ಕೊಲೆ ಆರೋಪದಲ್ಲಿ ನಟ ದರ್ಶನ್ ಅರೆಸ್ಟ್ ಬೆನ್ನಲ್ಲೇ ಇದೀಗ ಎರಡನೇ ಪತ್ನಿ ಪವಿತ್ರ ಗೌಡ ಅವರನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜೂ.11): ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಮಾಡಿರುವ ಆರೋಪದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಸೇರಿ 10 ಕ್ಕೂ ಹೆಚ್ಚು ಮಂದಿಯ ಬಂಧನವಾಗಿದೆ. ಇದೀಗ ಎರಡನೇ ಪತ್ನಿ ಪವಿತ್ರ ಗೌಡ ಅವರನ್ನೂ ವಶಕ್ಕೆ ಪಡೆದ ಪೊಲೀಸರು ಬಂಧಿಸಿದ್ದಾರೆ. ಕೊಲೆಯಲ್ಲಿ ಒಳಸಂಚು ಹಿನ್ನೆಲೆಯಲ್ಲಿ ಆರ್ ಆರ್ ನಗರದ ಮನೆಯಿಂದ ಕರೆ ತಂದು ಬಂಧಿಸಲಾಗಿದೆ. ಅನ್ನಪೋರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದ್ದು, ಸುತ್ತ ಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಎರಡನೇ ಪತ್ನಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದನಂತೆ. ಕೆಟ್ಟ ಫೋಟೊ ಕಳಿಸುತ್ತಿದ್ದನಂತೆ ಹೀಗಾಗಿ ರೇಣುಕಾಸ್ವಾಮಿಯನ್ನ ಒಂದು ವಾರದಿಂದ ಟ್ರಾಕ್ ಮಾಡಿ ಬೆಂಗಳೂರಿಗೆ ಕರೆತಂದು ದರ್ಶನ್ ಆಪ್ತ ವಿನಯ್ ಕಾರ್ ಶೆಡ್ ಒಂದರಲ್ಲಿ ಇಟ್ಟು ಹಲ್ಲೆ ಮಾಡಿದ್ದರು. ಮರ್ಮಾಂಗಕ್ಕೆ ಬಲವಾಗಿ ಒದ್ದ ಕಾರಣಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದ. ಬಳಿಕ ಆತನ ಮೃತ ದೇಹವನ್ನು ಸುಮನಹಳ್ಳಿ ಬ್ರಿಡ್ಜ್ ಬಳಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಮೀಪ ಬಿಸಾಕಿ ಹೋಗಿದ್ದರು.
undefined
ನಟ ದರ್ಶನ್ ಕೊಲೆ ಆರೋಪದಲ್ಲಿ ಗೆಳತಿ ಪವಿತ್ರಾ ಗೌಡ ಹೆಸರು!
ರೇಣುಕಾಸ್ವಾಮಿಯನ್ನ ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಬಳಿಕ ಆರ್ ಆರ್ ನಗರದಲ್ಲಿರುವ ದರ್ಶನ್ ಬಲಗೈ ಬಂಟ ವಿನಯ್ ಗೆ ಸೇರಿದ ವಾಹನ ಸೀಜರ್ ಮಾಡಿ ಇಡುವ ಶೆಡ್ ನಲ್ಲಿ ಇಟ್ಟು ರೇಣುಕಾಸ್ವಾಮಿಯನ್ನ ಹೊಡೆದು. ಹಲ್ಲೆ ಮಾಡಿದ್ದಾರೆ. ರೇಣುಕಾಸ್ವಾಮಿಯ ಮರ್ಮಾಂಗವನ್ನು ಒದ್ದಿದ್ದಕ್ಕೆ ಗಂಭೀರ ನೋವಿನಿಂದ ನರಳಿದ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದ.
ಅದಾದ ನಂತರ ಶನಿವಾರ ನಡುರಾತ್ರಿ ಸುಮನಹಳ್ಳಿ ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಎಸೆದು ಹೋಗಲಾಗಿದೆ. ದರ್ಶನ್ ರೇಣುಕಾಸ್ವಾಮಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ & ದರ್ಶನ್ ಅರೆಸ್ಟ್ ; ಏನಿದು ಪ್ರಕರಣ? ಪೊಲೀಸ್ ಆಯುಕ್ತರು ಹೇಳಿದ್ದೇನು?
ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ಸ್ಪಷ್ಟನೆ ಸಿಗುತ್ತಿದ್ದಂತೆ ಪೊಲೀಸರು ಮೈಸೂರಿಗೆ ತೆರಳಿ ಅಲ್ಲಿ ಅವರನ್ನು ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆತಂದಿದ್ದರು. ಮೈಸೂರಿನಲ್ಲಿ ನಿನ್ನೆಯ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿದ್ದ ದರ್ಶನ್. ಕಲೆಕ್ಷನ್ ವಿಚಾರಕ್ಜೆ ಬೇಸತ್ತು ಶೂಟಿಂಗ್ ಸ್ಥಗಿತಗೊಳಿಸಿದ್ದರು. ಕೊಲೆ ಕೇಸ್ ನಲ್ಲಿ ಪಾತ್ರದ ಬಗ್ಗೆ ದರ್ಶನ್ ಕಂಗಲಾಗಿದ್ದರು ಎಂದು ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಇಬ್ಬರು ಬಾಡಿಗಾರ್ಡ್‌ಗಳನ್ನು ಕೂಡ ಬಂಧಿಸಲಾಗಿದೆ.