Ramanagara Crime: ಮಾರಣ್ಣದೊಡ್ಡಿ ರಸ್ತೆಬದಿಯಲ್ಲಿ ಕನಕಪುರದ ಮಹಿಳೆ ಸಾವು: ಕೊಲೆ ಶಂಕೆ

By Sathish Kumar KH  |  First Published Dec 26, 2022, 12:20 PM IST

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾರಣ್ಣದೊಡ್ಡಿಯ ರಸ್ತೆ ಬದಿಯಲ್ಲಿ ಮಧ್ಯವಯಸ್ಕ ‌ಮಹಿಳೆಯ ಅನುಮಾನಸ್ಪದ ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ. 


ರಾಮನಗರ (ಡಿ.26): ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾರಣ್ಣದೊಡ್ಡಿಯ ರಸ್ತೆ ಬದಿಯಲ್ಲಿ ಮಧ್ಯವಯಸ್ಕ ‌ಮಹಿಳೆಯ ಅನುಮಾನಸ್ಪದ ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ. 

ಬೆಂಗಳೂರಿನ ನೆರೆಯ ಜಿಲ್ಲೆಯಾಗಿರುವ ರಾಮನಗರ ಜಿಲ್ಲೆಯಲ್ಲಿಯೂ ಅಪರಾಧ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇನ್ನು ಮಾರಣ್ಣನದೊಡ್ಡಿಯ ರಸ್ತೆಯ ಬದಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇನ್ನು ಮೃತ ದೇಹವನ್ನು ಪರಿಶೀಲನೆ ಮಾಡಲಾಗಿದ್ದು, ಸಾವನ್ನಪ್ಪಿದ ಮಹಿಳೆಯನ್ನು ಶೃತಿ(32) ಎಂದು ಗುರುತಿಸಲಾಗಿದೆ. ಇನ್ನು ಮೃತ ಮಹಿಳೆ ಶೃತಿ ಕನಕಪುರ ಪಟ್ಟಣದ ಕುರುಪೇಟೆ ಸೊಲ್ಲಾಪುರದಮ್ಮ ಬೀದಿ ನಿವಾಸಿ ಆಗಿದ್ದರು ಎಂದು ತಿಳಿದುಬಂದಿದೆ.

Tap to resize

Latest Videos

ಮರಣೋತ್ತರ ಪರೀಕ್ಷೆಗೆ ಶವ ರವಾನೆ:  ಮೃತದೇಹ ಪತ್ತೆಯಾದ ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ರಸ್ತೆ ಬದಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವನ್ನಪ್ಪಿರುವುದನ್ನು ಕಂಡು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ದೇಹವನ್ನು ಇಲ್ಲಿ ತಂದು ಎಸೆದು ಹೋಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಲ್ಲಿ ಪರೀಕ್ಷೆ ಮಾಡಿದ ನಂತರ ಇದು ಕೊಲೆಯೋ ಅಥವಾ ಸಹಜ ಸಾವೋ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಕೊಲೆಯಾಗಿದ್ದರೆ ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದೂ ಪೊಲೀಸರ ತನಿಖೆಯಿಂದ ಬಯಲಿಗೆ ಬರಲಿದೆ. 

Ramanagara: ಚನ್ನಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ: ಸ್ಥಳದಲ್ಲೇ 3 ಜನರ ಸಾವು

ಬೆಂಕಿಗೆ ಆಹುತತಿಯಾಗಿದ್ದ ಮನೆ: ಕಳೆದ ಎರಡು ದಿನಗಳ ಹಿಂದೆ ರಾಮನಗರ ತಾಲೂಕಿನ ಕಗ್ಗಲಹಳ್ಳಿಯಲ್ಲಿ ಬೆಂಕಿ ಅವಘಡ‌ ಸಂಭವಿಸಿತ್ತು. ಬೆಂಕಿಯಿಂದಾಗಿ ಕೃಷ್ಣಮೂರ್ತಿ ಎಂಬವವರ ಮನೆ ಸುಟ್ಟು ಬೂದಿಯಾಗಿತ್ತು. ನೀರು ಕಾಯಿಸಲು ಒಲೆ ಹಚ್ಚಿ ಕುಟುಂಬ ಸದಸ್ಯರೆಲ್ಲರೂ ಜಮೀನಿಗೆ ಕೆಲಸಕ್ಕಾಗಿ ತೆರಳಿದ್ದರು. ಈ ಬೆಂಕಿ ವ್ಯಾಪಿಸಿ ಮನೆಯನ್ನೇ ಆವರಿಸಿಕೊಂಡಿತ್ತು. ಆದರೆ, ಇದು ದೊಡ್ಡ ಪ್ರಮಾಣದಲ್ಲಿ ಹರಡಿಕೊಂಡು ಮನೆಯನ್ನು ಸುಟ್ಟು ಕರಕಲಾಗುವಂತೆ ಮಾಡಿತ್ತು. ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಯಶಸ್ವಿ ಆಗಿರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಮನೆಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲು ಆಗಿದ್ದವು.

click me!