* ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಹಿರಿಯ ಪತ್ರಕರ್ತ ಸಾವು
* ಪಲ್ಟಿ ಹೊಡೆದ ಕೆಮಿಕಲ್ ಆಯಿಲ್ ತುಂಬಿದ್ದ ಲಾರಿ
* ಲಾರಿ ಅಡಿಗೆ ಸಿಲುಕಿ ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ ಸಾವು
ಬೆಂಗಳೂರು, (ಜ.23): ನಗರದ ಟೌನ್ ಹಾಲ್ ಮುಂದೆ ಲಾರಿಯೊಂದು (Lorry) ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಪಲ್ಟಿ ಹೊಡೆದಿದೆ. ಪರಿಣಾಮ ಲಾರಿ ಪಕ್ಕದಲ್ಲಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.
ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ(48) ಮೃತ ದುರ್ದೈವಿ. ಗಂಗಾಧರ ಮೂರ್ತಿ ಬೈಕ್ನಲ್ಲಿ (Bike) ಚಾಮರಾಜಪೇಟೆಯಲ್ಲಿರುವ ವಿಜಯವಾಣಿ ಕಚೇರಿಗೆ ಬರುತ್ತಿದ್ದಾಗ, ಟೌನ್ ಹಾಲ್ ಬಳಿ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಡಿಕ್ಕಿ ಹೊಡೆದು ಬಿದ್ದಿದ್ದು, ಅಡಿಯಲ್ಲಿ ಸಿಲುಕಿದ ಹಿರಿಯ ಪತ್ರಕರ್ತ (Senior journalist) ಗಂಗಾಧರ ಮೂರ್ತಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೆ ಕೊನೆಯುಸಿರೆಳೆದಿದ್ದಾರೆ.
undefined
Accident ಯುವತಿಯ ದುರಂತ ಸಾವು, ಜನ್ಮದಿನವೇ ಸಾವಿನ ದಿನವಾಯ್ತು
ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರಿನ ಟೌನ್ಹಾಲ್ ಮುಂದೆ ಲಾರಿ ಪಲ್ಟಿಯಾದಾಗ ಲಾರಿ ಕೆಳಗೆ ಸಿಲುಕಿದ್ದ ಸವಾರನನ್ನು ಸ್ಥಳೀಯರು ಹೊರತೆಗೆದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಗಂಗಾಧರ್ ಮೂರ್ತಿಯನ್ನು ದಾಖಲು ಮಾಡಲಾಗಿತ್ತು. ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಚಾಲಕನಿಗಾಗಿ ಹಲಸೂರು ಗೇಟ್ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಭಾನುವಾರ ರಸ್ತೆ ಖಾಲಿ ಇದ್ದ ಕಾರಣ, ಕ್ಯಾಂಟರ್ ಚಾಲಕ ವೇಗವಾಗಿ ಜೆ.ಸಿ. ರಸ್ತೆಯಿಂದ ಬಂದಿದ್ದಾನೆ. ವೇಗವಾಗಿ ಬಂದು ಸಡನ್ ಆಗಿ ಮಾರ್ಕೆಟ್ ಕಡೆ ತಿರವು ಪಡೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ, ಲಾರಿಯಲ್ಲಿದ್ದ ಸುಮಾರು 300 ಲೀಟರ್ ಅಷ್ಟು ಆಯಿಲ್ ಡ್ರಮ್‍ಗಳ ತೂಕ ಒಂದೇ ಕಡೆ ವಾಲಿದೆ. ಇದರಿಂದ ಕಂಟ್ರೋಲ್‍ಗೆ ಸಿಗದೇ ಲಾರಿ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.
ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರೋ ಲಾರಿ ಪಲ್ಟಿಯಾಗುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅತಿಯಾದ ವೇಗ, ಅಜಾಗರೂಕತೆ ವಾಹನ ಚಾಲನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನಾಪತ್ತೆ ಆಗಿರೋ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪಲ್ಟಿಯಾಗಿದ ಸ್ಥಳದಲ್ಲಿ ಕ್ಯಾಂಟರ್ ನಲ್ಲಿದ್ದ ಆಯಿಲ್ ರಸ್ತೆಗೆ ಚೆಲ್ಲಿತ್ತು. ಕೂಡಲೇ ಪೊಲೀಸರು ಸ್ಥಳೀಯರ ಸಹಾಯದಿಂದ ಆಯಿಲ್ ಡಬ್ಬಗಳನ್ನ ಬೇರ್ಪಡಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಲಾರಿಯನ್ನ ಶಿಫ್ಟ್ ಮಾಡಲಾಯ್ತು.
ಬಸ್ ಡಿಕ್ಕಿ, ಇಬ್ಬರು ಸಾವು
ತುಮಕೂರಿನ ಕಾಶಾಪುರ ರಸ್ತೆಯ ತಿರುವಿನಲ್ಲಿ ಬೇವಿನ ಮರಕ್ಕೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಬಸ್ ನಿರ್ವಾಹಕ ಸೇರಿದಂತೆ ಸುಮಾರು 10ಕ್ಕೂ ಅಧಿಕ ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಭಿಕ್ಷುಕ ಮತ್ತು ರೈತ ಗೋಪಾಲನಾಯ್ಕ ಎಂಬುವರೇ ಸಾವನ್ನಪ್ಪಿರುವ ದುರ್ದೈವಿಗಳು. ಭಿಕ್ಷುಕನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.ಗೌರಿಬಿದನೂರು ಮಾರ್ಗವಾಗಿ ತಿರುಪತಿಯಿಂದ ಸಿರಾ ಕಡೆಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದಾಗಿ ಅತಿ ವೇಗವಾಗಿ ಚಲಿಸಿದ್ದು, ಕೊರಟಗೆರೆ-ಗೌರಿಬಿದನೂರು ರಸ್ತೆಯ ಕಾಶಾಪುರ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಭಿಕ್ಷುಕನಿಗೆ ಮೊದಲು ಡಿಕ್ಕಿ ಹೊಡೆದಿದೆ.