ಅರ್ಜುನನ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ವಿಕೃತಿ ಮೆರೆದ ಇಮ್ರಾನ್ ಮತ್ತು ಮತೀನ್!

By Sathish Kumar KH  |  First Published May 11, 2024, 3:18 PM IST

ಕಲಬುರಗಿಯಲ್ಲಿ ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿ ಅರ್ಜುನ್ ಎನ್ನುವವರಿಂದ ಹಣಕ್ಕೆ ಬೇಡಿಕೆ ಇಟ್ಟ ಮತೀನ್ ಮತ್ತು ಇಮ್ರಾನ್ ಆತನ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ವಿಕೃತಿ ಮೆರೆದಿದ್ದಾರೆ.


ಕಲಬುರಗಿ (ಮೇ 11): ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಎಂಬುವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಮ್ರಾನ್ ಮತ್ತು ಮಹಮ್ಮದ್ ಮತೀನ್ ಎನ್ನುವವರು ಹಣ ಕೊಡದ ವ್ಯಾಪಾರಿಯನ್ನು ಕಿಡ್ನಾಪ್ ಮಾಡಿ ಆತನ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ವಿಕೃತಿ ಮೆರೆದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಹೌದು, ದುಡಿದು ತಿನ್ನದೇ ಶೋಕಿ ಜೀವನ ಮಾಡುವುದಕ್ಕಾಗಿ ಕಷ್ಟಪಟ್ಟು ದುಡಿಯುವವರಿಂದ ಹಣ ವಸೂಲಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಿನಿಮೀಯ ರೀತಿಯಲ್ಲಿ ಹಪ್ತಾ ವಸೂಲಿ ಮಾಡುತ್ತಿದ್ದ ಪುಂಡರಾದ ಇಮ್ರಾನ್ ಪಟೇಲ್, ಮಹಮ್ಮದ್ ಮತೀನ್ ಸೇರಿ ಹಲವರ ಗುಂಪಿನ ಸದಸ್ಯರು, ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಕಲಬುರಗಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದನು. ಈ ಗುಂಪಿನಲ್ಲಿ ರಮೇಶ್ ಎನ್ನುವ ವ್ಯಕ್ತಿಯಿಂದ ಕಾರು ಬೇಕು ಎಂದು ಕರೆ ಮಾಡಿಸಿ, ಟೆಸ್ಟ್‌ ಡ್ರೈವ್ ಬೇಕೆಂದು ಅರ್ಜುನನ್ನು ಕಲಬುರಗಿಗೆ ಕರೆಸಿಕೊಂಡಿದ್ದಾರೆ. ಇಬ್ಬರು ಸ್ನೇಹಿತರೊಂದಿಗೆ ಕಾರು ಸಮೇತ ರಮೇಶನ ಬಳಿ ಹೋದ ಅರ್ಜುನ್ ಮತ್ತು ಸಹಚರರಿಗೆ ಹಣ ಕೊಡುವವರು ಹಾಗರಗಾ ಕ್ರಾಸ್ ಬಳಿಯ ಮನೆಯಲ್ಲಿದ್ದಾರೆ ಎಂದು ಅಲ್ಲಿಕೆ ಕರೆದೊಯ್ದಿದ್ದಾರೆ.

Latest Videos

undefined

ಹಾಸನ ಲೈಂಗಿಕ ದೌರ್ಜನ್ಯ ಕೇಸ್‌ನಡಿ ವಕೀಲ ದೇವರಾಜೇಗೌಡ ಬಂಧನ; ವಶಕ್ಕೆ ಪಡೆಯುತ್ತಾ ಎಸ್‌ಐಟಿ?

ಕಲಬುರಗಿಯ ಹಾಗರಗಾ ಕ್ರಾಸ್ ಬಳಿಯ ಮನೆಯಲ್ಲಿದ್ದ ಮೊಹಮ್ಮದ್ ಇಮ್ರಾನ್, ಮೊಹಮ್ಮದ್, ಮತೀನ್ ಹಾಗೂ ರಮೇಶ್ ಸೇರಿ ಕಾರು ಮಾರಾಟಕ್ಕೆ ಬಂದಿದ್ದ ಮೂವರನ್ನು ಕೂಡಿ ಹಾಕಿ, ಅವರ ಬಳಿಯಿದ್ದ ಎಲ್ಲ ಹಣವನ್ನು ಕಿತ್ತುಕೊಂಡಿದ್ದಾರೆ. ಜೊತೆಗೆ, ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೂ ಕಿತ್ತುಕೊಂಡಿದ್ದಾರೆ. ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟ ದುಷ್ಕರ್ಮಿಗಳು ಅರ್ಜುನ್‌ನ ಬಟ್ಟೆ ಬಿಚ್ಚಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.

ಮುಂದುವರೆದು ಅರ್ಜುನ್ ಸೇರಿ ಮೂವರ ಬಟ್ಟೆಗಳನ್ನು ಬಿಚ್ಚಿ ಮಮಾಂಗಕ್ಕೆ ಕರೆಂಟ್ ವೈರ್‌ನಿಂದ ಮುಟ್ಟಿಸಿ ಶಾಕ್ ಕೊಟ್ಟು ವಿಕೃತಿ ಮೆರೆದಿದ್ದಾರೆ. ಜೊತೆಗೆ, ಕರೆಂಟ್ ಶಾಕ್ ಬಳಿಕ ದೊಣ್ಣೆಯಿಮದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಅದನ್ನು ವಿಡಿಯೋ ಮಾಡಿ ವಿಕೃತ ಖುಷಿ ಅನುಭವಿಸಿದ್ದಾರೆ. ಆದರೆ, ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಸಂಸದ ಪ್ರಜ್ವಲ್, ನಿತ್ಯಾನಂದ ಸ್ವಾಮಿ ದೇಶಕ್ಕೆ ಸೇರಲು ಪ್ರಯತ್ನಿಸುತ್ತಿದ್ದಾರೆ; ಮೈಸೂರು ಲಕ್ಷ್ಮಣ್!

ವಿಡಿಯೋ ಅಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರಿಗೆ ಒಟ್ಟು ಐವರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಕಲಬುರಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಸ್ಥಳೀಯ ಜನರು ಕೂಡ ಆರೋಪಿಗಳೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹ ಮಾಡಿದ್ದಾರೆ.

click me!