ಫೇಸ್‌ಬುಕ್‌ನಲ್ಲಿ ಪರಿಚಯವಾದವಳಿಂದ ಮಹಿಳಿಗೆ 3.90 ಲಕ್ಷ ರು. ವಂಚನೆ

Published : Aug 29, 2020, 10:40 PM IST
ಫೇಸ್‌ಬುಕ್‌ನಲ್ಲಿ ಪರಿಚಯವಾದವಳಿಂದ ಮಹಿಳಿಗೆ 3.90 ಲಕ್ಷ ರು. ವಂಚನೆ

ಸಾರಾಂಶ

ಫೇಸ್‌ಬುಕ್‌ನಲ್ಲಿ ಪರಿಚಯವಾದವಳಿಂದ 3.90 ಲಕ್ಷ ರು. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.  ಫೇಸ್‌ಬುಕ್ ಒಳ್ಳೆದಕ್ಕೂ ಇದೆ. ಕೆಟ್ಟದಕ್ಕೂ ಇದೆ ಎನ್ನುವುದಕ್ಕೆ ಈ ಸ್ಟೋರಿಯೇ ಉದಾಹರಣೆಯಾಗಿದೆ.

 ಕಾರ್ಕಳ, (ಆ.29): ಇಲ್ಲಿನ ಅಜೆಕಾರು ಗ್ರಾಮದ ದೆಪ್ಪತ್ತೆಯ ನಿವಾಸಿ ಪೂರ್ಣಿಮಾ ಎಂಬವರು ಫೇಸ್ ಬುಕ್ ನಲ್ಲಿ ಪರಿಚಯವಾದ ಲೇಡಿಯೊಬ್ಬರಿಂದ 3.90 ಲಕ್ಷ ರು. ಕಳೆದುಕೊಂಡಿದ್ದಾರೆ.

 ಅವರಿಗೆ ಫೇಸ್ ಬುಕ್ ನಲ್ಲಿ ಡಾ. ಲಿವೀಸ್ ಎಂಬ ಮಹಿಳೆ ಆ.4ರಂದು ಪರಿಚಯವಾಗಿ, ಅವರ ಹುಟ್ಟುಹಬ್ಬಕ್ಕೆ ಬೆಲೆ ಬಾಳುವ ಉಡುಗೊರೆ ಕಳುಹಿಸುವುದಾಗಿ ಹೇಳಿ ನಂಬಿಸಿದ್ದರು. ಅದರಂತೆ ದೆಹಲಿಯ ಪಾರ್ಸೆಲ್ ಕಚೇರಿಯಿಂದ ವ್ಯಕ್ತಿಯೊಬ್ಬ ಕರೆಮಾಡಿ ಯು.ಕೆ.ಯಿಂದ ಬಾಳುವ ಪಾರ್ಸೆಲ್ ಬಂದಿದ್ದು ಅದನ್ನು ಕಳುಹಿಸಲು 35,000 ರು. ಕಟ್ಟಬೇಕೆಂದು ಹೇಳಿ, ಬ್ಯಾಂಕ್ ಖಾತೆ ವಿವರ ನೀಡಿದ, ಪೂರ್ಣಿಮಾ ಆ ಖಾತೆಗೆ ಆ ಹಣ ವರ್ಗಾಯಿಸಿದ್ದರು. 

ಎಟಿಎಂ ಕಳ್ಳರ ಸುಳಿವು ನೀಡಿದ ಗ್ಯಾಸ್‌ ಕಟರ್‌: 27 ಲಕ್ಷ ದೋಚಿದ್ದ ಸಹೋದರರು

ನಂತರ ಇನ್ನೊಬ್ಬರು ಕರೆ ಮಾಡಿ 95,000 ರು. ಕೇಳಿದ್ದರು. ಅದನ್ನು ಪೂರ್ಣಿಮಾ ಜಮೆ ಮಾಡಿದ್ದರು. ನಂತರ  ರಿಸರ್ವ ಬ್ಯಾಂಕಿನಿಂದ ಎಂದು ಕರೆ ಮಾಡಿ ಉಡುಗೊರೆಯ ಕ್ಲಿಯರೆನ್ಸ್ ಗೆ  2.60 ಲಕ್ಷ ರು. ಹಣ ಕಟ್ಟಬೇಕು ಎಂದು ಹೇಳಿದರು. ಅದನ್ನೂ ಪೂರ್ಣಿಮಾ ಜಮೆ ಮಾಡಿದ್ದರು. ಆದರೇ ಈಗ ಉಡುಗೊರೆಯೂ ಬಂದಿಲ್ಲ, ಅವರು ಜಮೆ ಮಾಡಿದ 3.90 ಲಕ್ಷ ರು. ಹಣವೂ ಸಿಗದೇ ಮೋಸ ಮಾಡಿದ್ದಾರೆ ಎಂದು ಉಡುಪಿ ಸೆನ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. 

 ಶುಕ್ರವಾರವೂ ಇಂತಹದ್ದೇ ಇನ್ನೊಂದು ಪ್ರಕರಣವೊಂದು ಸೆನ್ ಠಾಣೆಯಲ್ಲಿ ದಾಖಲಾಗಿದ್ದು, ಜಿಲ್ಲೆಯಲ್ಲಿ ಇನ್ನೂ ಇಂತಹ ಸೈಬರ್ ಮೋಸ  ಪ್ರಕರಣಗಳು ನಡೆದಿರುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ದಂಪತಿ, ಪಾಲಿಕೆ ಅಧಿಕಾರಿಗಳ ಕಿರುಕುಳಕ್ಕೆ ಟೆಕ್ಕಿ ದುರಂತ ಸಾವು, ಡೆಟ್‌ನೋಟ್‌ನಲ್ಲಿ ಶಾಕಿಂಗ್ ಮಾಹಿತಿ!