Bengaluru: ಡ್ರಗ್ಸ್‌ ಸ್ಮಗ್ಲಿಂಗ್‌: ಔಷಧಿ ವ್ಯಾಪಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

By Govindaraj S  |  First Published Nov 14, 2022, 12:09 PM IST

ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾದಕ ವಸ್ತುವಿನ ಪರೀಕ್ಷೆ ಸಂಗ್ರಹ ಮಾಡಿದ ಕಾರಣ ಜಾಮೀನು ಪಡೆಯಲು ಅರ್ಹನಾಗುತ್ತಾನೆ ಎಂಬ ತಾಂತ್ರಿಕ ಅಂಶವನ್ನು ತಳ್ಳಿಹಾಕಿರುವ ಹೈಕೋರ್ಟ್‌, ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. 


ಬೆಂಗಳೂರು (ನ.14): ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾದಕ ವಸ್ತುವಿನ ಪರೀಕ್ಷೆ ಸಂಗ್ರಹ ಮಾಡಿದ ಕಾರಣ ಜಾಮೀನು ಪಡೆಯಲು ಅರ್ಹನಾಗುತ್ತಾನೆ ಎಂಬ ತಾಂತ್ರಿಕ ಅಂಶವನ್ನು ತಳ್ಳಿಹಾಕಿರುವ ಹೈಕೋರ್ಟ್‌, ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ತನಿಖಾಧಿಕಾರಿಗಳು ಜಪ್ತಿ ಮಾಡಿದ ಮಾದಕ ದ್ರವ್ಯದಲ್ಲಿ ಪರೀಕ್ಷೆಗಾಗಿ (ಸ್ಯಾಂಪಲ್‌ ಟೆಸ್ಟ್‌) 5 ಗ್ರಾಮ್‌ಗಿಂತ ಕಡಿಮೆ ಪ್ರಮಾಣದಷ್ಟು ಮಾದರಿ ಸಂಗ್ರಹಿಸುವಂತಿಲ್ಲ. ಕಡಿಮೆ ಪ್ರಮಾಣದ ಮಾದರಿಯ ಪರೀಕ್ಷೆಯಿಂದ ಹೊರಬರುವ ಫಲಿತಾಂಶ ಸಂಶಯಾಸ್ಪದವಾಗಿರಲಿದೆ. 

ಸೂಚಿಸಿದ ರೀತಿಯಲ್ಲಿ ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡದಿದ್ದಲ್ಲಿ ಆರೋಪಿ ಜಾಮೀನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಮಾದಕ ವಸ್ತು ಸರಬರಾಜು ಪ್ರಕರಣದಲ್ಲಿ ಬಂಧನಕ್ಕೆ ಗುರಿಯಾಗಿದ್ದ ಕೇರಳದ ನಿವಾಸಿ ಉಮ್ಮರ್‌ ವಾದಿಸಿದ್ದನು. ಈ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್‌, ಪರೀಕ್ಷೆಗಾಗಿ 5 ಗ್ರಾಂ ಮಾದಕ ವಸ್ತು ಮಾದರಿ ಸಂಗ್ರಹಿಸುವುದು ಕಡ್ಡಾಯ. ಉಮ್ಮರ್‌ ಭಾಗಿಯಾಗಿರುವ ಈ ಪ್ರಕರಣದಲ್ಲಿ 4.2 ಗ್ರಾಂ ಮಾದರಿ ಸಂಗ್ರಹಿಸಲಾಗಿದೆ. ಆದರೆ, ಈ ಪ್ರಮಾಣದಿಂದ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಅಥವಾ ಸಂಗ್ರಹಿಸಿದ ಮಾದರಿ ಕಡಿಮೆ ಪ್ರಮಾಣದಲ್ಲಿದೆ ಎಂದು ರಾಸಾಯನಿಕ ಪರೀಕ್ಷಕರು ತಿಳಿಸಿಲ್ಲ. 

Tap to resize

Latest Videos

ಅತ್ತೆ ಮಾವನನ್ನು ನೋಡಿಕೊಳ್ಳುವ ವಿಚಾರಕ್ಕೆ ಗಲಾಟೆ, ಸೊಸೆ ಕಾಟಕ್ಕೆ ತಾಯಿ ಮಗ ಆತ್ಮಹತ್ಯೆ!

ಪರೀಕ್ಷೆ ನಡೆಸಲು ನಿರಾಕರಿಸಿಯೂ ಇಲ್ಲ. ಹಾಗಾಗಿ, ಈ ವಾದವನ್ನು ಪರಿಗಣಿಸಿ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ಅರ್ಜಿದಾರ ಪರ ವಕೀಲರು, ತಹ ಉಮ್ಮರ್‌ ಅಮಾಯಕನಾಗಿದ್ದಾನೆ. ವೈದ್ಯಕೀಯ ಸಾಮಗ್ರಿಗಳ ಪೂರೈಕೆದಾರನಾಗಿ ಉದ್ಯೋಗ ಮಾಡುತ್ತಿದ್ದು, ಆತ ರಫ್ತುದಾರನಲ್ಲ. ಎನ್‌ಡಿಪಿಎಸ್‌ ಕಾಯ್ದೆಯ ಸ್ಥಾಯಿ ಆದೇಶ (ಸ್ಟ್ಯಾಂಡರ್ಡ್‌ ಆರ್ಡರ್‌) ಪ್ರಕಾರ ಮಾದಕ ದ್ರವ್ಯ ಪರೀಕ್ಷೆಗೆ 5 ಗ್ರಾಂನಷ್ಟುಮಾದರಿ ಸಂಗ್ರಹಿಸಬೇಕು. ಪ್ರಕರಣದಲ್ಲಿ ಕೇವಲ 4.2 ಗ್ರಾಂ ಮಾದರಿ ಸಂಗ್ರಹಿಸಲಾಗಿದೆ. ಹಾಗಾಗಿ ಸೂಚಿಸಿದ ಸರಿಯಾದ ಕಾರ್ಯವಿಧಾನ ಅನುಸರಿಸದಿದ್ದಲ್ಲಿ ಆರೋಪಿ ಜಾಮೀನು ಪಡೆಯಲು ಅರ್ಹರಾಗಿರುತ್ತಾರೆ ಎಂದು ವಾದಿಸಿದ್ದರು.

ಈ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರ ಪೀಠ ಅರ್ಜಿದಾರ ಮೆಡಿಕಲ್‌ ಶಾಪ್‌ ಮಾಲಿಕ. ಅಲ್ಲಿ ಕೆಲಸ ಮಾಡುವ ಉದ್ಯೋಗಿಯ ಆಧಾರ್‌ ಕಾರ್ಡ್‌ ದುರ್ಬಳಕೆ ಮಾಡಿಕೊಂಡು, ನಕಲಿ ರೋಗಿಗಳ ಹೆಸರಿನಲ್ಲಿ ವಿಳಾಸ ಮತ್ತು ವೈದ್ಯರ ಚೀಟಿ ಸೃಷ್ಟಿಸಿ ಅಂಚೆ ಮೂಲಕ ವಿದೇಶಗಳಿಗೆ ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದಾನೆ. ಇದು ಗಂಭೀರ ವಿಚಾರವಾಗಿದ್ದು, ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಜಾಮೀನು ನಿರಾಕರಿಸಿದೆ.

Bengaluru: ಪತಿಗೆ ಮದ್ಯ ಕುಡಿಸಿ, ಕಬಾಬ್‌ ತಿನ್ನಿಸಿ ಕತ್ತು ಹಿಸುಕಿ ಹತ್ಯೆ!

ಸೌದಿ ಅರೇಬಿಯಾಗೆ ಡ್ರಗ್ಸ್‌ ರಫ್ತು!: ಕೇರಳದ ಮಲಪ್ಪುರಂನ ಅಜ್ಮಲ್‌ ನಾನತ್‌ ವಾಲಿಯತ್‌ ಅವರ ಹೆಸರಿನಲ್ಲಿ, ಸೌದಿ ಅರೇಬಿ ನಿವಾಸಿ ಜೈನಲ್‌ ಅಬಿದ ಮನ್‌್ನ ಪರಂಬನ್‌ ಅವರ ವಿಳಾಸಕ್ಕೆ ಕೊರಿಯರ್‌ ಮೂಲಕ ಎನ್‌ಡಿಪಿಎಸ್‌ ಕಾಯ್ದೆಯಡಿಯ ನಿಷೇಧಿತ ಪದಾರ್ಥವಾದ ಕ್ಲೋನಜೆಂಪಮ್‌ ಟ್ಯಾಬ್ಲೆಟನ್ನು ಅರ್ಜಿದಾರ ಸರಬರಾಜು ಮಾಡುತ್ತಿದ್ದ. ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅರ್ಜಿದಾರ ರವಾನಿಸುತ್ತಿದ್ದ 357 ಗ್ರಾಂ ನಷ್ಟಿದ್ದ ಕ್ಲೋನಜೆಂಪಮ್‌ ಟ್ಯಾಬ್ಲೆಟನ್ನು ಎನ್‌ಸಿಬಿ ಅಧಿಕಾರಿಗಳು ಜಪ್ತಿ ಮಾಡಿ 2022ರ ಆ.25ರಂದು ಬಂಧಿಸಿದ್ದರು. ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

click me!