ್ ನೀಡಲು ಫೈಲ್ ಮುಡಾ ಇಲಾಖೆಗೆ ವರ್ಗಾವಣೆ ಯಾಗಿತ್ತು. ಆದರೆ ಮುಡಾ ಆಯುಕ್ತ ಮನ್ಸೂರ್ ಅಲಿ ಲಂಚಕ್ಕಾಗಿ ಫೈಲ್ ಪೆಂಡಿಂಗ್ ಮಾಡಿದ್ದ. ಅಲ್ಲದೆ ಗಿರಿಧರ್‌ ಶೆಟ್ಟಿ ಬಳಿ ನೇರವಾಗಿ 25 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಆಯುಕ್ತ. ಬ್ರೋಕರ್ ಸಲೀಂ ಮೂಲಕ ಲಂಚ ಸ್ವೀಕರಿಸಲು ಪ್ಲಾನ್ ಮಾಡಿದ್ದ ಕಮಿಷನರ್. ಇಂದು ಮಂಗಳಾ ಕ್ರೀಡಾಂಗಣದ ಬಳಿ ಉದ್ಯಮಿಯಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆಯುಕ್ತ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಕ್ಕಾಗಿ ಸಲೀಂ ಮತ್ತು ಅಲಿಯನ್ನು ಬಂಧಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಒಂದೇ ತಿಂಗಳಲ್ಲಿ 200 ಸ್ವತ್ತುಗಳಿಗೆ ಅಕ್ರಮವಾಗಿ ಎ ಖಾತಾ; ಲೋಕಾಯುಕ್ತರಿಗೆ ದೂರು ನೀಡಿದ ಎನ್‌ಆರ್ ರಮೇಶ್

click me!